ಧಾರವಾಡ –
ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಹೊರಗಡೆ ತಿರುಗಾಡುವಾಗವ ಛತ್ರಿ ಹಿಡಿದು ಕೊಂಡು ಹೊಗೊದು ಸಾಮಾನ್ಯ ಆದರೆ ಬಸ್ ನಲ್ಲೂ ಪ್ರಯಾಣ ಮಾಡುವಾಗ ಈ ಒಂದು ಛತ್ರಿ ಹಿಡಿದು ಕೊಂಡು ಹೋಗುವ ಪರಿಸ್ಥಿತಿ ಧಾರವಾಡ ದಲ್ಲಿ ಇದೆ.
ಹೌದು ಧಾರವಾಡದಲ್ಲಿ ಹಲವಾರು ಬಸ್ ಗಳ ಪರಿಸ್ಥಿತಿ ಇದಾಗಿದ್ದು ಹೊರಗಡೆ ತಿರುಗಾಡುವಾಗ ಇರಲಿ ಬಸ್ ನಲ್ಲೂ ಪ್ರಯಾಣ ಮಾಡಬೇಕು ಎಂದರೆ ಛತ್ರಿ ಬೇಕೆ ಬೇಕು ಇದಕ್ಕೆ ಪ್ರಮುಖ ಕಾರಣ ಹಾಳಾದ ಬಸ್ ಗಳು ಕಾರಣವಾಗಿದ್ದು ಸೋರುತ್ತಿರುವ ಬಸ್ ನಲ್ಲಿ ಛತ್ರಿ ಯೇ ಆಸರೆ ಯಾಗಿದ್ದು ಪೊಟೊ ವೈರಲ್ ಆಗಿವೆ.
ಅಳ್ನಾವರದಿಂದ ಧಾರವಾಡಕ್ಕೆ ಹೋಗುವ ಬಸ್ ತೀರ ಹಳೆಯದಾಗಿದ್ದು ಮಳೆ ಬಂದರೆ ಮೇಲ್ಚಾ ವಣಿ ಸೋರುತ್ತದೆ.ಪ್ರಯಾಣಿಕರು ಧಾರವಾಡಕ್ಕೆ ಹೋಗುವ ಬಸ್‌ನಲ್ಲಿ ಕೊಡೆ ಹಿಡಿದು ಕುಳಿತು ಮಳೆಯಿಂದ ರಕ್ಷಣೆ ಪಡೆದರು.
ಇಂಥ ಪರಿಸ್ಥಿತಿಯಲ್ಲಿ ಇಬ್ಬರು ಕುಳಿತುಕೊಳ್ಳುವ ಆಸನದಲ್ಲಿ ಒಬ್ಬರು ಮಾತ್ರ ಕುಳಿತುಕೊಳ್ಳಲು ಸಾಧ್ಯವಿದೆ.ಇದು ಹಳಿಯಾಳ ವಿಭಾಗಕ್ಕೆ ಸೇರಿದ ಬಸ್. ಇಂಥ ಸ್ಥಿತಿಯಲ್ಲಿ ಹಲವು ಬಸ್‌ಗಳಿದ್ದು ಬಸ್ ನಲ್ಲಿ ಹೋಗಬೇಕು ಎಂದರೆ ಛತ್ರಿ ಬೇಕೆ ಬೇಕು
ಅಳ್ನಾವರದಿಂದ ಧಾರವಾಡಕ್ಕೆ ಹೋಗುವ ಬಸ್ ಚಾವಣಿ ಸೋರುವ ಪರಿಣಾಮ ಪ್ರಯಾಣಿಕರು ಕೊಡೆ ಹಿಡಿದು ಮಳೆ ನೀರಿನಿಂದ ರಕ್ಷಣೆ ಪಡೆಯುವ ದೃಶ್ಯ ಗಳು ಕಂಡು ಬರುತ್ತಿದ್ದು ಪೊಟೊ ವೈರಲ್ ಆಗಿವೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..