ಧಾರವಾಡ –
ವಿಶ್ರಾಂತಿಗೂ ಜಾಗವಿಲ್ಲ ಊಟಕ್ಕೂ ಜಾಗವಿಲ್ಲ – ಇದು ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿನ ವ್ಯವಸ್ಥೆ….. ಮರಿಚೀಕೆಯಾದ ಮೂಲಭೂತ ಸೌಲಭ್ಯಗಳು…..
ಧಾರವಾಡದ ಹೊಸ ಬಸ್ ನಿಲ್ದಾಣದ ಹೆಸರಿಗೆ ಮಾತ್ರ ಹೊಸ ಬಸ್ ನಿಲ್ದಾಣ ಆದರೆ ಇಲ್ಲಿಗೆ ಬಂದರೆ ಕಟ್ಟಡ ಹೊಸದಾಗಿ ಮಾಡಿರುವ ರಸ್ತೆಯನ್ನು ಬಿಟ್ಟರೆ ಇನ್ನೂಳಿ ದಂತೆ ನಾಯಿ ಕೋಡೆಗಳಂತೆ ಬಸ್ ನಿಲ್ದಾಣದ ತುಂಬೆಲ್ಲಾ ಕಂಡು ಬರುತ್ತಿರುವ ಬೇಕರಿಗಳು ಕಾಣ ಸಿಗುತ್ತವೆ.
ಪ್ರತಿ ತಿಂಗಳಾದರೆ ಸಾಕು ಕೋಟಿ ಕೋಟಿ ಬಾಡಿಗೆ ಬರುತ್ತಿರುವುದನ್ನು ಅಧಿಕಾರಿಗಳು ಮಾತ್ರ ನೋಡುತ್ತಿ ದ್ದಾರೆ ಇದರೆ ಇಲ್ಲಿಗೆ ಮೂಲಭೂತ ಸೌಲಭ್ಯಗಳು ಇಲ್ಲವೇ ಇಲ್ಲ ಹೌದು ಇದಕ್ಕೆ ಸಾಕ್ಷಿ ನಿಲ್ದಾಣದಲ್ಲಿ ಯಾರಿಗಾದರೂ ಬಸ್ ತಪ್ಪಿದರೆ ಅಸ್ಥವ್ಯಸ್ಥವಾದರೆ ಉಳಿದುಕೊಳ್ಳಲು ಒಂದು ವಿಶ್ರಾಂತಿ ಕೋಣೆಯಾಗಲಿ ಕುಳಿತುಕೊಂಡು ಊಟ ಮಾಡಲು ಒಂದು ಜಾಗವಾ ಗಲಿ ಇಲ್ಲವೇ ಇಲ್ಲ ಇದ್ದ ಎಲ್ಲಾ ರೂಮ್ ಗಳನ್ನು ತಗೆದು ಸಿಕ್ಕ ಸಿಕ್ಕಲ್ಲೇ ಅಂಗಡಿಗಳನ್ನು ಹುಟ್ಟು ಹಾಕಿ ಬೇಕರಿ ಗಳನ್ನು ಮಾಡಿ ಕೊಟ್ಟಿದ್ದಾರೆ
ಹೀಗಾಗಿ ವಿಶ್ರಾಂತಿಗೂ ಜಾಗವಿಲ್ಲದಂತಾಗಿದ್ದು ಇನ್ನೂ ಊಟಕ್ಕಂತೂ ಎಲ್ಲಿಯೂ ಸ್ಥಳ ಇಲ್ಲವೇ ಇಲ್ಲದಂತಾಗಿದೆ ಹೀಗಾಗಿ ಯಾರಿಗಾದರೂ ಬಸ್ ತಪ್ಪಿದರೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿಯೇ ಮಲಗಬೇಕು ಅಲ್ಲೇ ಇಲ್ಲೇ ಕುಳಿತುಕೊಂಡು ಊಟ ಮಾಡಬೇಕು ಇದೇನಾ ವ್ಯವಸ್ಥೆ ಎನ್ನುವಂತಹ ಪರಸ್ಥಿತಿ ಇಲ್ಲಿಗೆ ಬಂದವರು ಎಂದು ಕೊಳ್ಳು ತ್ತಿದ್ದು
ದೊಡ್ಡದಾದ ಹೊಸ ಬಸ್ ನಿಲ್ದಾಣದಲ್ಲಿ ಇದೇಂಥಾ ವ್ಯವಸ್ಥೆ ಇದೇನಾ ಅಧಿಕಾರಿಗಳ ಕಾರ್ಯವೈಖರಿ ಎಂಬ ಮಾತುಗಳನ್ನು ಸಾರ್ವಜನಿಕರು ಹೇಳುತ್ತಿದ್ದು ಸುದ್ದಿ ಸಂತೆಯ ನಿರಂತರ ವರದಿಗಳಿಂದ ಹೊಸ ಬಸ್ ನಿಲ್ದಾಣಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರುವ ಇಲಾಖೆಯ ಅಧಿಕಾರಿಗಳು ಲಕ್ಷ ಲಕ್ಷ ಬಾಡಿಗೆಯ ನಡುವೆ ಇನ್ನಾದರೂ ಇತ್ತ ಗಮನ ಹರಿಸಿ ಮೂಲಭೂತ ಸೌಲಭ್ಯಗಳತ್ತ ಗಮನ ಹರಿಸುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……