ಬೆಂಗಳೂರು –
ಕೊರೊನಾ ಮೂರನೇ ಅಲೆ ಆತಂಕದ ನಡುವೆ ಯೂ ಪಾಸಿಟಿವಿಟಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲು ನಿರ್ಧಾರವನ್ನು ತೆಗೆದು ಕೊಳ್ಳಲಾಗಿದೆ.ಹೌದು ಆಗಸ್ಟ್ 23 ರಿಂದ 9 ರಿಂದ 12ನೇ ತರಗತಿಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೊವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ. ಆಗಸ್ಟ್ 23 ರಿಂದ 9-12 ನೇ ತರಗತಿಗಳು ಮೊದಲ ಹಂತದಲ್ಲಿ ಆರಂಭವಾಗ ಲಿದ್ದು ಇಂದು ಶಿಕ್ಷಣ ಇಲಾಖೆಯಿಂದ ಈ ಒಂದು ಗೈಡ್ ಲೈನ್ಸ್ ಗಳು ಬಿಡುಗಡೆಯಾಗಲಿವೆ
ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಕೆಲವರು ಶಾಲೆಗಳನ್ನು ತೆರೆಯಲು ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಕೆಲವರು ಈಗಲೇ ಬೇಡ ಅಂತ ಹೇಳಿದ್ದಾರೆ. ಸದ್ಯ ಆಗಸ್ಟ್ 23 ರಿಂದ 9-12 ನೇ ತರಗತಿಗಳು ಆರಂಭವಾಗಲಿದ್ದು ಇದಕ್ಕೆ ಸಂಬಂಧಿಸಿದ ಮಾರ್ಗ ಸೂಚಿಗಳನ್ನು ಸರ್ಕಾರ ಇಂದು ಪ್ರಕಟಿಸಲಿದೆ. ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಶಾಲೆಗಳನ್ನು ಬಂದ್ ಮಾಡಲಾಗಿತ್ತು.ಆದರೆ ಆಗಸ್ಟ್ 23 ರಿಂದ ಶಾಲೆಗಳನ್ನ ಪುನಾರಂಭಿಸಲು ಸರ್ಕಾರ ನಿರ್ಧರಿಸಿದ್ದು ಏನೇನು ಮಾರ್ಗಸೂಚಿ ಗಳನ್ನು ಸರ್ಕಾರ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕು