ಧಾರವಾಡ –
ಸಧ್ಯ ರಾಜ್ಯದಲ್ಲಿ ರಾಜ್ಯ ಸರ್ಕಾರದ ಸೂಚನೆ ಯಂತೆ ಜಾತಿ ಗಣತಿ ಸಮೀಕ್ಷಾ ಕಾರ್ಯ ನಡೆಯುತ್ತಿದೆ ಈ ಒಂದು ಕಾರ್ಯದಲ್ಲಿ ಶಿಕ್ಷಕರು ತೊಡಗಿಕೊಂಡಿದ್ದಾರೆ ಇತ್ತ ಈ ಒಂದು ಗೊತ್ತಿದ್ದರೂ ಕೂಡಾ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಕ್ರೀಡಾಕೂಟ ಗಳನ್ನು ಮುಂದೂಡದೆ ನಡೆಸುತ್ತಿದೆ ಹೌದು
ಜಿಲ್ಲಾವಾರು 600 ಕ್ಕೂ ಹೆಚ್ಚು ಜನ.. ಕ್ರೀಡಾಪಟುಗಳು ವಿವಿಧ ಗುಂಪಿನಲ್ಲಿದ್ದಾರೆ.. ಆದರೆ ಟ್ರ್ಯಾಕ್ ಶೂಟಿಗಾಗಿ.. ಆನ್ಲೈನ್ ನೊಂದಣಿ ಮಾಡಿ.. ನೈಜ ಕ್ರೀಡಾಪಟುಗಳಿಗೆ… ಸಾಧನೆ ಮಾಡಲು.. ಅವಕಾಶ ಮಾಡಿಕೊಡದೇ ಇರುವ ಸಂಘಕ್ಕೆ ದಿಕ್ಕಾರದ ಮಾತುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಶಿಕ್ಷಕ ರಿಂದ ಕೇಳಿ ಬರುತ್ತಿವೆ
ನಿಮ್ಮ ಸ್ವಾರ್ಥಕ್ಕಾಗಿ ಸಾಧನೆ ಮಾಡುವ ಕ್ರೀಡಾ ಪಟುಗಳನ್ನು…. ಕೇವಲ ಟ್ರ್ಯಾಕ್ ಶೂಟಿಗಾಗಿ ಮಾತ್ರ ಅಳತೆ ಮಾಡಬೇಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಒಟ್ಟು ಸ್ಪರ್ಧಾರ್ಥಿ ಗಳಲ್ಲಿ ಶೇಕಡ 50ರಷ್ಟು ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಶಿಕ್ಷಕ ಶಿಕ್ಷಕಿಯರಿದ್ದಾರೆ
ಇವರೆಲ್ಲರೂ ಪರಿಶಿಷ್ಟ ಜಾತಿ ಜನಗಣತಿ ಸಮೀಕ್ಷಾ ಕಾರ್ಯದಲ್ಲಿ ದ್ದಾರೆ ಈ ಕಾರ್ಯದ ಅವಧಿ ವಿಸ್ತರಣೆ ಯು ಆಗಿದೆ ಈ ವಿಷಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಿಗೂ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳ ಗಮನಕ್ಕೆ ಬಂದಿಲ್ಲ ವೇ ಎಂದು ಪ್ರಶ್ನೆ ಮಾಡಿದ್ದಾರೆ
ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಶಿಕ್ಷಕರು ಮತ್ತು ಶಿಕ್ಷಕಿಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಇವರಿಗೆ ಬೇಕಾಗಿಲ್ಲ ಇದು ವಿಪರ್ಯಾಸ ಮತ್ತು ಅತ್ಯಂತ ಖಂಡನೀಯ ವೃಂದ ಸಂಘಗಳ ಅಧ್ಯಕ್ಷರುಗಳನ್ನು ಕೇಳಿದರೆ ರಾಜ್ಯಾಧ್ಯಕ್ಷರಿಗೆ ಯಾರು ಮಾತನಾಡುವುದಿಲ್ಲ ಎಂಬ ಉತ್ತರ ಬರುತ್ತದೆ ಹೀಗಾದರೆ ಮಾತೃ ಸಂಘದ ನಡೆಯೇನು
ಯಾವ ಪುರುಷಾರ್ಥಕ್ಕಾಗಿ ಈ ರಾಜ್ಯ ಮಟ್ಟದ ಕ್ರೀಡಾ ಕೂಟ ಮುಂದಿನ ದಿನಗಳಲ್ಲಿ ನೌಕರರು ಇವರಿಗೆ ತಕ್ಕ ಪಾಠ ಕಲಿಸಲೇ ಬೇಕು ಇಂತಿ ನೊಂದ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕ ಶಿಕ್ಷಕಿಯರು ಪ್ರಾಮಾಣಿಕ ಸರ್ಕಾರಿ ಸೇವಕರು ಎಂಬ ನೋವಿನ ಸಂದೇಶ ಗಳನ್ನು ಹಾಕಿದ್ದು ಏನೇನಾಗಲಿದೆ ಎಂಬೊಂದನ್ನು ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್