ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ಮತ್ತು ವಿವಿಧ ಆರೋಗ್ಯ ಕಾರಣಗಳಿಂದಾಗಿ ರಾಜ್ಯದ ಹಲವೆಡೆ ಇಂದು ಕೂಡಾ ಹತ್ತು ಜನ ಆದರ್ಶ ಶಿಕ್ಷಕರು ಮೃತ ರಾಗಿದ್ದಾರೆ.ಚುನಾವಣೆಯ ಕರ್ತವ್ಯ ಮುಗಿಸಿದ ನಂತರ ಮತ್ತು ಬೇರೆ ಬೇರೆ ಕಾರಣಗಳಿಂದ ಕೋವಿ ಡ್ ಸೋಂಕು ಕಾಣಿಸಿಕೊಂಡು ಹಾಗೇ ಅನಾರೋಗ್ಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯದ ವಿವಿದಡೆ ಹತ್ತು ಜನ ಶಿಕ್ಷಕರು ನಿಧನರಾಗಿದ್ದಾರೆ.ಇನ್ನೂ ಮೃತ ರಾದ ಶಿಕ್ಷಕ ಶಿಕ್ಷಕಿಯರ ಕುರಿತಂತೆ ನೊಡೊದಾದರೆ

ದೇಶಪಾಂಡೆ ಪ್ರಧಾನ ಗುರುಗಳು ಬೆಳಗಾವಿ ಜಿಲ್ಲೆ ಯ ಕಲ್ಲೋಳ ಬಾಲಕಿಯರ ಶಾಲೆ.ಇವರು ಕೋವಿ ಡ್ ನಿಂದಾಗಿ ಮೃತರಾಗಿದ್ದಾರೆ.ಸೋಂಕು ಕಾಣಿಸಿ ಕೊಂಡ ನಂತರ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಇಂದು ಮೃತರಾಗಿದ್ದಾರೆ.

ಸಣ್ಣಪಾಲಯ್ಯ ನೃಪತುಂಗ ಪ್ರೌಢ ಶಾಲೆ ಬೆಣಕಲ್ಲ ಕೊಪ್ಪಳ ಜಿಲ್ಲೆ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ. ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಿಸ ದೇ ನಿಧನರಾಗಿದ್ದಾರೆ.

ಎಚ್ ಶ್ರೀನಾಥ್ ಅಧೀಕ್ಷಕರು ಉಪನಿರ್ದೇಶಕ ಕಚೇರಿ ಶಿವಮೊಗ್ಗ ಇವರು ಕೂಡಾ ಚುನಾವಣೆಯ ಕರ್ತವ್ಯ ಮುಗಿಸಿದ ನಂತರ ಅನಾರೋಗ್ಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.ನಂತರ ನಾರಾ ಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಿಸದೇ ನಿಧನರಾಗಿ ದ್ದಾರೆ.

ಪ್ರಕಾಶ ಇಟಗಿ ಕೊಪ್ಪಳದ ಗಂಗಾವತಿ ತಾಲ್ಲೂಕಿನ ಲಮಾಣಿ ತಾಂಡಾದ ಶಿಕ್ಷಕರು ಇವರು ಕೂಡಾ ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊಪ್ಪಳದಲ್ಲಿ ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.

ಎಮೇರಿಟಾ ಉಸಾ ಪಾಯಸ ದಕ್ಷಿಣ ಕನ್ನಡ ಜಿಲ್ಲೆ ಯ ಜಿಲ್ಲಾಪಂಚಾಯತ ಮಾದರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರು ಕೂಡಾ ಮಹಾಮಾರಿಯಿಂದಾಗಿ ಮೃತರಾಗಿದ್ದಾರೆ.ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ

ಜಿನ್ನಪ್ಪ ದಂಡಾವತಿ ಇಲಕಲ್ಲ ತಾಲ್ಲೂಕಿನ ಪಶ್ಚಿಮ ಕ್ಲಸ್ಟರ್ನ ಸಿಆರ್ ಪಿ ಅಧಿಕಾರಿಯಾಗಿದ್ದ ಇವರು ಕರ್ತವ್ಯದ ಮೇಲಿದ್ದಾಗ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗದ್ದರು.ಚಿಕಿತ್ಸೆ ಫಲಿ ಸದೇ ನಿಧನರಾಗದ್ದಾರೆ ಕಳೆದ ಹತ್ತು ದಿನಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.

ಕ್ರಾಂತಿಕುಮಾರ್ ಜೈನ್ ಚಿಕ್ಕಬಳ್ಳಾಪೂರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಾವಿನ ಕಾಯಿನಹಳ್ಳಿ ಅರಸಾಲ ಬಂಡೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಇವರು ಕೂಡಾ ಆಸ್ಪತ್ರೆಯಲ್ಲಿ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ.

ಜಿ ಡಿ ಬಾಗಲಕೋಟೆ ದೈಹಿಕ ಶಿಕ್ಷಕರು ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ವಿಜಯಪುರ ಇವರು ಕೂಡಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಿಸದೇ ಇವರು ಕೂಡಾ ನಿಧನರಾಗಿದ್ದಾರೆ. ಆದರ್ಶ ಉತ್ತಮ ಮಾದರಿ ಶಿಕ್ಷಕರಾಗಿದ್ದ ಇವರು ನಿಧನದಿಂದಾಗಿ ಇಲಾಖೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.

ಶ್ರೀಮತಿ ಎಸ್ಎಸ್ ಕುಚನಾರು ವಿಜಯಪುರದ ಬನಶಂಕರಿ ತೋಟ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕಿಯಾಗಿದ್ದರು.ಸೋಂಕು ಕಾಣಿಸಿಕೊಂಡು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಶಿಕ್ಷಕಿ ನಿಧನರಾಗಿದ್ದಾರೆ.

ವೈ ಬಿ ಕರಭಾವಿ ವಿಜಯಪುರದ ತಾಳಿಕೋಟೆಯ ಗುತ್ತಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇವರು ಕೂಡಾ ಮಹಾಮಾರಿಗೆ ಬಲಿಯಾಗಿದ್ದಾರೆ. ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ. ಇವರು ನಿಧನಕ್ಕೆ ತಾಲ್ಲೂಕಿನ ಶಿಕ್ಷಕ ಬಳಗದವರು ಅಪಾರ ಬಳಗದವರು ಸಂತಾಪವನ್ನು ಸೂಚಿಸಿದ್ದಾರೆ.

ಇನ್ನೂ ನಾಡಿನಲ್ಲಿ ಮೃತರಾದ ಶಿಕ್ಷಕ ಶಿಕ್ಷಕಿಯರಿಗೆ ರಾಜ್ಯದ ತುಂಬೆಲ್ಲಾ ಶಿಕ್ಷಕರು ಇಲಾಖೆಯ ಅಧಿಕಾ ರಿಗಳು ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರು ಹಾಗೇ ನಾಡಿನ ಶಿಕ್ಷಕರು ಸಂತಾಪ ಸೂಚಿಸಿದ್ದಾರೆ ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವ ಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ,ದಾವಣಗೆರೆ ಸಿದ್ದೇಶ,ನಾಗರಾಜ ಕಾಮನ ಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪು ರ, ರಾಜೀವಸಿಂಗ ಹಲವಾಯಿ,ಕಾಶಪ್ಪ ದೊಡವಾ ಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖ ರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಸಂತಾಪ ಸೂಚಿಸಿ ದ್ದಾರೆ