ಬೆಂಗಳೂರು –
ಎಸ್ ಎಸ್ ಎಲ್ ಸಿ ಯ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ವೇಳೆ ಮೈಸೂರಿನ ಮೌಲ್ಯಮಾಪನ ಕೇಂದ್ರವೊಂದರಲ್ಲಿ ಬೆಳಕಿಗೆ ಬಂದ ಪರೀಕ್ಷಾ ಅಕ್ರಮವೊಂದಕ್ಕೆ ಸಂಬಂಧಿಸಿ ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರೊಬ್ಬರನ್ನು ಅಮಾನತು ಮಾಡಲಾಗಿದೆ
ಹೌದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಯರಝರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಆರ್.ಎ. ಮೇರೆ ಕೋರ ಅವರನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರ (ಪರೀಕ್ಷೆಗಳು) ಸೂಚನೆ ಮೇರೆಗೆ ವಿಜಯಪುರ ಡಿಡಿಪಿಐ ಉಮೇಶ ಶಿರಹಟ್ಟಿಮಠ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ
ಮುದ್ದೇಬಿಹಾಳದ ಅಭ್ಯುದಯ ಇಂಟರ್‌ನ್ಯಾಶನಲ್ ಸ್ಕೂಲ್‌ನ SSLC ಪೂರಕ ಪರೀಕ್ಷೆ ಕೇಂದ್ರದಲ್ಲಿ ಜೂ.27ರಿಂದ ಜು.4ರ ವರೆಗೆ ಪರೀಕ್ಷೆಗಳು ನಡೆದಿದ್ದವು. ಅಲ್ಲಿ ಅಕ್ರಮ ನಡೆದಿತ್ತು ಎಂಬ ಆರೋಪ ಕೇಳಿ ಬಂದಿತ್ತು