ಅನುಮಾನಾಸ್ಪದವಾಗಿ ಸಾವಿಗೀಡಾದ ಶಿಕ್ಷಕ – ಬೈಕ್ ನೊಂದಿಗೆ ರಸ್ತೆ ಪಕ್ಕದಲ್ಲೇ ಶವ ಪತ್ತೆ

ವಿಜಯಪುರ –

ಪಿಯು ಸೈನ್ಸ್ ಕಾಲೇಜಿನಲ್ಲಿ ಕರ್ತವ್ಯ ಮಾಡುತ್ತಿದ್ದ ಉಪನ್ಯಾಸಕರೊಬ್ಬರು ಅನುಮಾನಾಸ್ಪದವಾಗಿ ಸಾವಿಗೀ ಡಾದ ಘಟನೆ ವಿಜಯಪುರ ದಲ್ಲಿ ನಡೆದಿದೆ.ಹೌದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರ ಬೆಟ್ಟ ಎಕ್ಸ್ ಪರ್ಟ್ ಪಿಯು ಸೈನ್ಸ್ ಕಾಲೇಜು ಉಪನ್ಯಾಸ ಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಶಿನಾಥ ಅನುಮಾನಾಸ್ಪ ದವಾಗಿ ಸಾವಿಗೀಡಾದವರಾಗಿದ್ದಾರೆ.

ಮಲಗಲದಿನ್ನಿ ಗ್ರಾಮದ ಬಳಿ ಬೈಕ್ ಮೇಲೆ ತಾಳಿಕೋಟಿಗೆ ತೆರಳುವ ವೇಳೆ ಅಪಘಾತದ ರೀತಿಯಲ್ಲಿ ಅವಘಡ ಆಗಿದ್ದು ಉಪನ್ಯಾಸಕ ಕಾಶೀನಾಥ ಪುರಾಣಿಕಮಠ (27) ಶವ ಪತ್ತೆಯಾಗಿದೆ‌.ನಾಗರಬೆಟ್ಟದ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.ನಿತ್ಯ ತಾಳಿಕೋಟಿಗೆ ಹೋಗಿ ಬರುತ್ತಿದ್ದರು ನಿನ್ನೆ ರಾತ್ರಿ 8.20 ಕ್ಕೆ ಶಾಲೆಯಿಂದ ಊರಿನ ಕಡೆಗೆ ಬೈಕ್ ಮೇಲೆ ತೆರಳಿದ್ದರು.ಇದೊಂದು ಕೊಲೆ ಎಂದು ಮೃತ ಉಪನ್ಯಾಸಕನ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published.

error: Content is protected !!
%d bloggers like this: