ಬಳ್ಳಾರಿ
ರಾಜ್ಯದಲ್ಲಿ ಜಾತಿ ಜನಗಣತಿ ಎಂದೇ ಕರೆಯಲಾಗುತ್ತಿ ರುವ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಭರದಿಂದ ಸಾಗುತ್ತಿದೆ ಈ ನಡುವೆ ಕೆಲ ಸಮೀಕ್ಷಕರ ಮೇಲೆ ರಾಜ್ಯ ಸರ್ಕಾರ ಅಮಾನತು ಶಿಕ್ಷೆ ವಿಧಿಸಿದ್ದು ಮತ್ತೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ
ಬಳ್ಳಾರಿ ಜಿಲ್ಲೆಯಲ್ಲಿ ಜಾತಿ ಜನಗಣತಿಗೆ ಗೈರಾದ ಇಬ್ಬರು ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ.ರಾಜ್ಯದಲ್ಲಿ ಜಾತಿ ಜನಗಣತಿ ಈಗಾಗಲೇ ಅಂತ್ಯವಾಗಬೇಕಿತ್ತು. ಆದರೆ ಸಮೀಕ್ಷೆ ಮುಗಿಯದ ಹಿನ್ನೆಲೆ ಅಕ್ಟೋಬರ್ 19 ರವರೆಗೆ ಸಮೀಕ್ಷೆ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಕೆಲ ಸಮೀಕ್ಷರು ಸಮೀಕ್ಷೆಗೆ ಗೈರಾಗಿರುವುದು ಬೆಳಕಿಗೆ ಬಂದಿದೆ.
ಇದೀಗ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗೈರು ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದ್ದು ಅಮಾನತು ಗೊಂಡಿರುವ ಇಬ್ಬರು ಶಿಕ್ಷಕರ ಮಾಹಿತಿ ಯನ್ನು ಇಲಾಖೆ ಕ್ರೋಢೀಕರಿಸಲಾಗುತ್ತಿದೆ ಜಿಲ್ಲಾಧಿಕಾರಿ ಈ ಒಂದು ಅಮಾನತು ಆದೇಶ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬಳ್ಳಾರಿ……