ಹುಬ್ಬಳ್ಳಿ –
ವರ್ಗಾವಣೆಗೊಂಡರು ಇನ್ನೂ ಚಿಗರಿ ಬಸ್ ಚಾಲಕರಿಗೆ ಸಿಗದ ಬಿಡುಗಡೆ ಭಾಗ್ಯ ವರ್ಗಾವಣೆ ಯಾಗಿ ಆರೇಳು ತಿಂಗಳು ಕಳೆದರು ಇನ್ನೂ ಸಿಗದ ಬಿಡುಗಡೆ ಭಾಗ್ಯ ಇದೇಂಥಾ ವ್ಯವಸ್ಥೆ ಡಿಸಿ ಸಾಹೇಬ್ರೆ…..ಇದೇಲ್ಲಾ ನಿಮ್ಮ ಗಮನಕ್ಕೆ ಇಲ್ವಾ ಏನು…..
ಅವಳಿ ನಗರದ ಜನತೆಗೆ ಆಸರೆಯಾಗಿರುವ ಅವೈಜ್ಞಾನಿಕವಾಗಿರುವ ಚಿಗರಿ ಸಾರಿಗೆಯಲ್ಲಿ ಅಧಿಕಾರಿಗಳ ಎಡವಟ್ಟು ದಿನಕ್ಕೊಂದು ಬೆಳಕಿಗೆ ಬರುತ್ತಿವೆ.ಈ ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಅವ್ಯವಸ್ಥೆ ಇದ್ದರೂ ಕೂಡಾ ಅದನ್ನೇಲ್ಲವನ್ನು ಸರಿ ಮಾಡಿ ಚಾಲಕರೊಂದಿಗೆ ಜನಸ್ನೇಹಿಯಾಗಿ ಅಧಿಕಾರಿಗಳು ಮಾಡುತ್ತಿದ್ದರು.
ಆದರೆ ಈಗಷ್ಟೇ ಬೆಂಗಳೂರಿನಿಂದ ಚಿಗರಿ ವಿಭಾಗಕ್ಕೆ ಡಿಸಿಯಾಗಿ ಬಂದಿರುವ ಡಿಸಿ ಸಿದ್ದಲಿಂಗಯ್ಯ ಸಾಹೇಬ್ರು ಬಂದ ಆರಂಭ ದಲ್ಲಿಯೇ ಡ್ರೈವರ್ ಗಳ ಜೊತೆಯಲ್ಲಿ ಸಭೆ ಮಾಡಿ ಏನೇಲ್ಲಾ ಬದಲಾವಣೆಯ ಮಾತುಗಳನ್ನು ಹೇಳಿ ನಂತರ ಒಂದಲ್ಲ ಒಂದು ರೀತಿಯಲ್ಲಿ ಚಾಲಕರ ಮೇಲೆ ವಕ್ರ ಕಣ್ಣು ಹರಿಸಿದ್ದಾರೆ ಬಸ್ ಗಳ ಸುಧಾರಣೆ ಮಾಡುವ ಬದಲಿಗೆ ಸಾಹೇಬ್ರು ಅದ್ಯಾಕೋ ಏನೋ ಚಾಲಕರ ಮೇಲೆ ಸಿಟ್ಟಿ ಗೆದ್ದಿದ್ದು
ಇದರಿಂದಾಗಿಯೂ ಕೂಡಾ ಚಾಲಕರು ಒಳಗೊಳಗೆ ಒಲ್ಲದ ಮನಸ್ಸಿನಿಂದ ಅವರು ಕೂಡಾ ಕರ್ತವ್ಯವನ್ನು ಮಾಡುತ್ತಿದ್ದು ನಮ್ಮ ನೋವು ಕಷ್ಟ ಕೇಳುವವರು ಯಾರು ಇಲ್ಲ ಎಂಬ ಮಾತುಗಳನ್ನು ಹೇಳುತ್ತಿದ್ದು ಇನ್ನೂ ಇದೇಲ್ಲಾ ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ಚಿಗರಿ ವಿಭಾಗದಿಂದ 20 ಕ್ಕೂ ಹೆಚ್ಚು ಚಾಲಕರು ವರ್ಗಾವಣೆಯಾಗಿದ್ದಾರೆ ಆದರೂ ಕೂಡಾ ಇನ್ನೂ ಇವರಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ
ಹುಬ್ಬಳ್ಳಿ ಮತ್ತು ಧಾರವಾಡ ಡಿಪೋ ಗಳಿಂದ 20 ಕ್ಕೂ ಹೆಚ್ಚು ಚಾಲಕರಿಗೆ ವರ್ಗಾವಣೆಯಾಗಿದ್ದರೂ ಇನ್ನೂ ಇವರನ್ನು ಬಿಡುಗಡೆ ಮಾಡಿಲ್ಲ ಆರೇಳು ತಿಂಗಳಾದರೂ ಕೂಡಾ ಇನ್ನೂ ರಿಲೀವ್ ಮಾಡಿಲ್ಲ ಒಂದು ವೇಳೆ ಆರೇಳು ತಿಂಗಳು ಕರ್ತವ್ಯಕ್ಕೆ ಗೈರಾಗಿದ್ದರೆ ಮೊದಲು ಡ್ರೈವರ್ ಗಳನ್ನು ಅಮಾನತು ಮಾಡುತ್ತಿದ್ದರು ಅಂದರೆ ಡ್ರೈವರ್ ಗಳಿಗೆ ಒಂದು ನ್ಯಾಯ ಅಧಿಕಾರಗಳಿಗೆ ಇನ್ನೊಂದು ನ್ಯಾಯನಾ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣಿ ಯಂತೆ ಮಾಡಬೇಡಿ ಡಿಸಿ ಸಾಹೇಬ್ರೆ
ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಅಲ್ವಾ ಇನ್ನೂ ಅಂದುಕೊಂಡಂತೆ ಬಿಡುಗಡೆ ಮಾಡಿದ್ದರೆ ಒಂದೇರೆಡೆ ಅಪಘಾತಗಳಾಗುತ್ತಿದ್ದವು ಇದನ್ನೇಲ್ಲಾ ಸುಧಾರಣೆ ಮಾಡಿ ಬಸ್ ಗಳ ವ್ಯವಸ್ಥೆ ಸರಿ ಮಾಡಿ ಚಾಲಕರೊಂದಿಗೆ ಜನಸ್ನೇಹಿಯಾಗಿ ನಾವು ನಿಮ್ಮ ಹಿರಿಯ ಅಧಿಕಾರಿಗಳು ಕೂಡಾ ನಿಮ್ಮ ಜೊತೆಯಲ್ಲಿ ಇರುತ್ತವೆ
ಎಲ್ಲರೂ ಸೇರಿ ಕೊಂಡು ಇಲಾಖೆಯನ್ನು ಇನ್ನಷ್ಟು ಬೆಳವಣಿಗೆ ಮಾಡಿ ಜನತೆಗೆ ಒಳ್ಳೇಯ ಸೇವೆ ಯನ್ನು ನೀಡೊಣಾ ಡಿಸಿ ಸಾಹೇಬ್ರೆ ಇದರ ನಿರೀಕ್ಷೆಯಲ್ಲಿ ನಿಮ್ಮ ಸುದ್ದಿ ಸಂತೆ ಟೀಮ್ ಇದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……