ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ BRTS ನಲ್ಲಿ ಕಂಟ್ರೋಲರ್ ಗಳು ಕಂಟ್ರೋಲ್ ತಪ್ಪಿದಂತೆ ಕಾಣ್ತಾ ಇದೆ ಹೌದು ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳು ಸಂಚಾರಕ್ಕೆ ಹೆಸರಿ ಗಷ್ಟೇ ಸುಗಮ ಸಾರಿಗೆ ಆರಂಭಗೊಂಡು ಐದಾರು ವರ್ಷ ಕಳೆದರು ಕೂಡಾ ಒಂದು ಕಡೆಗೆ ಸರಿಯಾಗಿ ಬಸ್ ಗಳ ಸರಿಯಾದ ನಿರ್ವಹಣೆ ಇಲ್ಲ ಇನ್ನೊಂದೆಡೆ ಹತ್ತಾರು ಸಮಸ್ಯೆಗಳ ನಡುವೆ ಚಾಲಕರು ಡೂಟಿ ಮಾಡ್ತಾ ಇದ್ದು ಇದರ ನಡುವೆ ಸಧ್ಯ ಚಾಲಕರಿಗೆ ಮತ್ತೊಂದು ತಲೆನೋವು ಎದುರಾಗಿದೆ
ಹೌದು ಒಂದು ಕಡೆಗೆ ಪದೇ ಪದೇ ರಸ್ತೆಯಲ್ಲಿ ಕೈ ಕೊಡುತ್ತಿರುವ ಬಸ್ ಗಳು ಇದರ ನಡುವೆ ಅಧಿಕಾರಿಗಳ ಟಾರ್ಚರ್ ಜೊತೆಗೆ ಸರಿಯಾಗಿ ಡೂಟಿ ಮಾಡಿದ್ರು ಒಂದು ಸಮಸ್ಯೆ ಸರಿಯಾಗಿ ಡೂಟಿ ಮಾಡದಿದ್ದರು ಮತ್ತೊಂದು ಸಮಸ್ಯೆ ಎನ್ನುತ್ತಿರುವ ನಡುವೆ ಈಗ ಮತ್ತೊಂದು ತಲೆನೋವಿನ ಸಂಗತಿಯೊಂದು ನಡೆದಿದೆ.
ಹೌದು ಇಷ್ಟೆಲ್ಲಾ ಸಮಸ್ಯೆ ಗಳ ನಡುವೆ ಕಂಟ್ರೋಲ್ ಪಾಯಿಂಟ್ ನಲ್ಲಿ ಕಂಟ್ರೋಲರ್ ಗಳು ಕಿರಿಕಿರಿ ಯಿಂದ ಚಾಲಕರು ಬೇಸತ್ತಿದ್ದಾರೆ ಸಧ್ಯ ಚಿಗರಿ ಬಸ್ ನಲ್ಲಿ ಪ್ರತಿಯೊಬ್ಬ ಚಾಲಕರು ಹತ್ತಾರು ಸಮಸ್ಯೆಗಳ ನಡುವೆ ಉಸಿರು ಗಟ್ಟಿದ ವಾತಾವರಣವಿದ್ದು ಚಾಲಕರಿಗೆ ಆತ್ಮಸ್ಥೈರ್ಯವನ್ನು ನೀಡಬೇಕಾದ ಮೇಲಾಧಿಕಾರಿಗಳು ಸಮಸ್ಯೆಗಳ ನಡುವೆ ಮತ್ತೊಂದಿಷ್ಟು ಸಮಸ್ಯೆಗಳನ್ನು ಚಾಲಕರಿಗೆ ನೀಡುತ್ತಿದ್ದಾರೆ
ವಿನಾಕಾರಣ ಕಂಟ್ರೋಲರ್ ಅಧಿಕಾರಿಗಳು ಚಾಲಕ ರಿಗೆ ಟಾರ್ಚರ್ ನೀಡುತ್ತಿದ್ದು ಒಂದು ನಿಮಿಷ ಬೇಗ ಬಂದ್ರು ಕಿರಿಕಿರಿ ಒಂದು ನಿಮಿಷ ತಡವಾಗಿ ಬಂದರು ಕಿರಿಕಿರಿ ಮಾಡ್ತಾ ಇದ್ದಾರೆ.ಕಂಟ್ರೋಲರ್ ಗಳ ಕಿರಿಕಿರಿ ಯಿಂದಾಗಿ ಚಾಲಕರ ಬೇಸತ್ತಿದ್ದಾರೆ
ಹತ್ತಾರು ಸಮಸ್ಯೆ ಗಳ ನಡುವೆ ಚಾಲಕರು ಬಿಡುವಿಲ್ಲದ ಡೂಟಿ ಮಾಡ್ತಾ ಇದ್ದು ಇದನ್ನು ತಿಳಿದುಕೊಳ್ಳಬೇಕಾದ ಕಂಟ್ರೋಲರ್ ಗಳು ಕಂಟ್ರೋಲ್ ತಪ್ಪಿ ಚಾಲಕರ ಮೇಲೆ ವಿನಾಕಾರಣ ದರ್ಪ ತೋರಿಸುತ್ಯಿದ್ದಾರೆ ಡಿಸಿಯವರೇ ಇದೇನಿದು ನಿಮ್ಮ ಕೆಳಮಟ್ಟದಲ್ಲಿ ಏನೇನಾಗುತ್ತಿದೆ ಒಮ್ಮೆ ನೋಡಿ ದೊಡ್ಡ ಅನಾಹುತಗಳಾಗುವ ಮುನ್ನವೇ ಸ್ಪಂದಿಸಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..