ಶಹಾಬಾದ್ –
ಶಾಲಾ ಕೋಣೆಯ ಬೀಗ ಮುರಿದು ಕಳ್ಳತನ ಹೌದು ಇಂತಹ ದೊಂದು ಕಳ್ಳತನ ನಡೆದ ಘಟನೆ ಶಹಾಬಾದ್ ನಗರದಲ್ಲಿರುವ ಗ್ರಾಮೀಣ ಶಾಸಕರ ಮಾದರಿಯ ಸರ್ಕಾರಿ ಕನ್ಯಾ ಮಾದರಿ ಶಾಲೆ ಯಲ್ಲಿ ನಡೆದಿದೆ ಕೋಣೆಯ ಬೀಗ ಮುರಿದು ಕಂಪ್ಯೂಟರ್ ಬ್ಯಾಟರಿ ಮತ್ತು ವಿದ್ಯಾರ್ಥಿಗಳ ಬೂಟ್‌ಗಳನ್ನು ಕಳ್ಳತನ ಮಾಡಲಾಗಿದೆ.
ರಾತ್ರಿ ಕಂಪೌಂಡ್ ಹಾರಿ ಬಂದ ಕಳ್ಳರು ಗೇಟ್ ಮತ್ತು ಕೋಣೆಗೆ ಹಾಕಿದ್ದ ಬೀಗ ಕಂಪ್ಯೂಟರ್‌ನ ಬಳಸುವ ಬ್ಯಾಟರಿ ಹಾಗೂ ಶಾಲೆಯಲ್ಲಿ ಉಳಿದಿ ರುವ ಶೂಗಳನ್ನು ಕಳ್ಳತನ ಮಾಡಿದ್ದಾರೆ.ಪುಸ್ತಕ ಸೇರಿದಂತೆ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ದ್ದಾರೆ. ಸಿಬ್ಬಂದಿ ಬೆಳಿಗ್ಗೆ ಶಾಲೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ
ಶಾಲೆಯ ಕಾಂಪೌಂಡ್‌ನ ಎತ್ತರ ಕಡಿಮೆ ಇರುವುದರಿಂದ ಸರಳವಾಗಿ ಹಾರಬಹುದು. ಹಲವು ಬಾರಿ ಕಳ್ಳತನ ಪ್ರಕರಣಗಳು ನಡೆದಿವೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ, ಈಗಲಾದರೂ ಸಮಸ್ಯೆ ಬಗೆಹರಿಸ ಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಸ್. ಕಾಂಬ್ಳೆ ಆಗ್ರಹಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಶಹಾಬಾದ್……