ಬೆಂಗಳೂರು –
ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಂದುವರಿದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಯಾವ ಪಾಠವನ್ನು ಬೋಧಿಸಬೇಕು ಮತ್ತು ಯಾವ ಪಾಠವನ್ನು ಬೋಧಿಸಬಾರದು ಎನ್ನುವ ಬಗ್ಗೆ ಶಿಕ್ಷಕರಲ್ಲಿ ಗೊಂದಲ ಮೂಡಿವೆ.ಈ ಮಧ್ಯೆ ಜನಾಭಿ ಪ್ರಾಯ ಮೊರೆ ಹೋಗಿರುವ ಶಿಕ್ಷಣ ಇಲಾಖೆ ಪಠ್ಯವನ್ನು ಮರು ಮುದ್ರಿಸದೇ ಸರಿಪಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ಲೋಪವಾದ ಪಾಠಗಳನ್ನಷ್ಟೇ ಪ್ರತ್ಯೇಕವಾಗಿ ಮುದ್ರಿಸಿ ಮಕ್ಕಳಿಗೆ ನೀಡುವ ಯೋಜನೆ ರೂಪಿಸಿದೆ.ಆದರೆ ಹೆಚ್ಚಿನ ಭಾಗ ತಪ್ಪು ಕಂಡುಬಂದಿರುವುದರಿಂದ ಹೇಗೆ ಪಾಠಗಳನ್ನು ಮಾರ್ಪಡಿಸುವುದು.ಪರ್ಯಾಯ ಪಠ್ಯ ಮುದ್ರಿಸಿ ನೀಡು ವುದು ಹೇಗೆ ಎನ್ನುವ ಗೊಂದಲ ಸರ್ಕಾರಕ್ಕೂ ಕಾಡಿದೆ. ಮರುಮುದ್ರಣಕ್ಕೆ ಮುಂದಾದರೆ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೊರೆ ಬೀಳುತ್ತದೆ.ಈಗಾಗಲೆ ರೋಹಿತ್ ಚಕ್ರ ತೀರ್ಥ ಸಮಿತಿ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ಮುದ್ರಣಕ್ಕೆ ಅಂದಾಜು 158 ಕೋಟಿ ರೂ.ಖರ್ಚಾಗಿದೆ ಎನ್ನಲಾಗಿದೆ. ಪುಸ್ತಕ ಮತ್ತೆ ಮರು ಮುದ್ರಣ ಮಾಡುವ ನಿರ್ಧಾರ ತೆಗೆದುಕೊಂಡರೆ ಅಷ್ಟೇ ಹಣ ಖರ್ಚಾಗುತ್ತದೆ. ಈಗಾಗಲೆ ರಾಜ್ಯದಲ್ಲಿ ಶಾಲೆಗಳು ಶುರುವಾಗಿದ್ದು ಒಂದ ರಿಂದ ಹತ್ತನೇ ತರಗತಿಯ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ.ಈ ನಡುವೆ ಮತ್ತೆ ಮರು ಮುದ್ರಣ ಮಾಡಿ ದರೆ ಕೆಲ ಸಮಸ್ಯೆಗಳು ಎದುರಾಗುತ್ತವೆ.
ಇನ್ನೂ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಪರಿಷ್ಕರಣೆಗೂ ಹಾಗೂ ರೋಹಿತ್ ಚಕ್ರತೀರ್ಥ ನೇತೃತ್ವ ದಲ್ಲಿ ನಡೆದ ಪರಿಷ್ಕರಣೆಗೂ ಅಂತಹ ಬದಲಾವಣೆಯಿಲ್ಲ. ಕೇವಲ ಎರಡು ಸಾಲಿನ ಬದಲಾವಣೆ ಅಷ್ಟೇ.ಈ ಹಿಂದಿನ ಪಠ್ಯ ಪುಸ್ತಕದಲ್ಲಿ ಬಸವಣ್ಣ ಉಪನಯನ ಆದ ಮೇಲೆ ಜನಿವಾರ ಕಿತ್ತು ಹಾಕಿ ಹೋದರು ಅಂತಾ ಇತ್ತು.ಈಗಿನ ಪಠ್ಯ ಪುಸ್ತಕದಲ್ಲಿ ಉಪನಯನವಾದ ಮೇಲೆ ಹೋದರು ಎಂದಿದೆ.ಮತ್ತೊಂದು ವಿಷಯವೆಂದರೆ ಬಸವಣ್ಣ ವೈದಿಕ ಸಂಸ್ಕೃತಿಗಳ ನೀಚ ಪದ್ಧತಿಗಳನ್ನು ವಿರೋಧಿಸಿದರು ಎಂದು ಇತ್ತು.ನೀಚ ಪದ್ಧತಿ ಎಂಬ ಪದವನ್ನು ಬಸವಣ್ಣ ಅಂತಹವರಿಗೆ ಬಳಕೆ ಮಾಡಬಾರದು ಎಂಬುದು ಪರಿಷ್ಕ ರಣಾ ಸಮಿತಿಯ ಅಭಿಪ್ರಾಯವಾಗಿತ್ತು.ಹೀಗಾಗಿ ನೀಚ ಎಂಬ ಪದವನ್ನು ತೆಗೆದು ಹಾಕಿದ್ದೇವೆ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.ಬಸವಣ್ಣ ಇರುವ ವ್ಯವಸ್ಥೆಯನ್ನು ಸರಿಪಡಿಸಲು ಮನೆ ಬಿಟ್ಟು ಹೋಗಿದ್ದಾರೆ.ಬಸವಣ್ಣ ನೀಚ ಮತ್ತು ಉಚ್ಚ ಪದಗಳನ್ನು ಬಳಕೆ ಮಾಡಿರಲಿಲ್ಲ ಎಂದು ಸಮಿತಿಯವರ ಅಭಿಪ್ರಾಯವಾಗಿದೆ.ಇದಕ್ಕೆ ಆಕ್ಷೇಪಣೆ ಗಳು ಕೇಳಿಬಂದ ಹಿನ್ನೆಲೆಯಲ್ಲಿ ಉಪನಯನ ಮತ್ತು ಲಿಂಗ ದೀಕ್ಷೆ ಬಗ್ಗೆ ತೆಗೆಯಲು ಮುಂದಾಗಿದ್ದೇವೆ.ಇದಕ್ಕೂ ಕೂಡ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿ ಬರಗೂರು ರಾಮಚಂ ದ್ರಪ್ಪ ಸಮಿತಿ ಮಾಡಿದ್ದು ಕೂಡ ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ.ಮುಂದೆ ಏನಾಗುತ್ತೊ ಗೊತ್ತಿಲ್ಲ.ಕಳೆದ 5 ವರ್ಷ ಅದೇ ಪಠ್ಯ ಪುಸ್ತಕವಿತ್ತು ಅಂದು ಯಾರದ್ದು ಕೂಡ ವಿರೋಧ ಇರಲಿಲ್ಲ.ಆದರೆ ಇಂದು ಪಠ್ಯ ಪುಸ್ತಕ ವಿವಾದ ರಾಜಕೀಯ ತಿರುವು ಪಡೆದುಕೊಂಡಿದ್ದು, ಈ ಕಾರಣಕ್ಕಾಗಿ ವಿರೋಧ ಮಾಡ ಲಾಗುತ್ತಿದೆ. ಬಸವಣ್ಣನ ಒಂದು ಪಾಠದ ಬಗ್ಗೆ ಮಾತ್ರ ಗೊಂದಲವಿದೆ.ಉಳಿದ 677 ಪಾಠಗಳಲ್ಲಿ ಗೊಂದಲವಿಲ್ಲ.ಆ ಪಾಠ ಮಾಡುವ ಸಮಯ ಡಿಸೆಂಬರ್ ಅಥವಾ ಜನವರಿಗೆ ಬರಲಿದೆ ಅಷ್ಟರ ಹೊತ್ತಿಗೆ ಎಲ್ಲ ಗೊಂದಲ ಮುಗಿಯಲಿವೆ.