ಬೆಂಗಳೂರು –
ಹೋರಾಟದ ರೂಪರೇಷೆಗಳ ಕುರಿತಂತೆ ತುರ್ತು ಸಭೆ ಕರೆದ ರಾಜ್ಯ ಸರ್ಕಾರಿ ನೌಕರರ ಸಂಘಟನೆ – ರಾಜ್ಯ ಸರ್ಕಾರಿ ನೌಕರರ ಮೂರು ಪ್ರಮುಖ ಬೇಡಿಕೆಗಳ ಕುರಿತಂತೆ ತೀವ್ರಗೊಳ್ಳುತ್ತಿದೆ ಈ ಬಾರಿ ಹೋರಾಟದ ಪ್ಲಾನ್
ಹೌದು 7ನೇ ವೇತನ ಆಯೋಗ ಅನುಷ್ಠಾನ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರಿ ನೌಕರರು ಹೋರಾ ಟಕ್ಕೆ ಕರೆ ನೀಡಿದ್ದಾರೆ.ಮೊದಲ ಹಂತವಾಗಿ ಸಧ್ಯ ರಾಜ್ಯದ ಮೂಲೆ ಮೂಲೆಗಳಲ್ಲಿ ಜಿಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ನೌಕರ ಬಂಧುಗಳು ಮೂರು ಪ್ರಮುಖ ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ ಮನವಿಯನ್ನು ನೀಡುತ್ತಿದ್ದು.
ಈ ಹಿಂದೆ ಕೂಡಾ ಇದೇ ರೀತಿ ಮನವಿಯನ್ನು ನೀಡಿ ಆಗ್ರಹವನ್ನು ಮಾಡಲಾಗಿತ್ತು ಸಧ್ಯ ಮುಂದುವರೆದ ಭಾಗವಾಗಿ ಮತ್ತೆ ಕಾರ್ಯಕಾರ ಣಿಯಲ್ಲಿ ತೀರ್ಮಾನಿಸಿದಂತೆ ಮನವಿಯನ್ನು ನೀಡಲು ಕರೆ ನೀಡಲಾಗಿದ್ದು ಹೀಗಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಮನವಿಯನ್ನು ನೀಡು ತ್ತಿದ್ದು ಇಷ್ಟಾದರೂ ಕೂಡಾ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಕಣ್ತೇರೆದು ನೋಡುತ್ತಿಲ್ಲ ಹೀಗಿರುವಾಗ ಸಧ್ಯ ಜುಲೈ 29 ರಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದ್ದು
ಹೀಗಾಗಿ ಜುಲೈ 27 ರ ಈ ಒಂದು ಸಭೆ ಸಾಕಷ್ಟು ತೀವ್ರ ಕುತೂಹಲವನ್ನು ಕೆರಳಿಸಿದ್ದು ಸಭೆ ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸುತ್ತಾ ಇಲ್ಲವೇ ಕಾದು ನೋಡುತ್ತಾ ಎಂಬೊದನ್ನು ಕಾದು ನೋಡಬೇ ಕಿದೆ.ರಾಜ್ಯ ಸರಕಾರಿ ನೌಕರರ 3 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹೋರಾಟದ ರೂಪ ರೇಷೆಗಳನ್ನು ಚರ್ಚಿಸಲು ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯನ್ನು ಕರೆದಿದೆ ರಾಜ್ಯ ಸರಕಾರಿ ನೌಕರರ ಸಂಘವು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.