ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಸಂಪುಟ ಸಭೆ – ವರದಿ ಅನುಷ್ಠಾನವನ್ನು ನಾಡದೊರೆಯ ಹೆಗಲಿಗೆ ಹಾಕಿದ ಸಚಿವ ಸಂಪುಟದ ಸಚಿವರು…..CM ಅಂಗಳದಲ್ಲಿ 7ನೇ ವೇತನ ಆಯೋಗದ ಚೆಂಡು…..
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ಕುರಿತಂತೆ ರಚನೆ ಮಾಡಲಾಗಿರುವ 7ನೇ ವೇತನ ಆಯೋಗವನ್ನು ಕೊನೆಗೂ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ.ಹೌದು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಒಂದು ಕುರಿತಂತೆ ಚರ್ಚೆಯನ್ನು ಮಾಡಿ ಜಾರಿಗೆ ತರುವ ಅಧಿಕಾರವನ್ನು ಸಚಿವ ಸಂಪುಟದ ಸರ್ವ ಸದಸ್ಯರು ಮುಖ್ಯಮಂತ್ರಿಯವರಿಗೆ ಅಧಿಕಾರ ವನ್ನು ನೀಡಿದರು.
ಇದರೊಂದಿಗೆ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ಸಿಹಿ ಸುದ್ದಿಯನ್ನು ನೀಡಲು ಸಿಎಂ ಮುಂದಾಗಿದ್ದಾರೆ. ನೌಕರರಿಗೆ ಶೇಕಡಾ 27ರಷ್ಟು ವೇತನ ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಮಾಹಿತಿ ಕೂಡಾ ತಿಳಿದು ಬಂದಿದೆ.ಇನ್ನೂ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಸಲಹೆಯನ್ನೂ ಮೀರಿ ವೇತನ ಹೆಚ್ಚಳ ಮಾಡಲು ಸಿಎಂ ಒಲವು ತೋರಿದ್ದಾರೆ.
ವೇತನ ಆಯೋಗದ ಶಿಫಾರಸುಗಳನ್ನು ಪೂರ್ಣ ಗೊಳಿಸುವ ಮಾತುಗಳನ್ನಾಡಿರುವ ಸಿಎಂ ಸಿದ್ದರಾಮಯ್ಯ 27%ರಷ್ಟು ವೇತನ ಹೆಚ್ಚಳ ಮಾಡಲು ಸೈ ಎಂದಿದ್ದಾರೆ.ನೌಕರರು ನಿರೀಕ್ಷೆ ಮಾಡಿದ ಹೆಚ್ಚಳ ಜಾರಿಯಾಗುವ ಸಾಧ್ಯತೆ ಯಿದ್ದು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಂಪುಟ ಸಭೆ ಸಿಎಂಗೆ ಬಿಟ್ಟಿದೆ
ಈ ಕುರಿತು ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಏಳನೇ ವೇತನ ಆಯೋಗ ಮಾರ್ಚ್ 16ರಂದು ಅಂತಿಮ ವರದಿ ಸಲ್ಲಿಸಿತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದ್ದ ಆಯೋಗ ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು
.ಸಧ್ಯ 7ನೇ ವೇತನ ಆಯೋಗದ ಅನುಷ್ಠಾನ ವಿಚಾರ ಮುಖ್ಯಮಂತ್ರಿಯವರ ಅಂಗಳದಲ್ಲಿದ್ದು ಇದನ್ನು ನಾಡದೊರೆ ಯಾವಾಗ ಆದೇಶ ಮಾಡಿಸುತ್ತಾರೆ ಎಂಬೊದನ್ನು ಇನ್ನೂ ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..