ಬೆಂಗಳೂರು –
ಬೆಂಗಳೂರು –
ಇತ್ತೀಚಿಗೆ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹ ಣದ ಸಮಯದಲ್ಲಿ ವಿದ್ಯುತ್ ತಂತಿಗೆ ಕಂಬ ತಗುಲಿ ಮೃತ ಪಟ್ಟ ಬಾಲಕನ ಸಾವೀನ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೇತ್ತುಕೊಂಡಿದೆ.
ಹೌದು ಈ ಒಂದು ಘಟನೆ ನಡೆದ ನಂತರ ಇದನ್ನು ಗಂಭೀರ ವಾಗಿ ತಗೆದುಕೊಂಡಿರುವ ರಾಜ್ಯ ಸರ್ಕಾ ರದ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಈ ಕೂಡಲೇ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಮುಂದೆ ಇಲ್ಲವೇ ಅಕ್ಕ ಪಕ್ಕದಲ್ಲಿ ಹಾಯ್ದು ಹೋಗಿರುವ ವಿದ್ಯುತ್ ತಂತಿಗಳನ್ನು ಈ ಕೂಡಲೇ ಸ್ಥಳಾಂತರ ಮಾಡಬೇಕು ನಂತರ ವರದಿ ನೀಡುವಂತೆ ಆದೇಶವನ್ನು ಮಾಡಲಾಗಿದೆ.
ಮೊನ್ನೆ ಮೊನ್ನೆಯಷ್ಟೇ ಈ ಒಂದು ಘಟನೆ ನಡೆದಿತ್ತು ಇದರ ಬೆನ್ನಲ್ಲೇ ಎಚ್ಚೇತ್ತುಕೊಂಡ ರಾಜ್ಯ ಸರ್ಕಾರ ಈ ಕೂಡಲೇ ಸೂಕ್ತವಾದ ಕ್ರಮವನ್ನು ತಗೆದುಕೊಳ್ಳು ವಂತೆ ಸೂಚನೆ ನೀಡಿದೆ ಹಾಗೇ ವಿದ್ಯುತ್ ತಂತಿ ಗಳನ್ನು ಸ್ಥಳಾಂತರ ಮಾಡುವಂತೆ ಇಂಧನ ಇಲಾಖೆ ಗೆ ಆದೇಶವನ್ನು ಮಾಡಿದೆ.