ಧಾರವಾಡ –
ಪಾಲಿಕೆಯ ಪಕ್ಕದಲ್ಲಿನ ರಸ್ತೆ ದುರಸ್ತಿಗೂ ಹಣ ಇಲ್ಲವಿಲ್ಲವೇ…..ಸಾರ್ವಜನಿಕರ ಪ್ರಶ್ನೆ – ಸಾಮಾಜಿಕ ಜಾಲ ತಾಣಗಳಲ್ಲಿ ಸಿಡಿದೆದ್ದ ಸಾರ್ವಜನಿಕರು….. ಆಯುಕ್ತರೇ
ಹುಬ್ಬಳ್ಳಿ ಧಾರವಾಡ ಆರ್ಥಿಕವಾಗಿ ದಿವಾಳಿಯಾಗಿದೆ ಯಾ ಪಾಲಿಕೆಯಲ್ಲಿ ಹಣವಿಲ್ಲವಾ ಇಂತಹ ಹಲವು ಪ್ರಶ್ನೆಗಳನ್ನು ಸಾರ್ವಜನಿಕರು ಕೇಳ್ತಾ ಇದ್ದಾರೆ.ಹೌದು ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ತನ್ನ ಕಚೇರಿಯ ಪಕ್ಕದಲ್ಲಿನ ರಸ್ತೆಯನ್ನು ದುರಸ್ತಿ ಮಾಡಲು ಹಣ ಇಲ್ವಾ ಎಂಬ ಪ್ರಶ್ನೆ
ಈಗ ಸಾರ್ವಜನಿಕರಿಗೆ ಕಾಡುತ್ತಿದೆ.ಹೌದು ಒಂದು ಕಡೆಗೆ ಪಾಲಿಕೆಯಲ್ಲಿ ಗುತ್ತಿಗೆದಾರರು ಕೆಲಸ ಮಾಡಿದ ಹಣಕ್ಕಾಗಿ ಪರದಾಡುತ್ತಿದ್ದರೆ ಇತ್ತ ಇನ್ನೊಂದೆಡೆ ಧಾರವಾಡದ ಮಹಾನಗರ ಪಾಲಿಕೆಯ ಮುಖ್ಯ ಕಚೇರಿ ಪಕ್ಕದಲ್ಲಿನ ರಸ್ತೆಯನ್ನು ದುರಸ್ತಿ ಮಾಡಲು ಹಣ ಇಲ್ಲ ಎಂದು ಸಾರ್ವಜನಿಕರೊಬ್ಬರು ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಈ ಒಂದು ವಿಚಾರ ಕುರಿತಂತೆ ಜಗದೀಶ್ ಯಕ್ಕುಂಡಿಮಠ ಎಂಬುವರು ಪ್ರಶ್ನೆ ಮಾಡಿದ್ದಾರೆ.ಈ ಒಂದು ರಸ್ತೆ ಮುಖ್ಯ ರಸ್ತೆಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸುತ್ತಾಡುತ್ತಿ ದ್ದಾರೆ ಹೀಗಾಗಿ ಸಂಪೂರ್ಣವಾಗಿ ತೆಗ್ಗು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರ ಮಾಡಬೇಕೆಂದರು ಗುಂಡಿಗೆ ಗಟ್ಟಿಯಾಗಿರಬೇಕು ದುರಸ್ತಿ ಮಾಡಿ ಮಾಡಿ ಎಂದು ಸಾರ್ವಜನಿಕರು ಹೇಳಿದರು ಪಾಲಿಕೆಯವರು ಕಣ್ತೇರೆದು ನೋಡುತ್ತಿಲ್ಲ
ಸಧ್ಯ ಈ ಒಂದು ವಿಚಾರ ಕುರಿತಂತೆ ಸಾರ್ವಜನಿಕರೊ ಬ್ಬರು ಪಾಲಿಕೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ.ರಸ್ತೆಯ ದುರಸ್ತಿಗೂ ಪಾಲಿಕೆಯಲ್ಲಿ ಹಣವಿಲ್ಲವೇ ದ್ವಿಚಕ್ರ ವಾಹನ ಚಾಲನೆಯಂತೂ ತುಂಬಾ ಕಷ್ಟಕರವಾಗಿದೆ.ದಯವಿಟ್ಟು ಸಂಭಂದಿತ ಅಧಿಕಾರಿಗಳು ಬೇಗನೆ ಕ್ರಮ ಕೈಗೊಳ್ಳಲು ವಿನಂತಿ ಎಂದು ಬರೆದು ಕೊಂಡಿದ್ದಾರೆ.
ಇದನ್ನು ನೋಡಿದರೆ ಪಾಲಿಕೆ ಇಷ್ಟೊಂದು ಅಸಮ ರ್ಥವಾಯಿತಾ ಎಂಬ ಪ್ರಶ್ನೆ ಕಾಡುತ್ತಿದ್ದು ಇನ್ನಾದರೂ ಪಾಲಿಕೆಗೆ ಆಯುಕ್ತರಾಗಿ ಬಂದಿರುವ ಡಾ ರುದ್ರೇಶ ಘಾಳಿಯವರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸು ತ್ತಾರೆಯಾ ಅಥವಾ ನೊಡೊಣಾ ಮಾಡೊಣಾ ಎನ್ನುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..