ಬೆಂಗಳೂರು –
ಮಹಾಮಾರಿ ಕೋವಿಡ್ ನಿಯಂತ್ರಣ ಮಾಡಲು ಈಗಾಗಲೇ ಜಾರಿ ಮಾಡಿರುವ ಲಾಕ್ ಡೌನ್ ಜೂನ್ 7 ಕ್ಕೆ ಮುಗಿಯಲಿದೆ.ರಾಜ್ಯದಲ್ಲಿ ಕರೋನ ಲಾಕ್ ಡೌನ್ ನಿಂದಾಗಿ ನಿಯಂತ್ರಣಕ್ಕೆ ಬಂದಿದ್ದು ಇನ್ನೂ ರಾಜ್ಯವನ್ನು ಲಾಕ್ ಮಾಡಬೇಕಾ ಬೇಡ ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಹತ್ವದ ಸಭೆ ಕರೆದಿದ್ದಾರೆ ಲಾಕ್ ಡೌನ್ ಮುಂದು ವರೆಸುವ ಕುರಿತು ಚರ್ಚೆ ಆಗಲಿದೆ
ಇಂದು ಸಂಜೆ 6 ಕ್ಕೆ ಸಿಎಂ ಅಧಿಕೃತ ನಿವಾಸದಲ್ಲಿ ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದು, ತೀವ್ರ ಕುತೂಹಲ ಮೂಡಿಸಿದೆ.ಪ್ರಮುಖವಾಗಿ ಈ ಒಂದು ಸಭೆಯಲ್ಲಿ ಕರ್ನಾಟಕದಲ್ಲಿ ಜೂನ್ 7ರ ಬಳಿಕ ಅನ್ ಲಾಕ್ ಅಥವಾ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ? ಬೇಡವೋ ಎನ್ನುವ ಬಗ್ಗೆ ಚರ್ಚೆ ಯಾಗಲಿದೆ.
ಕೆಲ ಸಚಿವರು ಅನ್‌ಲಾಕ್ ಎನ್ನುತ್ತಿದ್ದರೆ, ಇನ್ನು ಹಲವಾರು ಸಚಿವರು ಲಾಕ್‌ಡೌನ್ ಒಂದು ವಾರ ವಿಸ್ತರಣೆ ಮಾಡುವ ಕುರಿತು ಸುಳಿವು ನೀಡಿದ್ದಾರೆ. ಹೀಗಾಗಿ ಈ ಒಂದು ವಿಚಾರ ಕುರಿತು ಅಂತಿಮ ನಿರ್ಧಾರವಾಗಲಿದೆ.ಚರ್ಚಿಸಲು ಮಹತ್ವದ ಸಭೆ ಕರೆದಿದ್ದು, ಕರ್ನಾಟಕದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡುವ ಅಥವಾ ಅನ್ ಲಾಕ್ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಲಿದೆ
ಇನ್ನು ಸಭೆಯಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವ ದ ಸಮಿತಿ ಒಳಗೊಂಡ ಸದಸ್ಯರು ಕೂಡಾ ಪಾಲ್ಗೊ ಳ್ಳಲಿದ್ದು ಕೊರೋನಾ ಉಸ್ತುವಾರಿ, ಡಿಸಿಎಂ, ಸಚಿವ ರು, ಹಿರಿಯ ಅಧಿಕಾರಿಗಳ ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಜೂನ್ 7ಕ್ಕೆ ಮುಕ್ತಾಯವಾಗಲಿದೆ.ಮತ್ತೊಂದೆಡೆ ಕೊರೋ ನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆ ಯಾಗುತ್ತಿದೆ.
ಇದರಿಂದ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ, ಬೇಡ್ವೋ ಎನ್ನುವ ಬಗ್ಗೆ ಸಿಎಂ ತಜ್ಞರ ಅಭಿಪ್ರಾಯ ವನ್ನು ಈ ಒಂದು ಸಭೆಯಲ್ಲಿ ಕೇಳಲಿದ್ದಾರೆ ನಂತರ ತೀರ್ಮಾನವನ್ನು ಪ್ರಕಟಿಸಲಿದ್ದು ಒಟ್ಟಾರೆ ರಾಜ್ಯ ದಲ್ಲಿ ಲಾಕ್ ಡೌನ್ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಗೆ ಉತ್ತರ ಇಂದು ಸಂಜೆಯೊಳಗಾಗಿ ಸಿಗಲಿದೆ