‘ಶಿಕ್ಷಕ’ ನ ಮೇಲೆ PSI ದಬ್ಬಾಳಿಕೆ ಎಲ್ಲಿದ್ದಿರಾ ಶಿಕ್ಷಕರ ಸಂಘಟನೆಯ ನಾಯಕರೇ ಒಮ್ಮೆ ನೋಡಿ…..

ಬೆಳಗಾವಿ –

ಯುವ ಬರಹರಗಾರ ಕವಿ ಹಾಗೂ ಮುಖ್ಯಶಿಕ್ಷಕ ರೊಬ್ಬರ ಮೇಲೆ ಜಿಲ್ಲೆಯ ರಾಯಬಾಗ ಠಾಣೆಯ ಪಿಎಸ್‌ಐ ಅವಾಚ್ಯ ಶಬ್ದ ಬಳಸಿದ ಆರೋಪ ಕೇಳಿ ಬಂದಿದೆ.ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ್‌ ನಗರ ಕನ್ನಡ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಪಿಎಸ್‌ಐ ನಡೆಯನ್ನು ತೀವ್ರವಾಗಿ ಖಂಡಿಸಿ ಸಾಮಾ ಜಿಕ ಜಾಲತಾಣ ‘ಫೇಸ್‌ಬುಕ್‌’ ಪುಟದಲ್ಲಿ ಬರೆದು ಕೊಂಡಿದ್ದಾರೆ.

‘ನಮ್ಮ ಶಾಲೆಗೆ ಬರುತ್ತಿದ್ದ ಕೆಲಸಗಾರರ ದ್ವಿಚಕ್ರ ವಾಹನವನ್ನು ಪೊಲೀಸರು ತಡೆದಿದ್ದರು.ಶಾಲೆಯ ಕೆಲಸಕ್ಕೆ ಹೋಗುತ್ತಿರುವುದಾಗಿ ವಿನಂತಿಸಿದ್ದಕ್ಕೆ ಪರವಾನಗಿ ತೋರಿಸಿ ವಾಹನ ಒಯ್ಯಿರಿ ಎಂದು ಸಿಪಿಐ ಹೇಳಿದ್ದರು.ಅದರಂತೆ ನಾವು ದಾಖಲೆಗಳನ್ನು ತೋರಿಸಲು ಹೋದಾಗ ಪಿಎಸ್‌ಐ ಅವಾಚ್ಯ ಶಬ್ದ ಪ್ರಯೋಗಿಸಿದರು. ಶಿಕ್ಷಕನಾದ ನಾನು ಅದಕ್ಕೆ ಅರ್ಹನೇ?’ ಎಂದು ಪೋಸ್ಟ್ ಮಾಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಬಿ.ಆರ್.ರವಿಕಾಂತೇ ಗೌಡ ಅವರನ್ನು ಟ್ಯಾಗ್ ಮಾಡಿದ್ದಾರೆ.ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ಪೊಲೀಸರ ನಡೆಯ ವಿರುದ್ಧ ಅಸಮಾಧಾನ ಹಾಗೂ ಟೀಕೆ ವ್ಯಕ್ತಪಡಿಸಿ ದ್ದಾರೆ. ಮೈಸೂರಿನ ವಕೀಲ ಪಿ.ಜೆ. ರಾಘವೇಂದ್ರ ಅವರು ವೀರಣ್ಣ ಅವರು ಸರ್ಕಾರಿ ಶಾಲೆ ಅಭಿವೃದ್ಧಿ ಗೆ ಕೈಗೊಂಡಿರುವ ವರದಿಯನ್ನು ಲಗತ್ತಿಸಿ ಫೇಸ್‌ ಬುಕ್‌ನಲ್ಲಿ ಜಿಲ್ಲಾ ಪೊಲೀಸರಿಗೆ ಟ್ಯಾಗ್ ಮಾಡಿ ದ್ದಾರೆ. ಪಿಎಸ್‌ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

One thought on “‘ಶಿಕ್ಷಕ’ ನ ಮೇಲೆ PSI ದಬ್ಬಾಳಿಕೆ ಎಲ್ಲಿದ್ದಿರಾ ಶಿಕ್ಷಕರ ಸಂಘಟನೆಯ ನಾಯಕರೇ ಒಮ್ಮೆ ನೋಡಿ…..

  • 19 June 2021 at 5:45 am
    Permalink

    ಶಿಕ್ಷಕರಿಂದ ಶಿಕ್ಷಣವನ್ನು ಪೂರೈಸಿರುವವರು ಶಿಕ್ಷಕರೊಂದಿಗೆ ನಡೆದುಕೊಳ್ಳುವ ರೀತಿನೋಡಿದರೆ ನೈತಿಕತೆಗೆ ಬೆಲೆ ಎಲ್ಲಿದೆ.ತಪ್ಪಿತಸ್ಥರ ವಿರುದ್ಧ ಇಲಾಖ ಮುಖ್ಯಸ್ಥರು ಕ್ರಮ ಕೈಗೊಳ್ಳಿ.

    Reply

Leave a Reply

Your email address will not be published. Required fields are marked *

error: Content is protected !!
%d bloggers like this: