ಚಿಕ್ಕಜಾಜೂರು –
ರಸ್ತೆ ಅಪಘಾತದಲ್ಲಿ ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಜಾಜೂರಿನಲ್ಲಿ ನಡೆದಿದೆ ಅಕ್ಷರ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್. ದಿವಾಕರ್ (40) ಮೃತರಾದ ಶಿಕ್ಷಕ ರಾದವರಾಗಿದ್ದಾರೆ.
ಸ್ವಗ್ರಾಮ ಹೊಳಲ್ಕೆರೆ ತಾಲ್ಲೂಕಿನ ಆರ್. ನುಲೇನೂರಿ ನಿಂದ ದಾವಣಗೆರೆ ತಾಲ್ಲೂಕಿನ ಎಚ್. ಬಸವಾಪುರದ ಲ್ಲಿದ್ದ ಪತ್ನಿ ಕವಿತಾ ಹಾಗೂ ಎರಡೂವರೆ ತಿಂಗಳ ಅವಳಿ ಮಕ್ಕಳನ್ನು ನೋಡಲು ತಮ್ಮ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ಚಿಕ್ಕಜಾಜೂರು ಸಮೀಪದ ಬಾಣಗೆರೆ ಹೊರಲವಲಯದಲ್ಲಿ ಚಿಕ್ಕಜಾಜೂರು ಕಡೆಯಿಂದ ಎದುರಿಗೆ ಬಂದ ಬೊಲೆರೋ ವಾಹನದ ಟೈರ್ ಸಿಡಿದು, ದಿವಾಕರ್ ಇದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಹೆಲ್ಮೆಟ್ ಧರಿಸಿದ್ದರೂ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಗಾಯಗೊಂಡು ಅವರು ಮೃತಪಟ್ಟಿದ್ದಾರೆ.ಚಿಕ್ಕ ಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕಜಾಜೂರು…..