ಬೆಂಗಳೂರು –
ತುರ್ತಾಗಿ ಮುಖ್ಯಮಂತ್ರಿಯರನ್ನು ಭೇಟಿಯಾದ KSPSTA ಟೀಮ್ – 7ನೇ ವೇತನ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ CM ಗೆ ಒತ್ತಾಯಿಸಿದ ಪುಟ್ಟಣ್ಣ ನೇತ್ರತ್ವದಲ್ಲಿನ KSPSTA ನಿಯೋಗ…..
7ನೇ ವೇತನ ಆಯೋಗ ಅನುಷ್ಠಾನ ವಿಚಾರ ಕುರಿತಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗ ಮುಖ್ಯಮಂತ್ರಿಯ ವರನ್ನು ಭೇಟಿಯಾದರು.ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತ್ರತ್ವದಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಟೀಮ್ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ 7ನೇ ವೇತನ ಆಯೋ ಗವನ್ನು ಈ ಕೂಡಲೇ ಅನುಷ್ಠಾನಗೊಳಿ ಸುವಂತೆ ಚರ್ಚೆಯನ್ನು ಮಾಡಿ ಒತ್ತಾಯ ಮಾಡಿದರು
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯೋಗಕ್ಕೆ ಸೋಮವಾರಿಂದ ಆರಂಭವಾಗುವ ಅಧಿವೇಶನದಲ್ಲಿ ಈ ಒಂದು ಕುರಿತಂತೆ ಚರ್ಚೆಯನ್ನು ಮಾಡಿ ಜಾರಿಗೆ ತರುವ ಕುರಿತಂತೆ ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳುವುದಾಗಿ ಹೇಳಿ ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಒಂದು ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರೊಂದಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇ ಖರ ನುಗ್ಗಲಿ ಸೇರಿದಂತೆ ಸಂಘಟನೆಯ ಹಲವು ನಾಯಕರು ಮುಖಂಡರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..