ಬೆಂಗಳೂರು –
ಶಿಕ್ಷಕರಿಗಿಲ್ಲ ದಸರಾ ರಜೆ ಆರಂಭದಲ್ಲೇ ವಿರೋಧ ಆಕ್ರೋಶ ಹೌದು ಜಾತಿಗಣತಿಗೆ 1.50 ಲಕ್ಷ ಟೀಚರ್ಸ್ ಬಳಕೆಯನ್ನು ಮಾಡಲಾಗುತ್ತಿದ್ದು ರಾಜ್ಯ ಸರಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ ಹಿಂದುಳಿದ ವರ್ಗಗಳ ಆಯೋಗದ ರಾಜ್ಯದಲ್ಲಿ ಸೆ.22ರಿಂದ ಅ.7 ರವರೆಗೆ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳಲು ಸರಕಾರ ನಿರ್ಧರಿಸಿದೆ.
ಹೀಗಾಗಿ ಸರಕಾರಿ ಶಾಲಾ ಶಿಕ್ಷಕರು ಈ ವರ್ಷ ದಸರಾ ರಜೆಯಲ್ಲಿಯೂ ಕಾರ್ಯ ನಿರ್ವಹಿಸಬೇಕಾಗಿದೆ.ಆದರೆ, ಅದಕ್ಕೆ ತಕ್ಕಂತೆ ಗೌರವಧನವಾಗಲೀ, ಗಳಿಕೆ ರಜೆ ಯಾಗಲೀ ಸಿಗುತ್ತಿಲ್ಲ ಇದರಿಂದ ಶಿಕ್ಷಕರು ರೋಸಿ ಹೋಗಿದ್ದಾರೆ.ಶಾಲೆಗಳಿಗೆ ದಸರಾ ರಜೆ ಸೆ.20 ರಿಂದ ಅ.7 ರವರೆಗೆ ನಿಗದಿಯಾಗಿದೆ. ಆದರೆ, ಶಿಕ್ಷಕರಿಗೆ ರಜೆ ನೀಡದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಸಮೀಕ್ಷೆಗೆ ರಾಜ್ಯಾದ್ಯಂತ 1.50 ಲಕ್ಷ ಶಿಕ್ಷಕರನ್ನು ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಭಾಗವಹಿಸುವ ಶಿಕ್ಷಕರಿಗೆ ಸೆ.13 ರಿಂದ ಸೆ.19 ರವರೆಗೆ ತರಬೇತಿ ನಡೆಯಲಿದ್ದು, ಶಾಲಾ ಅವಧಿ ಮುಗಿದ ಬಳಿಕ ಸಂಜೆ 5 ಗಂಟೆ ನಂತರ ತರಬೇತಿ ನೀಡಲಾಗುತ್ತಿದೆ.
ಅನ್ಯ ಇಲಾಖೆಗಳ ಸಿಬ್ಬಂದಿಯು ರಜಾ ದಿನಗಳಲ್ಲಿ ಕೆಲಸ ಮಾಡಿದರೆ, ಗಳಿಕೆ ರಜೆ ಸೌಲಭ್ಯ ಸಿಗುತ್ತದೆ. ಶಿಕ್ಷಣ ಇಲಾಖೆಯಲ್ಲೂ ಗಳಿಕೆ ರಜೆ ನೀಡಬೇಕೆಂಬ ನಿಯಮ ವಿದ್ದರೂ ಅದು ಶಿಕ್ಷಕರಿಗೆ ದೊರಕುತ್ತಿಲ್ಲ 2024 ರಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳಾಗಿ (ಬಿಎಲ್‌ಒ) ಕಾರ್ಯ ನಿರ್ವಹಿಸಿದವರಿಗೆ ಈವರೆಗೆ ಗೌರವಧನ ಪಾವತಿಸಿಲ್ಲ.
ಇದು ಸಾಲದೆಂಬಂತೆ, ಸಮೀಕ್ಷೆ, ಚುನಾವಣೆ ಕಾರ್ಯ ಗಳನ್ನು ನಿರ್ವಹಿಸಿದವರಿಗೆ ಸಂಬಂಧಪಟ್ಟ ಪ್ರಾಧಿಕಾರ ಗಳು ಹಾಜರಾತಿ ಪ್ರಮಾಣಪತ್ರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ ಇದೆಲ್ಲ ದರ ನಡುವೆ ಮತ್ತೊಂದು ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರನ್ನು ಬಳಕೆ ಮಾಡಲಾಗುತ್ತಿದ್ದು ಆರಂಭದಲ್ಲೇ ಸಾಕಷ್ಟು ಪ್ರಮಾಣ ದಲ್ಲಿ ವಿರೋಧ ಆಕ್ರೋಶ ವ್ಯಕ್ತವಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..