ಕಲಬುರಗಿ –
ಸಾಮಾನ್ಯವಾಗಿ ಯಾರಿಗಾದರೂ ಅಪಘಾತವಾದರೆ ಏನಾಯಿತು ಏನೋ ಎಂಬ ಚಿಂತೆಯ ನಡುವೆ ದೂರು ದಾಖಲಿಸಲು ಮುಂದಾಗುತ್ತಾರೆ ಆದರೆ ಇಲ್ಲೊಬ್ಬ ಇಲಾಖೆಯ ಅಧಿಕಾರಿ ಯೊಬ್ಬರ ಕಾರು ಅಪಘಾತ ವಾಗುತ್ತಿದ್ದಂತೆ ಒಂದು ಕಡೆ ಅಪಘಾತ ಮತ್ತೊಂದು ಕಡೆಗೆ ಎದುರಿಗೆ ನಿಂತ ಬಾಲಕ ಇದರ ನಡುವೆ ಬಾಲಕನ ಸಂಕಷ್ಟ ಕೇಳಿದ ಇಲಾಖೆಯ ಅಧಿಕಾರಿ ಬದುಕಿಗೆ ನೆರವಾಗಿದ್ದಾರೆ.ಹೌದು ಶಿಕ್ಷಣ ಇಲಾಖೆ ನಿರ್ದೇಶಕರ ಕಾರಿಗೆ ಎಮ್ಮೆ ಡಿಕ್ಕಿ ಹೊಡೆದ ಪ್ರಕರಣವೊಂದು ಭಾರಿ ಸುದ್ದಿಯಾಗಿದೆ.

ಹೌದು ಜೀವರ್ಗಿ ತಾಲೂಕು ಮಂದೇವಾಲದ ಹತ್ತಿರ ಕಲಬುರಗಿ ಅಪರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಇಲಾಖೆ ನಿರ್ದೇಶಕರ ಕಾರು ಎಮ್ಮೆಗೆ ಡಿಕ್ಕಿ ಹೊಡೆ ದಿದೆ.ಎಮ್ಮೆಗಳು ರಸ್ತೆಗೆ ನುಗ್ಗಿ ಬಂದಿದ್ದರಿಂದ ಚಾಲಕ ಬ್ರೇಕ್ ಹಾಕಿದರೂ ನಿಯಂತ್ರಣಕ್ಕೆ ಬಾರದೆ ಕಾರಿನ ಬಂಪರ್ ಮತ್ತಿತರ ಭಾಗಗಳು ಜಖಂಗೊಂಡಿವೆ ಇದು ಅಪಘಾತ ದ ಸುದ್ದಿಯಾದರೆ ಇನ್ನೂ ಇದಕ್ಕಿಂ ತ ಕುತೂಹಲಕರ ಅಂಶ ಈ ಒಂದು ಪ್ರಕರಣದಲ್ಲಿ ಬೆಳಕಿಗೆ ಬಂದಿದ್ದು


ಕಾರಿಗೆ ಎಮ್ಮೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಎಮ್ಮೆ ಕಾಯುತ್ತಿದ್ದ ಅಪ್ರಾಪ್ತ ಬಾಲಕನನ್ನು ಶಿಕ್ಷಣ ಇಲಾಖೆ ನಿರ್ದೇಶಕರಾದ ಬಿಕೆಎಸ್ ವರ್ಧನ್ ಮಾತನಾಡಿಸಿ ದ್ದಾರೆ. ಆತ ಈ ಹಿಂದೆ ಅಫಜಲಪುರ ತಾಲೂಕಿನ ಚಿನಮಳ್ಳಿ ಶಾಲೆಗೆ ದಾಖಲಾಗಿದ್ದು ನಂತರ ಶಾಲೆ ಬಿಟ್ಟಿದ್ದಾನೆ.2 ವರ್ಷದಿಂದ ಮಂದೇವಾಲ ತೋಟದ ಮಾಲಿಕರೋರ್ವರು ಆತನನ್ನು ಜೀತಕ್ಕೆ ಇಟ್ಟುಕೊಂ ಡಿ ದ್ದಾಗಿ ತಿಳಿಸಿದ್ದಾನೆ.ಕೂಡಲೇ ಸ್ಥಳೀಯ ಸಿಆರ್ ಪಿಗೆ ಅಪರ ಶಿಕ್ಷಣ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಈ ರೀತಿ ಜೀತಕ್ಕಿಟ್ಟುಕೊಳ್ಳುವುದು ಆರ್ ಟಿಇ ನಿಯಮಾವಳಿಗೆ ವಿರುದ್ಧವಾದುದು.ಈ ಕುರಿತು ಸೂಕ್ತ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪತ್ರವನ್ನು ಬರೆದಿದ್ದು ಈಗ ವೈರಲ್ ಆಗಿದೆ.
ಜೀತಕ್ಕೆ ಇಟ್ಟುಕೊಂಡ ತೋಟದ ಮಾಲೀಕನ ಕುರಿತು ಸ್ಥಳೀಯ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಿ ವರದಿ ನೀಡಬೇಕು ಎಂದು ನಿರ್ದೇಶಕರು ಕಲಬುರಗಿ ಡಿಡಿಪಿಐ ಮತ್ತು ಅಫಜಲಪುರ ಹಾಗೂ ಜೀವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆಯ ನಿರ್ದೇಶಕರಾದ ಬಿಕೆಎಸ್ ವರ್ಧನ್ ಪತ್ರ ಬರೆದಿದ್ದಾ ರೆ.ಸಧ್ಯ ಈ ಒಂದು ಪತ್ರ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕಾರಿಗೆ ಎಮ್ಮೆ ಡಿಕ್ಕಿಯಾಗಿರುವುದು ಬಾಲಕನ ಜೀತವೂ ತೋಟದ ಮಾಲಿಕನ ಗೃಹಚಾರವೂ ಎಲ್ಲವೂ ಈಗ ಚರ್ಚೆಯಾಗುತ್ತಿದೆ.ಜೊತೆಗೆ ಇಂತಹ ಅದೆಷ್ಟು ಸಾವಿರ ಸಾವಿರ ಮಕ್ಕಳು ಬಾಲಕಾರ್ಮಿ ಕರಾಗಿ ದುಡಿಯುತ್ತಿರುವುದು ಬೆಳಕಿಗೆ ಬರಬೇಕೆಂ ದರೆ ಇಂತಹ ಘಟನೆಗಳೇ ನಡೆಯಬೇಕೆ ಎನ್ನುವ ಪ್ರಶ್ನೆಯೂ ಚರ್ಚೆಯಾಗುತ್ತಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು