ರಾಜ್ಯದಲ್ಲಿ ಶಿಕ್ಷಕರ ಮಾತನ್ನು ಯಾರು ಕೇಳಿಸಿಕೊಳ್ಳುತ್ತಿಲ್ಲ – ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಮಾತು…..

ಧಾರವಾಡ –

ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳಿದ್ದು ಅದರಲ್ಲೂ ಶಿಕ್ಷಕರ ಸಮಸ್ಯೆ ಗಳ ಕುರಿತು ಯಾರು ಕೇಳುತ್ತಿಲ್ಲ ಎಂದು ಹಿರಿಯ ಸಾಹಿತಿ ಕುಂ ವೀರಭ ದ್ರಪ್ಪ ಹೇಳಿದರು. ಧಾರವಾಡ ದಲ್ಲಿ ಮಾತನಾಡಿದ ಅವರು ಶಿಕ್ಷಕರ ಸಮಸ್ಯೆ ಯನ್ನು ಕೇಳದ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದರು

ಧಾರವಾಡದಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುಂವೀ ಅವರು ನಾಳೆ ರೈತರು ಬಂದ್ ಮಾಡುತ್ತಿದ್ದಾರೆ ರೈತರ ಮಾತು ಯಾರು ಕೇಳಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇನ್ನೂ ಈ ಸರ್ಕಾರದಲ್ಲಿ ಶೇ. 72 ರಷ್ಟು ಕ್ರಿಮಿನಲ್‌ಗಳಿದ್ದಾರೆ,ಚುನಾಯಿತ ಪ್ರತಿನಿಧಿ ಗಳಿದ್ದಾರೆ ಹೀಗಾಗಿ ಅವರಿಂದ ಬಡವರ ಆಕ್ರಂದನ ನೋವು,ನಲಿವಿಗೆ ಪರಿಹಾರ ಸೂಚಿಸಲು ಸಾಧ್ಯವಿಲ್ಲ ಎಂದರು.ಇದಕ್ಕಾಗಿ ಲೇಖಕರು ಏನಾದರೂ ಮಾಡ ಬೇಕು.ಲೇಖಕರು ಸುಮ್ಮನೆ ಮನೆಯಲ್ಲಿ ಕುಳಿತುಕೊ ಳ್ಳಬಾರದು.ಈಗ ಲೇಖಕರು ಬೀದಿಯಲ್ಲಿ ಇಳಿಯ ಬೇಕು.1973-78ರ ನಡುವೆ ನಡೆದ ಚಳವಳಿಗೆ ಮರುಹುಟ್ಟು ನೀಡುವ ಕೆಲಸ ಮಾಡಬೇಕಿದೆ ಎಂದರು

ಆದರೆ ಅವರು ವೃದ್ಧಾಶ್ರಯದಲ್ಲಿ ಮಲಗಿದ್ದಾರೆ. ಇಡೀ ಚಳವಳಿಗಳ ರೂಪವೇ ಮಲಗಿದಂತೆ ಆಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!
%d bloggers like this: