ಬೆಂಗಳೂರು –
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಪಟ್ಟಂತೆ ಗಣತಿದಾರರಾಗಿ ನೇಮಕ ಗೊಂಡಿರುವ ಕೆಲವು ಶಿಕ್ಷಕರಿಂದ ವೈದ್ಯಕೀಯ ಕಾರಣ ಗಳಿಗಾಗಿ ಸಮೀಕ್ಷೆಯ ಕೆಲಸ ಕಾರ್ಯಗಳಿಂದ ವಿನಾಯಿತಿ ಕೋರಿ ಸ್ವೀಕೃತವಾದ ಮನವಿಗಳ ಕುರಿತು ಆಯಾ ಜಿಲ್ಲಾಧಿಕಾರಿಗಳು ಕ್ರಮ ವಹಿಸಲು ಸರ್ಕಾರ ಸೂಚಿಸಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕೆಲಸ ಕಾರ್ಯಗಳು ಸರ್ಕಾರದ ಮಹತ್ತರ ಕೆಲಸ ಕಾರ್ಯಗಳಾಗಿರುತ್ತದೆ. ಈ ಸಮೀಕ್ಷೆಗೆ ಗಣತಿದಾರರಾಗಿ ನೇಮಕ ಮಾಡಲ್ಪಟ್ಟಿರುವ ಕೆಲವು ಶಿಕ್ಷಕರಿಂದ ವೈದ್ಯಕೀಯ ಕಾರಣಗಳ ಹಿನ್ನಲೆಯಲ್ಲಿ ಸಮೀಕ್ಷೆಯ ಕೆಲಸ ಕಾರ್ಯಗಳಿಂದ ವಿನಾಯಿತಿ ನೀಡುವಂತೆ ಕೋರಿ ಜಿಲ್ಲಾ ಅಧಿಕಾರಿಗಳ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸಲ್ಲಿಸಲ್ಪಡುತ್ತಿರುವ ಮನವಿಗಳ ಕುರಿತು ಸಮಾಲೋಚಿಸಲಾಗಿರುತ್ತದೆ.
ಸದರಿ ಸಮೀಕ್ಷೆಯ ಕೆಲಸ ಕಾರ್ಯಗಳಿಗೆ ನಿಯೋಜಿಸಿ ರುವ ಶಿಕ್ಷಕರಿಂದ ವೈದ್ಯಕೀಯ ಕಾರಣಗಳ ಮೇರೆಗೆ ವಿನಾಯಿತಿ ಕೋರಿ ಸಲ್ಲಿಸಲ್ಪಡುವ ನೌಕರರ ಮನವಿ ಮತ್ತು ದಾಖಲಾತಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕ ರವರಿಗೆ ವೈದ್ಯಕೀಯ ಅಭಿಪ್ರಾಯ ನೀಡಲು ರೆಫರ್ ಮಾಡಲು ಸೂಚಿಸಿದೆ.
ಆದುದರಿಂದ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರತಿಯೊಂದು ಪ್ರಕರಣದ ಕುರಿತು ಪರಿಶೀಲಿಸಿ, ಮೇಲ್ಕಂಡ ಸಮೀಕ್ಷೆ ಕೆಲಸ ಕಾರ್ಯಗಳಿಂದ ವಿನಾಯಿತಿ ನೀಡಲು ಪರಿಗಣಿಸ ಬಹುದೇ ಅಥವಾ ಇಲ್ಲವೇ ಎಂಬುದರ ಕುರಿತು ಆಸ್ಪತ್ರೆ ಯಿಂದ ಸ್ಪಷ್ಟವಾದ ಅಭಿಪ್ರಾಯವನ್ನು ಕ್ಷೇತ್ರ ಶಿಕ್ಷಣಾ ಧಿಕಾರಿಗೆ ನೀಡಲು ಸೂಚಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……