This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Sports News

ಸರ್ಕಾರಿ ನೌಕರರಿಗೆ ಅನುಕೂಲ ಕಲ್ಪಿಸಿ ಕೊಟ್ಟ ಸರ್ಕಾರ – ಡಿಸೆಂಬರ್ ವರೆಗೆ ಕಾಲಾವಧಿ ವಿಸ್ತರಣೆ ಮಾಡಿ‌ ಆದೇಶ…..

Join The Telegram Join The WhatsApp

 


ಬೆಂಗಳೂರು –

ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೇರ್ಗಡೆ ಹೊಂದಲು ಡಿಸೆಂಬರ್ 31, 2022 ರ ವರೆಗೆ ಕಾಲಾವಧಿ ವಿಸ್ತರಿಸಲಾಗಿದೆ.ವಾರ್ಷಿಕ ವೇತನ ಬಡ್ತಿ, ಪದ ನ್ನೋತಿ ಮತ್ತು ಇತರೆ ಸೌಲಭ್ಯ ಪಡೆದುಕೊಳ್ಳಲು ಮಾರ್ಚ್ 22 ರೊಳಗೆ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಆಗಿರಬೇಕೆಂದು ಆದೇಶಿಸಲಾಗಿತ್ತು ಕೊರೋನಾ ಸೇರಿದಂತೆ ಅನೇಕ ಕಾರಣಗಳಿಂದಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸ್ ಹೊಂದುವ ಕಾಲಾವಧಿಯನ್ನು ಈ ವರ್ಷದ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.

ಇನ್ನೂ ಪರೀಕ್ಷೆ ನಡೆಸಬೇಕಿದ್ದ ಕಿಯೋನಿಕ್ಸ್ ಸಂಸ್ಥೆ ತಾಂತ್ರಿಕ ಕಾರಣಗಳಿಂದ ಸರಿಯಾಗಿ ಪರೀಕ್ಷೆ ನಡೆಸಲು ಸಾಧ್ಯವಾ ಗಿಲ್ಲ.ಕೊರೊನಾ ಸೋಂಕು ನಿರ್ವಹಣೆ ಕರ್ತವ್ಯದಲ್ಲಿ ನೌಕರರು ಭಾಗಿಯಾಗಿದ್ದು, ಇದರಿಂದ ಶೇಕಡ 30 ರಷ್ಟು ಸಿಬ್ಬಂದಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಹಾಜರಾಗಿಲ್ಲ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾಗದ ಹಿನ್ನೆಲೆಯಲ್ಲಿ ಜನವರಿ ಮತ್ತು ಜುಲೈನಲ್ಲಿ ಪಡೆಯಬೇಕಿದ್ದ ವೇತನ ಬಡ್ತಿಗೆ ತೊಂದರೆಯಾಗುತ್ತದೆ. ಇವೇ ಮೊದಲಾದ ಕಾರಣಗಳಿಂ ದಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೇರ್ಗಡೆ ಕಾಲಾ ವಧಿಯನ್ನು ಮುಂದೂಡಲಾಗಿದೆ.


Suddi Sante Desk

Leave a Reply