ಬೆಂಗಳೂರು –
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯು ಸೋಮವಾರ ರಾಜ್ಯದಲ್ಲಿ ಆರಂಭವಾಗಿದ್ದು, ಬ್ಲಾಕ್‌ಗಳನ್ನು ರಚಿಸಿ, ಪ್ರತಿ ಶಿಕ್ಷಕರನ್ನು ಗಣತಿಗೆ ನಿಯೋಜಿಸಲಾಯಿತು. ಮೊದಲ ದಿನದ ಸಮೀಕ್ಷೆ ಗೊಂದಲದಿಂದ ಕೂಡಿತ್ತು.
ಸಮೀಕ್ಷೆ ಮಾಡುವ ಗಣತಿದಾರರ ಪಟ್ಟಿಯು ಬೆಳಿಗ್ಗೆ 11.30ಕ್ಕೆ ಪ್ರಕಟಗೊಂಡಿದ್ದು, ಪ್ರತಿ ಶಿಕ್ಷಕರಿಗೆ 150 ಮನೆಗಳ ಸಮೀಕ್ಷೆ ವಹಿಸಲಾಗಿತ್ತು.
ಕಿಟ್ ವಿತರಣೆ ಮಧ್ಯಾಹ್ನದವರೆಗೂ ನಡೆಯಿತು. ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಗಳ ಬದಲು ಬೇರೆಡೆ ನಿಯೋಜಿಸಿರುವುದು, ನಗರದಲ್ಲಿನ ಸಮೀಕ್ಷೆ ನಡೆಸು ವವರಿಗೆ 150 ಹಾಗೂ ಗ್ರಾಮೀಣ ಭಾಗದಲ್ಲಿ 250 ಮನೆ ನಿಗದಿ ಮಾಡಿರುವುದು ಶಿಕ್ಷಕರ ಆಕ್ಷೇಪಕ್ಕೂ ಕಾರಣ ವಾಯಿತು.
ನೆಟ್‌ವರ್ಕ್ ಸಮಸ್ಯೆ ‘ಜಿಯೊಟ್ಯಾಗ್ ಆಧರಿಸಿ ಸಮೀಕ್ಷೆ ಮಾಡಲಾಗುವುದರಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆ ನಡೆಸುವುದಕ್ಕೆ ಕಷ್ಟವಾಯಿತು. ನೆಟ್ ವರ್ಕ್ ಸೇರಿದಂತೆ ಆಯಪ್‌ನಲ್ಲಿ ತಾಂತ್ರಿಕ ಸಮಸ್ಯೆಯೂ ಕಾಣಿಸಿಕೊಂಡಿತ್ತು’ ಎಂದು ಶಿಕ್ಷಕರೊಬ್ಬರು ತಿಳಿಸಿದರು
ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಶಿಕ್ಷಕರನ್ನು ಗಣತಿ ಕಾರ್ಯದಿಂದ ಹಲವು ಜಿಲ್ಲೆಗಳಲ್ಲಿ ಕೈಬಿಟ್ಟಿದ್ದರೂ, ಜಿಲ್ಲೆಯಲ್ಲಿ ಮಾತ್ರ ಸಮೀಕ್ಷೆ ಮಾಡಲು ಶಿಕ್ಷಕರನ್ನು ನಿಯೋಜಿಸಲಾಗಿದೆ. ಇದೇ ತಿಂಗಳು ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ಆಯೋಗ ತರಬೇತಿ ನಡೆಯಲಿದೆ. ಹೀಗಾಗಿ ತೊಂದರೆ ಆಗಿದೆ’ ಎಂದು ಶಿಕ್ಷಕರೊಬ್ಬರು ಹೇಳಿದರು.
‘ಸಮೀಕ್ಷೆಯು ಆರಂಭವಾಗಿದ್ದು, ಪ್ರತಿ ಮನೆಯ ಗಣತಿ ಪೂರ್ಣಗೊಳಿಸಲು ಸುಮಾರು 35 ನಿಮಿಷ ಆಗಲಿದೆ. ಡಿಜಿಟಲ್ ಗಣತಿ ಇದಾಗಿದೆ. ಜಿಯೊ ಲೊಕೇಶನ್ ಆಧರಿಸಿದ ಗಣತಿ ಆದ್ದರಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಗಣತಿ ಕಷ್ಟವಾಗಿದೆ. ಆಯಪ್ ಬಳಕೆಯಲ್ಲಿನ ತೊಂದರೆ ನಿವಾರಣೆಗೆ ಕ್ರಮ ವಹಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರ ಹೇಳಿದ್ದು ಇತ್ತ ರಜೆ ಯಲ್ಲಿ ಶಿಕ್ಷಕರು ಪರದಾಡುತ್ತಿದ್ದು ಇದ್ಯಾವ ಶಿಕ್ಷೆ ಎಂಬ ಮಾತುಗಳು ಕೇಳಿ ಬರತಾ ಇವೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……