ಇಬ್ಬರು ಸರ್ಕಾರಿ ‌ನೌಕರರು ‌ನಾಪತ್ತೆ ತನಿಖೆ ಆರಂ‌ಭಿಸಿದ ಪೊಲೀಸರು ಆತಂಕದಲ್ಲಿ ಜಿಲ್ಲೆಯ ನೌಕರರು…..

ರಾಯಚೂರು –

ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಸರ್ಕಾರಿ ನೌಕರರು ನಾಪತ್ತೆಯಾಗಿದ್ದಾರೆ.ಹೌದು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ಜೊತೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯ ಸಿಬ್ಬಂದಿ ಕೂಡ ನಾಪತ್ತೆಯಾಗಿದ್ದಾರೆ ಏಕಾಏಕಿ ಇಬ್ಬರು ನಾಪತ್ತೆಯಾಗಿದ್ದು ಭಾರಿ ಕೋಲಾಹಲ ಸೃಷ್ಟಿಸಿದ್ದು ದೊಡ್ಡ ಆತಂಕವನ್ನು ಸೃಷ್ಟಿಸಿದೆ.ಈ ಹಿಂದೆ ನಾಪತ್ತೆ ಯಾಗಿದ್ದ ಪ್ರಕಾಶ್‌ಬಾಬು ಅವರ ಪ್ರಕರಣ ಪಶ್ಚಿಮ ಠಾಣೆಯಲ್ಲಿ ದಾಖಲೆಯಾಗಿದ್ದರೆ,ಈಗ ಶಿವಪ್ಪ ಅವರು ನಾಪತ್ತೆಯಾಗಿದ್ದು,ಅವರ ಪತ್ನಿ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿ ದ್ದಾರೆ.ಸರ್ಕಾರಿ ಇಲಾಖೆಯ ಸಿಬ್ಬಂದಿ ಹೀಗೆ ದಿಢೀರ್‌ ಕಣ್ಮರೆಯಾಗುತ್ತಿರುವುದು ಹಲವಾರು ಅನುಮಾನ ಗಳಿಗೆ ಎಡೆ ಮಾಡಿಕೊಟ್ಟಿದ್ದು ಪೊಲೀಸರಿಗೆ ಇದೊಂದು ದೊಡ್ಡ ಪ್ರಮಾಣದ ತಲೆನೋವಾಗಿದೆ

ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆ ತಂಡಗ ಳನ್ನ ರಚನೆ ಮಾಡಿದ್ದು ತನಿಖೆ ಚುರುಕುಕೊಂಡಿದೆ. ಆತಂಕದ ನಡುವೆ ಇದು ಭಾರಿ ಚರ್ಚೆಗೆ ಗ್ರಾಸ ವಾಗಿದೆ. ಲೆಕ್ಕಪತ್ರ ಪರಿಶೋಧನೆಗಾಗಿ ಆಡಿಟ್ ಟೀಮ್ ಜಿಲ್ಲೆಗೆ ಬರುವುದಕ್ಕೂ ಮುಂಚೆಯೇ ರಾಯಚೂರಿನಲ್ಲಿ ಸರ್ಕಾರಿ ಇಲಾಖೆಯ ಇಬ್ಬರು ಸಿಬ್ಬಂದಿ ನಾಪತ್ತೆಯಾಗಿರುವುದು ಏಕೆ? ಆಡಿಟ್‌ಗೂ ಈ ನಾಪತ್ತೆಗೂ ಸಂಬಂಧವಿದೆಯೇ ಎಂಬ ಎಲ್ಲಾ ಆಯಾಮಗಳಿಂದ ‍ಪೊಲೀಸರು ತನಿಖೆ ನಡೆಸುತ್ತಿ ದ್ದಾರೆ.

Leave a Reply

Your email address will not be published.

error: Content is protected !!
%d bloggers like this: