ಇಂಡಿ –
ಶಿಕ್ಷಕ MD ಬೈರಾಮಡಗಿ ಇನ್ನೂ ನೆನಪು ಮಾತ್ರ – ಆಸ್ಪತ್ರೆಯಲ್ಲಿ ನಿಧನರಾದ ಶಿಕ್ಷಕನಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ ಕಂಬನಿ ಹೌದು
ಚಿಕಿತ್ಸೆ ಫಲಿಸದೇ ಹಿರಿಯ ಶಿಕ್ಷಕರೊಬ್ಬರು ನಿಧನರಾಗಿದ್ದಾರೆ.ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಮಸಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಎಮ್ ಡಿ ಬೈರಾಮಡಗಿ ಯವರೇ ನಿಧನರಾದ ಶಿಕ್ಷಕರಾದವರಾಗಿದ್ದಾರೆ.ಒಳ್ಳೆಯ ಸ್ನೇಹಜೀವಿಗ ಳಾಗಿದ್ದ ಎಂ ಡಿ ಭೈರಾಮಡಗಿ ಇವರು ಆಸ್ಪತ್ರೆ ಯಲ್ಲಿ ಅಕಾಲಿಕವಾಗಿ ಆಸ್ಪತ್ರೆಯಲ್ಲಿ ನಿಧನ ರಾಗಿದ್ದಾರೆ.
ಅವರ ನಿಧನದ ಸುದ್ದಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದ್ದು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ತಾಲ್ಲೂಕಿನ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಕುಟುಂ ಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿ ಸಲಿ ಎಂದು ಬೇಡಿಕೊಂಡಿದ್ದಾರೆ ಇಬ್ಬರು ಸುಪುತ್ರರು ಮತ್ತು ಒರ್ವ ಸುಪುತ್ರಿಯನ್ನು ಅಗಲಿದ್ದು ಮೃತರ ಅಂತ್ಯಕ್ರಿಯೆ ಸ್ವಗ್ರಾಮ ತಾಂಬಾ ಗ್ರಾಮದಲ್ಲಿ ನಡೆಯಲಿದೆ.
ಬೈರಾಮಡಗಿ ಯವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ತೀವ್ರವಾದ ಸಂತಾಪವನ್ನು ಸೂಚಿಸಿದ್ದು ಇಂಡಿ ತಾಲ್ಲೂಕಿನ ಶಿಕ್ಷಕ ಬಂಧುಗಳು ಕೂಡಾ ಕಂಬನಿಯನ್ನು ಮಿಡಿದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಇಂಡಿ…..