ಧಾರವಾಡ –
ಯಾವುದಕ್ಕೂ ದಾಖಲೆ ಇಲ್ಲ ಬಾಡಿಗೆ ವಸೂಲಿಯಲ್ಲಿ ಮಾತ್ರ ಮಾತ್ರ ಲಕ್ಷ ಲಕ್ಷ – ಇದು ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿನ ಲಕ್ಷ ಲಕ್ಷ ದುಬಾರಿ ಬಾಡಿಗೆಯ ಕಹಾನಿ……ನಾಳೆ ನಿರೀಕ್ಷಿಸಿ ಮಹಾತಂತ್ರ ಏನು ಗೊತ್ತಾ…..
ಸಾಮಾನ್ಯವಾಗಿ ಯಾರೇ ಆಗಲಿ ಮನೆಯನ್ನು ಬಾಡಿಗೆ ತಗೆದುಕೊಂಡರೆ ಇಲ್ಲವಾದರೆ ಅಂಗಡಿಯನ್ನು ಬಾಡಿಗೆ ತಗೆದುಕೊಂಡರೆ ಯಾವುದರಲ್ಲೂ ಆದರೂ ಲೆಕ್ಕ ದಾಖಲೆ ಅನ್ನೊದು ಇದ್ದೇ ಇರುತ್ತದೆ.ಅದರಲ್ಲೂ ಮನೆ ಬಾಡಿಗೆ ಇಲ್ಲವೇ ಅಂಗಡಿ ಬಾಡಿಗೆ ತಗೆದುಕೊಂಡ್ರೆ ವಿಚಾರಿಸಿ ಪೈನಲ್ ಆದ ಮೇಲೆ ಅಡ್ವಾನ್ಸ್ ಮತ್ತು ಬಾಡಿಗೆಯ ಹಣವನ್ನು ಬಾಂಡ್ ನಲ್ಲಿ ಉಲ್ಲೇಖ ಮಾಡಲಾಗುತ್ತದೆ.ಇದು ಸರ್ವೆ ಸಾಮಾನ್ಯ ಆದರೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಹೊಸ ಟೆಂಡರ್ ನಲ್ಲಿ ಅಂಗಡಿಯನ್ನು ಬಾಡಿಗೆ ತಗೆದು ಕೊಂಡವರಿಗೆ ಮಾತಿನಲ್ಲಿ ಮಾತ್ರ ಇಂತಿಷ್ಟು ಅಂತಾ ಬಾಡಿಗೆ ಮತ್ತು ಅಡ್ವಾನ್ಸ್ ಹೇಳಿ ಯಾವುದೇ ರೀತಿಯ ಬಾಂಡ್ ಮಾಡಿಸದೇ ಲಕ್ಷ ಲಕ್ಷ ಅಡ್ವಾನ್ಸ್ ಹಣವನ್ನು ಹಾಗೆ ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಬಾಡಿಗೆ ಯನ್ನು ವಸೂಲಿ ಮಾಡಲಾಗುತ್ತಿದೆ.
ಹೊಸ ಟೆಂಡರ್ ನಲ್ಲಿ ಈ ಒಂದು ಕಹಾನಿ ಎರಡು ಮೂರು ಅಂಗಡಿಗಳಿಗೆ ಮಾಡಲಾಗಿದೆ.ಸಧ್ಯ ಧಾರವಾಡ ಫೇಮಸ್ ಪೇಢಾ ಅಂಗಡಿಯ ಉದಾಹರಣೆ ನೋಡಿ ದರೆ ಈ ಒಂದು ಮಳಿಗೆಗೆ ಈಗಾಗಲೇ 9 ಲಕ್ಷ ರೂಪಾಯಿ ಅಡ್ವಾನ್ಸ್ ತಗೆದುಕೊಳ್ಳಲಾಗಿದ್ದು ಸಧ್ಯ ಪ್ರತಿ ತಿಂಗಳು 2 ಲಕ್ಷ 40 ಸಾವಿರ ಬಾಡಿಗೆ ವಸೂಲಿ ಮಾಡಲಾಗುತ್ತಿದೆ.
ಅಡ್ವಾನ್ಸ್ ಗೂ ದಾಖಲೆ ಇಲ್ಲ ಬಾಡಿಗೆಗೂ ದಾಖಲೆ ಇಲ್ಲ ಈ ಒಂದು ವಿಚಾರ ಕುರಿತಂತೆ ಕೇಳಿದ್ರೆ ನೊಡೊಣಾ ಮಾಡೊಣಾ ಎಂಬ ಉತ್ತರ ಬರುತ್ತಿದ್ದು ಕೇಳಿ ಕೇಳಿ ಬೇಸತ್ತಿರುವ ಧಾರವಾಡ ಫೇಮಸ್ ಪೇಢಾ ಮಾಲೀಕರು ದಾರಿ ಕಾಣದೇ ಏನು ಮಾಡಬೇಕು ಎನ್ನುತ್ತಿದ್ದಾರೆ ಇನ್ನೂ ಇತ್ತ ದುಬಾರಿ ಬಾಡಿಗೆಯ ವಿಚಾರ ಕುರಿತಂತೆ ಸುದ್ದಿ ಸಂತೆ ನಿರಂತರವಾಗಿ ವರದಿಯನ್ನು ಮಾಡುತ್ತಿದ್ದು ಲಕ್ಷ ಲಕ್ಷ ಬಾಡಿಗೆ ವಸೂಲಿ ಮಾಡುತ್ತಿರುವ ಬೆನ್ನಲ್ಲೇ ಈ ಒಂದು ವಿಚಾರವನ್ನು ಗಂಭೀರವಾಗಿ ತಗೆದು ಕೊಂಡಿ ರುವ ಡಿಸಿಯವರು ಟೆಂಡರ್ ತಗೆದುಕೊಂಡವರಿಗೆ ಬಿಸಿ ಮುಟ್ಟಿಸಿದ್ದು
ಇತ್ತ ಟೆಂಡರ್ ತೆಗೆದುಕೊಂಡವನು ತಪ್ಪಿಸಿಕೊಳ್ಳಲು ಹೊಸದೊಂದು ತಂತ್ರಗಾರಿಕೆಯನ್ನು ಮಾಡುತ್ತಿದ್ದು ದಾಖಲೆಯೊಂದಿಗೆ ನಿಮ್ಮ ಮುಂದೆ ಸ್ಟೋರಿ ನಿರೀಕ್ಷಿಸಿ ಇಲಾಖೆಯ ಅಧಿಕಾರಿಗಳು ಬಾಡಿಗೆ ತಗೆದುಕೊಂಡವರು ಬೆಚ್ಚಿ ಬೀಳುವಂತಹ ಮೇಘಾ ಸ್ಟೋರಿ ನಾಳೆ ನಿರೀಕ್ಷಿಸಿ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..