ಧಾರವಾಡ –
ಮೇ 13 ರಂದು ಧಾರವಾಡದಲ್ಲಿ ಸ್ಟಾರ್ ಆಫ್ ಕರ್ನಾಟಕ ವಿಶಿಷ್ಟ ಕಾರ್ಯಕ್ರಮ, ಡಾ, ಜಿ ಶಿವಣ್ಣ ಹೌದು ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ,ಪಾಟೀಲ ಪುಟ್ಟಪ್ಪ ಸಭಾಂಗಣ ದಲ್ಲಿ, ಮೇ 13 ರಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ವಿಶಿಷ್ಟ ವಿನೂತನ ಕಾರ್ಯಕ್ರಮ ಸ್ಟಾರ್ ಆಫ್ ಕರ್ನಾಟಕ
ರಾಜ್ಯದ ಆಯ್ದ ಜಿಲ್ಲೆಗಳ ಅತ್ಯುತ್ತಮ 25 ಸರ್ಕಾರಿ ಶಾಲೆಗಳಿಗೆ ಹಾಗೂ ವಿವಿಧ ರಂಗದ ಸಾಧಕರಿಗೆ, ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ವೃತ್ತಿ ಜೀವನ ದಲ್ಲಿ 25 ವರ್ಷಗಳ ಸೇವೆಯನ್ನು ಸಲ್ಲಿಸಿದ ರಾಜ್ಯ ವಿವಿಧ ಜಿಲ್ಲೆಗಳ ಎಲೆಯ ಮರೆಯ ಕಾಯಿಯಂತೆ ಇರುವ ಗುರುಗಳು,ಗುರುಮಾತೆಯರನ್ನು ಗುರುತಿಸಿ, ಸತ್ಕರಿಸಲಾಗುವುದು, ಎಂದು ಕಾರ್ಯಕ್ರಮದ ಮುಖ್ಯ ಸಂಘಟಕರು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ, ಜಿ ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದರು


ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇವರ ಅಧ್ಯಕ್ಷತೆಯಲ್ಲಿ ಜರುಗಲಿರುವ, ಈ ಕಾರ್ಯಕ್ರಮದಲ್ಲಿ, ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ, ಸುಮಾರು 80 ಲಕ್ಷಕ್ಕೂ ಅಧಿಕ ಹಣವನ್ನು ಸುಮಾರು 115 ಸರ್ಕಾರಿ ಶಾಲೆಗಳಿಗೆ ದತ್ತಿ ನೀಡಿದ ನಿವೃತ್ತ ಶಿಕ್ಷಕಿ ಶ್ರೀಮತಿ ಲೂಸಿ ಕೆ ಸಾಲ್ಡಾನರವರ, ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳ ಸಂಪಾದಕತ್ವದ, ಅನುಭವಾಮೃತ ನುಡಿಗಳು ಪುಸ್ತಕ ಲೋಕಾರ್ಪಣೆ ಸಹ ಜರುಗಲಿದೆ,
ಸೊರಬ ತಾಲ್ಲೂಕಿನ ಚನ್ನಾಪುರ, ಧಾರವಾಡ ಜಿಲ್ಲೆಯ ಸೇವಾಗ್ರಾಮ ಜೀರಿಗವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮನಗರ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಡೇರಹಳ್ಳಿ. ಮಂಡ್ಯ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಲುವರಸನಕೊಪ್ಪಲು ಸೇರಿದಂತೆ 25 ಸರ್ಕಾರಿ ಶಾಲೆಗಳಿಗೆ ಸ್ಟಾರ್ ಆಫ್ ಕರ್ನಾಟಕ ಹಾಗೂ ವಾಯ್ ಬಿ ಕಡಕೋಳ ವಿದ್ಯಾ ದೇವಗಿರಿ, ಬಾಗ್ಯಶ್ರೀ ರಜಪೂತ ರವಿಚಂದ್ರನ್ ದೊಡ್ಡಿಹಾಳ ಸೇರಿದಂತೆ ಅನೇಕರಿಗೆ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಹಾಗೂ ಸದ್ಗುರು ದ್ರೋಣಾಚಾರ್ಯ ಪ್ರಶಸ್ತಿಯನ್ನು,
ಬೆಂಗಳೂರಿನ ತಾವರೆಕೆರೆ ಸಾಧಕ ಶಿಕ್ಷಕಿ ಟಿ ವೀಣಾ ವಿಜಯಪುರದ ವಿಜ್ಞಾನ ಚಿಂತಕರು ಎಸ್ ವಿ ಬುರ್ಲಿ, ಪಂಡಿತ ಆವಜಿ ಮುಂಡರಗಿಯ ಅಮಿದಾ ನಾಲಬಂದ್ ನೀ ಶ್ರೀಶೈಲ ಸೇರಿದಂತೆ ಕೆಲ ಸಾಧಕರಿಗೆ ದ್ರೋಣಾ ಚಾರ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ,
ಹುಬ್ಬಳ್ಳಿಯ ಸರ್ವಧರ್ಮ ಸಮಾಜಸೇವಕರಾದ ಡಾ, ರಮೇಶ ಮಹಾದೇವಪ್ಪನವರ ಕಾರ್ಯಕ್ರಮ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಬಿ ಆರ್ ಸಿ ಧಾರವಾಡದ ಸಮನ್ವಯಾಧಿಕಾರಿ ಕುಮಾರ ಕೆ ಎಫ್, ಕೊಪ್ಪಳದ ಶಿಕ್ಷಕರ ಪರ ಹೋರಾಟಗಾರ್ತಿ ಅನ್ನಪೂರ್ಣ ಅಸ್ಕಿ, ಚಂದ್ರಶೇಖರ ಮಾಡಲಗೇರಿ, ಡಾ, ಟಿ ತ್ಯಾಗರಾಜ ವಿ ಪಿ ಜಾಕೋಜಿ ಎಲ್ ಐ ಲಕ್ಕಮ್ಮನವರ ವಾಯ್ ಬಿ ಕಡಕೋಳ ಸಂಗೀತ ಮಠಪತಿ ಮುಂತಾದ ವರು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಲಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..