ನರಸಿಂಹರಾಜಪುರ –
ನರಸಿಂಹರಾಜಪುರ ತಾಲ್ಲೂಕು ಕೇಂದ್ರಕ್ಕೆ ಹಸಿರು ಅಭಿ ಯಾನ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಪಟ್ಟಣದ ಬಸ್ತಿಮಠದ ಸಮೀಪವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.
ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕನ್ನಡ ಪಾಠ ಮಾಡು ತ್ತಿದ್ದ ಶಿಕ್ಷಕರಿಂದ ಕನ್ನಡ ಪುಸ್ತಕ ಪಡೆದು ಮಕ್ಕಳಿಂದ ಕನ್ನಡ ಪಾಠ ಓದಿಸಿದರು.ಮಕ್ಕಳಿಗೆ ಪ್ರಶ್ನೆ ಕೇಳಿದರು ಮಕ್ಕಳು ಉತ್ತರಿಸಿದರು.
6ನೇ ತರಗತಿಯ ಕೊಠಡಿಗೆ ಭೇಟಿ ನೀಡಿ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿಕೊಂಡು ಬರುವಂತೆ ಮಕ್ಕಳಿಗೆ ತಿಳಿಸಬೇಕೆಂದು ಶಿಕ್ಷಕರಿಗೆ ಸೂಚಿಸಿದರು.ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್‌ನಿಂದ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಸಮವಸ್ತ್ರ ವಿತರಿಸಲಾಗಿದೆ. ಎಲ್ಲರ ಬಳಿಯಲ್ಲೂ ಸಮ ವಸ್ತ್ರ ಇದೆ.ಶಿಕ್ಷಕರು ಮಕ್ಕಳಿಗೆ ಶಿಸ್ತು ಕಲಿಸಬೇಕೆಂದು ತಿಳಿಸಿ ದರು.
ಶಿಕ್ಷಕರು ನೀಡಿದ ದಾಖಲೆಗಳಲ್ಲಿ ಮಕ್ಕಳು ಇಂಗ್ಲಿಷ್ ಪದ ತಪ್ಪಾಗಿ ಬರೆದಿದ್ದರೂ ಸರಿ ಎಂದು ಗುರುತು ಹಾಕಿರುವ ಬಗ್ಗೆ ಇಂಗ್ಲಿಷ್ ಶಿಕ್ಷಕಿಯನ್ನು ಪ್ರಶ್ನಿಸಿದರು.ಶಿಕ್ಷಕಿ ನೋಡಿಲ್ಲ ತಪ್ಪಾಗಿದೆ ಎಂದು ಉತ್ತರಿಸಿದರು.ಇದರಿಂದ ಕೋಪ ಗೊಂಡ ಸಿಇಒ ಶಿಕ್ಷಕರಾಗಿ ನೀವೇ ತಪ್ಪು ಮಾಡಿದರೆ ಮಕ್ಕ ಳಿಗೆ ಏನು ಪಾಠ ಹೇಳಿಕೊಡುತ್ತಿರಾ ಎಂದು ತರಾಟೆಗೆ ತೆಗೆದುಕೊಂಡರು.ಶಾಲೆಯ ಎಲ್ಲಾ ಕೊಠಡಿಗಳನ್ನು ಪರಿಶೀ ಲಿಸಿದರು.
ನಾಗಲಾಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಲ ವಾರು ವಿಷಯದ ಬಗ್ಗೆ ಮಾಹಿತಿ ನೀಡಿದರು.ಪಂಚಾಯಿತಿ ಕಟ್ಟಡ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು ತಾಲ್ಲೂಕು ಪಂಚಾಯಿತಿ ಕಚೇರಿಗೂ ಭೇಟಿ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ನಯನಾ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ ಮೇದೂರ ತಾಲ್ಲೂಕು ಪಂಚಾಯಿತಿಯ ಮನೀಶ್,ಸಿಡಿಪಿಒ ನಿರಂಜ ನಮೂರ್ತಿ ಇದ್ದರು.