ಹುಬ್ಬಳ್ಳಿ –
ವರ್ಗಾವಣೆಯಾದ್ರು ಇನ್ನೂ ಸಿಗದ ಬಿಡುಗಡೆಯ ಭಾಗ್ಯ – ತರೆ ಮರೆಯಲ್ಲಿ ಪಂಡಿತನಿಂದ ನಡೆದಿದೆ ಬಿಡುಗಡೆ ಆಗದಂತೆ ಒತ್ತಡ…..ಇದ್ಯಾವ ನ್ಯಾಯ ಪಂಡಿತ…..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಹಲವು ಅಧಿಕಾರಿಗಳು ಸಿಬ್ಬಂದಿಗಳು ವರ್ಗಾವಣೆಯಾ ಗಿದ್ದಾರೆ.ಪಾಲಿಕೆಯಿಂದ ಬೇರೆ ಬೇರೆ ಕಡೆಗೆ ವರ್ಗಾವಣೆ ಯಾಗಿದ್ದು ಈ ಒಂದು ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಕೃತವಾದ ಆದೇಶ ಕೂಡಾ ಬಂದಿದೆ ಆದೇಶ ಬಂದು ನಾಲ್ಕೈದು ದಿನಗಳು ಕಳೆದರು ಕೂಡಾ ಈವರೆಗೆ ವರ್ಗಾವಣೆಯಾದರಿಗೆ ಪಾಲಿಕೆಯಿಂದ ಮಾತ್ರ ಬಿಡುಗಡೆ ಭಾಗ್ಯ ಸಿಕ್ಕಿಲ್ಲ
ಹೌದು ನಾಲ್ಕೈದು ಸಿಬ್ಬಂದಿಗಳು ಇಲ್ಲಿಂದ ಬೇರೆ ಬೇರೆ ಕಡೆಗೆ ವರ್ಗಾವಣೆಯಾಗಿದ್ದಾರೆ ಕೆಲವರು ತಾವೇ ವರ್ಗಾವಣೆ ಮಾಡಿಸಿಕೊಂಡಿದ್ದರೇ ಇನ್ನೂ ಕೆಲವರಿಗೆ ವರ್ಗಾವಣೆ ಭಾಗ್ಯ ಸಿಕ್ಕಿದ್ದು ಇದರ ನಡುವೆ ವರ್ಗಾವಣೆ ಯಾದವರನ್ನು ನಿಯಮದಂತೆ ಪಾಲಿಕೆಯಿಂದ ಕೂಡಲೇ ಬಿಡುಗಡೆ ಮಾಡಬೇಕು ಆದರೆ ವರ್ಗಾವಣೆ ಯ ಬೆನ್ನಲ್ಲೇ ಪಂಡಿತನು ಶಾಸಕರಿಂದ ಪಾಲಿಕೆಯ ಆಯುಕ್ತರಿಗೆ ಬೇಕಾದವರನ್ನು ಬಿಡುಗಡೆ ಮಾಡದಂತೆ ಹೇಳಿಸಿದ್ದಾನಂತೆ
ಇನ್ನೂ ಸಾಕಿದ ಗಿಣಿಗಳನ್ನು ಇಲ್ಲಿಯೇ ಮುಂದುವ ರೆಸಲು ಪಂಡಿತ ಶಾಸಕರ ಮೂಲಕ ಮತ್ತೊಂದು ಆದೇಶವನ್ನು ಮಾಡಿಸಲು ಪಂಡಿತನೊಂದಿಗೆ ಅಧ್ಯಕ್ಷ ಕೂಡಾ ಜೊತೆಯಾಗಿದ್ದಾನೆ.ಇನ್ನೂ ಪಾಲಿಕೆಯಲ್ಲಿ ಹಲವು ದಿನಗಳಿಂದ ವರ್ಗಾವಣೆಯಾದ್ರು ಅವರನ್ನು ಬಿಡುಗಡೆ ಮಾಡುತ್ತಿಲ್ಲ ಹೋಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಪಂಡಿತನೇ ಸಧ್ಯ ವರ್ಗಾವಣೆಯಾದ ವರನ್ನು ಬಿಡುಗಡೆಯಾದಂತೆ ತಡೆಯುವುದು ಸರಿನಾ
ಹೇಳೊದು ದೊಡ್ಡ ಆಚಾರ ಮಾಡೊದು ಅನಾಚಾರ ಕೆಲಸವಾಗಿದ್ದು ಇನ್ನಾದರೂ ಪಾಲಿಕೆಯ ಆಯುಕ್ತರು ಪಂಡಿತನ ತೆರೆ ಮರೆಯ ಒತ್ತಡಕ್ಕೆ ಮಣಿಯದೇ ರಾಜ್ಯ ಸರ್ಕಾರವು ಮಾಡಿರುವ ಆದೇಶವನ್ನು ಪಾಲಿಸುತ್ತಾರಾ ಅಥವಾ ತಾವು ಕೂಡಾ ಒರ್ವ ಸರ್ಕಾರಿ ನೌಕರರ ಎಂದುಕೊಂಡು ಕರ್ತವ್ಯವನ್ನು ಮಾಡ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಇನ್ನೂ ಪಂಡಿತನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಪಂಡಿತನ ಹಿಂದೆ ಅಧ್ಯಕ್ಷ ನಿಂತುಕೊಂಡಿದ್ದು ದುರುಂತದ ವಿಚಾರ.
ಪ್ರಮೋದ್ ಕಪಲಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..