ರಾಯಭಾಗ –
ಒಂದೇ ವಾರದಲ್ಲಿ ಸಾಮಾಜಿಕ -ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕರಿಬ್ಬರು ಮೆಚ್ಚುಗೆ ಗೆ ಪಾತ್ರ ರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನಲ್ಲಿ ನಡೆದಿದೆ.ತಾಲ್ಲೂಕಿನ ನಿಡಗುಂದಿ ಮತ್ತು ಸವಸುದ್ದಿ ಗ್ರಾಮಗಳ ಇಬ್ಬರು ಶಿಕ್ಷಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಒಂದೇ ವಾರದಲ್ಲಿ ಪೂರ್ಣಗೊಳಿಸಿದ್ದಾರೆ.
ನಿಡಗುಂದಿಯ ಸಿದ್ಧೇಶ್ವರ ನಗರದ ಸರ್ಕಾರಿ ಶಾಲೆಯ ಶೋಭಾ ಕೋಳಿ ಅವರು 79 ಮತ್ತು ಸವಸುದ್ದಿಯ ಸನದಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮರ ಪೂಜೇರಿ 77 ಕುಟುಂಬಗಳ ಸಮೀಕ್ಷೆ ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.ಹಲವು ತೊಡಕುಗಳನ್ನು ಇಬ್ಬರೂ ಶಿಕ್ಷಕರು ಸಮರ್ಥವಾಗಿ ಎದುರಿಸಿ ಸಮೀಕ್ಷೆ ಪೂರ್ಣಗೊಳಿಸಿ, ಇತರೆ ಶಿಕ್ಷಕರಿಗೆ ಮಾದರಿಯಾಗಿದ್ದಾರೆ

‘ಬೆಳಿಗ್ಗೆ 6 ರಿಂದ ರಾತ್ರಿ 9.30ರವರೆಗೆ ಸಮೀಕ್ಷೆ ಮಾಡುತ್ತಿದ್ದೆ. ಬೇಗ ಸಮೀಕ್ಷೆ ಆರಂಭಿಸುತ್ತಿದ್ದ ಕಾರಣ, ನೆಟ್‌ವರ್ಕ್ ಸಮಸ್ಯೆ ಅಷ್ಟಾಗಿ ಕಾಡಲಿಲ್ಲ’ ಎಂದು ಶಿಕ್ಷಕರು ಹೇಳಿದ್ದಾರೆ ಇನ್ನೂ ಶಿಕ್ಷಕರ ಈ ಒಂದು ಯಶಸ್ವಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ
ಸುದ್ದಿ ಸಂತೆ ನ್ಯೂಸ್ ರಾಯಭಾಗ…..