ಧಾರವಾಡ –
ಯಾವಾಗ ಯಾರ ಮ್ಯಾಲೆ ಬೀಳ್ತಾವೆ ಗೊತ್ತಿಲ್ಲ ನೇತಾಡುತ್ತಿದ್ದರು ನೋಡಿ ನೋಡಲಾರದಂತೆ ಇದ್ದಾರೆ ಅಧಿಕಾರಿಗಳು….. ಇದು ಧಾರವಾಡ ಹೊಸ ಬಸ್ ನಿಲ್ದಾಣದ ಅವ್ಯವಸ್ಥೆ
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಹೇಗಿದೆ ಎಂಬೊದಕ್ಕೆ ಈ ಒಂದು ಚಿತ್ರಣವೇ ಸಾಕ್ಷಿ. ಹೌದು ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು ಇಲ್ಲಿನ ಅವ್ಯವಸ್ಥೆ ಒಂದೇ ಎರಡೇ ಸಾಕಷ್ಟು ಕಂಡು ಬರುತ್ತಿದ್ದು ಹೆಸರಿಗೆ ಮಾತ್ರ ಹೊಸ ಬಸ್ ನಿಲ್ದಾಣವಾಗಿದ್ದು ಸಮಸ್ಯೆಗಳು ಸಾಲು ಸಾಲಾಗಿ ಕಂಡು ಬರುತ್ತಿದ್ದು ಇದಕ್ಕೆ ತಾಜಾ ಉದಾಹರಣೆ ನೇತಾಡುತ್ತಿರುವ ಟೂಬ್ ಲೈಟ್ ಗಳು
ನಿಲ್ದಾಣದಲ್ಲಿ ಸಧ್ಯ ಬೆಳಗಾವಿ ಬಸ್ ನಿಲ್ಲುವ ಪ್ಲಾಟ್ ಫಾರಂ ನಲ್ಲಿ ಟೂಬ್ ಲೈಟ್ ಗಳು ಜೋತಾಡುತ್ತಿದ್ದು ಕುಳಿತುಕೊಳ್ಳಲು ಹಾಕಿರುವ ಸಾಮೂಹಿಕ ಆಸನದ ಮೇಲೆಯೆ ಈ ಒಂದು ಟೂಬ್ ಲೈಟ್ ಗಳು ಕೇವಲ ವಾಯರ್ ಗಳು ಮಾತ್ರ ಹಿಡಿದುಕೊಂಡಿದ್ದು ಯಾವಾಗ ಯಾವ ಸಮಯದಲ್ಲಿ ವೈರ್ ಗಳು ಕಟ್ ಆಗಿ ಬೀಳುತ್ತವೆ ಎಂಬ ಆತಂಕದ ಚಿತ್ರಣ ಕಂಡು ಬರುತ್ತದೆ.
ಇದೇನು ದೊಡ್ಡ ವಿಚಾರವು ಅಲ್ಲ ಸಮಸ್ಯೆ ಅಲ್ಲ ಆದರೆ ಕುಳಿತುಕೊಂಡವರ ಮೇಲೆ ಟೂಬ್ ಲೈಟ್ ಗಳು ಬಿದ್ದರೆ ಕೇಳಗೆ ಕುಳಿತುಕೊಂಡವರ ಪರಸ್ಥಿತಿ ದೇವರೆ ಕಾಪಾಡ ಬೇಕು ಪ್ರತಿದಿನ ಇಲ್ಲಿ ಇಲಾಖೆಯ ಅಧಿಕಾರಿಗಳು ರೌಂಡ್ಸ್ ಹಾಕ್ತಾ ಇರುತ್ತಾರೆ ನೋಡ್ತಾ ಇರುತ್ತಾರೆ ಆದರೆ ಇದೇನು ಅವರಿಗೆ ಕಣ್ಣಿಗೆ ಬಿದ್ದಿದೆಯೋ ಬಿದ್ದಿಲ್ಲ ಗೊತ್ತಿಲ್ಲ


ಆದರೆ ಸುದ್ದಿ ಸಂತೆಯ ವರದಿಯಿಂದ ಆದರೂ ಎಚ್ಚೇತ್ತುಕೊಂಡು ಇಲಾಖೆಯ ಅಧಿಕಾರಿಗಳು ಈ ಒಂದು ವ್ಯವಸ್ಥೆಯನ್ನು ಸರಿ ಮಾಡಿ ಮುಂದೆ ಆಗುವ ದೊಡ್ಡ ಸಮಸ್ಯೆಯನ್ನು ಸರಿ ಮಾಡೊದು ಅವಶ್ಯಕವಿದೆ
ಇನ್ನೂ ಈ ಒಂದು ಸಮಸ್ಯೆ ಸೇರಿದಂತೆ ಲಕ್ಷ ಲಕ್ಷ ಬಾಡಿಗೆ ತದೆದುಕೊಳ್ಳುತ್ತಿರುವವರ ಮೇಲೆ ಕ್ರಮವನ್ನು ಕೈಗೊಳ್ಳಲು ಹಿಂದೆ ಮುಂದೆ ನೋಡುವ ಇಲಾಖೆಯ ಅಧಿಕಾರಿಗಳೇ ಮೊದಲು ಈ ಕೆಲಸ ಮಾಡಿ ನಂತರ ಮಾಧ್ಯಮದವರ ಮೇಲೆ ಕೇಸ್ ಹಾಕಿಸಲು ಹೇಳಿ
ಸುದ್ದಿ ಸಂತೆ ನ್ಯೂಸ್ ಧಾರವಾಡ…..