ಧಾರವಾಡ –
ಮಕ್ಕಳಿಗೆ ಸ್ಪಷ್ಟ ಓದು ಶುದ್ಧ ಬರಹದ ಕಡೆಗೆ ಶಿಕ್ಷಕರು ಗಮನಹರಿಸಿ ಡಾ ಈಶ್ವರ ಉಳ್ಳಾಗಡ್ಡಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಸ್ಪಷ್ಟವಾಗಿ ಓದು ಬರಹ ಸಾಮರ್ಥ್ಯ ಗಳಿಸಲು ಶಿಕ್ಷಕರು ಗಮನಹರಿಸಬೇಕು, ಈ ಸಲ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 76% ರಷ್ಟು ಸಾಧನೆ ಮಾಡಿದ ಧಾರವಾಡ ಗ್ರಾಮೀಣ ವಲಯದ ಎಲ್ಲ ಶಿಕ್ಷಕರ ಕಾರ್ಯ ಶ್ಲಾಘನೀಯ, ರಾಜ್ಯಕ್ಕೆ 11 ನೆಯ ರಾಂಕ್ ಪಡೆದಿದ್ದ ರಿಂದ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವೆ ಎಂದು ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಹೇಳಿದರು,
ಧಾರವಾಡದ ಲಿಂಗಾಯತ ಭವನದಲ್ಲಿ, ಧಾರವಾಡ ಗ್ರಾಮೀಣ ವಲಯದ ಶಿಕ್ಷಕರ ದಿನಾಚರಣೆ ಕಾರ್ಯ ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶಿಕ್ಷಕರು ಮಕ್ಕಳಿಗೆ ಓದುವುದನ್ನು ಮತ್ತು ಬರೆಯುವ ರೂಢಿ ಯನ್ನು ಹೆಚ್ಚಿಸಬೇಕು, ಜೊತೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಧಾರವಾಡ ಗ್ರಾಮೀಣ ತಾಲ್ಲೂಕು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 11 ನೆಯ ಸ್ಥಾನದಲ್ಲಿ ಇರುವುದು ಶ್ಲಾಘನೀಯ, ಪ್ರಸ್ತುತ ವರ್ಷ100 ಕ್ಕೆ ನೂರರಷ್ಟು ಸಾಧನೆ ಮಾಡಲು ಸೂಚಿಸಿದರು,
ಇಲಾಖೆಯ 29 ಅಂಶಗಳ ಕಾರ್ಯಕ್ರಮ LBA, ಮತ್ತು FLN ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಶಿಕ್ಷಕರಿಗೆ ಕರೆ ನೀಡಿದರು, ಉಪನ್ಯಾಸಕರಾಗಿ ಆಗಮಿಸಿದ್ದರ ಅಶೋಕ ಹಂಚಲಿ ರವರು ಮಾತನಾಡಿ ಭಾರತ ದೇಶದಲ್ಲಿ ಹೆಚ್ಚಿನ ಸ್ಥಾನ ಮಾನ ಗೌರವವನ್ನು ಗುರುಗಳಿಗೆ ಮಾತ್ರ ಕೊಡುತ್ತಿದ್ದು, ಧಾರವಾಡ ಗ್ರಾಮೀಣ ಶಿಕ್ಷಕರ ಸಾಧನೆ ಕುರಿತು ಪ್ರಶಂಸೆ ಮಾಡಿ ಮಾರ್ಮಿಕವಾಗಿ ಮಾತನಾಡಿದರು,
ಧಾರವಾಡ ತಾಲೂಕಿನ ತಹಶಿಲ್ದಾರರಾದ ಹೂಗಾರವರು ಶಿಕ್ಷಕರನ್ನು ಉದ್ದೇಶಿಸಿ ಧಾರವಾಡ ಗ್ರಾಮೀಣವಲಯದ ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿದ್ದು, ನನ್ನ ಮುಂದಾಳತ್ವದಲ್ಲಿ ತಾಲೂಕಿನ ಶೈಕ್ಷಣಿಕ ಪ್ರಗತಿ ಯನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 11 ಸ್ಥಾನ ಬಂದಿರುವುದು, ಹಾಗೂ NMMS ಪರೀಕ್ಷೆಯಲ್ಲಿ ಧಾರವಾಡ ತಾಲ್ಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು,
ಒಬ್ಬ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ ಬಂದಿರುವ ಕುರಿತು ಮಾತನಾಡಿ ಈ ಎಲ್ಲಾ ಸಾಧನೆಗೆ ಶಾಸಕರಾದ ವಿನಯ ಕುಲಕರ್ಣಿ ಅವರ ಮಾರ್ಗದರ್ಶನ, ಹಾಗೂ ಪ್ರೇರಣೆ ಕಾರಣ ಎಂದು ಮಾತನಾಡಿ ಸಾಧನೆ ಮಾಡಿದ ಸರ್ವ ಶಿಕ್ಷಕರನ್ನು ಕೊಂಡಾಡಿದರು. ನಿವೃತ್ತ ಬಿಇಒ ಶ್ರೀಶೈಲ ಕರಿಕಟ್ಟಿ ಧಾರವಾಡ ಗ್ರಾಮೀಣ ಸಮನ್ಯಯಾಧಿಕಾರಿ ಕುಮಾರ ಕೆ ಎಫ್ ದೈಹಿಕ ಶಿಕ್ಷಣ ಪರವೀಕ್ಷಕರಾದ ಈಶ್ವರ ಆಯಟ್ಟಿ ಶಿಕ್ಷಕರ ಸಂಘಟನೆಗಳ ಪ್ರಮುಖರಾದ ನಾರಾಯಣ ಭಜಂತ್ರಿ, ರಾಜಶೇಖರ ಹೊನ್ನಪ್ಪನವರ ಅಜೀತ ದೇಸಾಯಿ ಅರ್ಜುನ ದೊಡಮನಿ ರಾಜು ಮಾಳವಾಡ ಶಂಕರ್ ಗಟ್ಟಿ ಚಂದ್ರಶೇಖರ ತಿಗಡಿ,ಎಲ್ ಐ ಲಕ್ಕಮ್ಮನವರ ಧಾರವಾಡ ಗ್ರಾಮೀಣ ತಾಲೂಕಿನ ಎಲ್ಲ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಾಲೂಕಿನ ಎಲ್ಲಾ ಸಿ ಆರ್ ಪಿ ಬಿ ಆರ್ ಪಿ ಹಾಗೂ ಕಚೇರಿ ಸಿಬ್ಬಂದಿಯವರು ಹಾಜರಿದ್ದರು, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಾಗೂ ನಿವೃತ್ತ ಶಿಕ್ಷಕರರಿಗೆ ಸತ್ಕರಿಸಿ ಗೌರವಿಸಲಾಯಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..