ಹುಬ್ಬಳ್ಳಿ –
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೊಂದಿಗೆ ಪಕ್ಷದ ಭೂತ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಯುವ ಮುಖಂಡ ಅಣ್ಣಪ್ಪ ಗೋಕಾಕ್ – ಬಿಡು ವಿಲ್ಲದ ರಾಜಕೀಯ ಚಟುವಟಿಕೆಯ ನಡುವೆ ಯೂ ಪಕ್ಷದ ಸಾಮಾನ್ಯ ಭೂತ ಅಧ್ಯಕ್ಷರ ಭೇಟಿ ನೀಡಿದ ಬಿಜೆಪಿ ನಿಯೋಗ ಹೌದು
ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆಯ ಅಖಾಡ ರಂಗೇರುತ್ತಿದ್ದು ಕಾಲಿಗೆ ಚಕ್ರವನ್ನು ಕಟ್ಟಿ ಕೊಂಡವರಂತೆ ರಾಜಕೀಯ ಪಕ್ಷದವರು ಸುತ್ತಾ ಡುತ್ತಿದ್ದಾರೆ.ಗೆಲುವಿಗಾಗಿ ಏನೇಲ್ಲಾ ಕಸರತ್ತನ್ನು ಮಾಡುತ್ತಿದ್ದಾರೆ ಇನ್ನೂ ಧಾರವಾಡ ಜಿಲ್ಲೆಯಲ್ಲೂ ಕೂಡಾ ರಾಜಕೀಯ ಕಾವು ಜೋರಾಗುತ್ತಿದ್ದು ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಬಿಡುವಿಲ್ಲದ ಸುತ್ತಾಡ ಸಭೆ ಸಮಾರಂಭ ಕಾರ್ಯಕ್ರಮಗಳ ನಡುವೆಯೂ ಕೂಡಾ ಪಕ್ಷದ ಭೂತ್ ಮಟ್ಟದ ಅಧ್ಯಕ್ಷರ ಮನೆಗೆ ಭೇಟಿ ನೀಡಿದರು.
ಹೌದು ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿನ ಗಂಗಾಧರ ನಗರದಲ್ಲಿರುವ ಭೂತ ಅಧ್ಯಕ್ಷರಾದ ಶ್ರೀಧರ್ ಶಿಂಗನಳ್ಳಿ ಅವರ ಮನೆಗೆ ಕೇಂದ್ರ ಸಚಿವ ರಾದ ಪ್ರಲ್ಹಾದ ಜೋಶಿ ಯವರು ಶಾಸಕರಾದ ಮಹೇಶ್ ತೆಂಗಿನಕಾಯಿ,ಅರವಿಂದ ಬೆಲ್ಲದ, ಪಕ್ಷದ ಅಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ,ಪಾಲಿಕೆಯ ಸದಸ್ಯರಾದ ಸಂತೋಷ ಚೌಹಾನ್,ಯುವ ಮುಖಂಡರಾದ ಅಣ್ಣಪ್ಪ ಗೋಕಾಕ ರೊಂದಿಗೆ ಭೇಟಿ ನೀಡಿದರು.
ಭೂತ ಮಟ್ಟದ ಅಧ್ಯಕ್ಷರ ಮನೆಯಲ್ಲಿ ಸಾಮೂಹಿಕ ವಾಗಿ ಉಪಹಾರ ವನ್ನು ಸ್ವೀಕಾರ ಮಾಡಿ ಪ್ರಚಾರ ಕಾರ್ಯವನ್ನು ಆರಂಭ ಮಾಡಿದರು ಭಾರತೀಯ ಜನತಾ ಪಾರ್ಟಿ ಪೂರ್ವ ಕ್ಷೇತ್ರದ ಮಂಡಳ ಭೂತ ಅಧ್ಯಕ್ಷರಾದ ಶ್ರೀಧರ್ ಸಿಂಗನಹಳ್ಳಿ ರವರ ಮನೆಗೆ ಭೇಟಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೊಂದಿಗೆ ಶಾಸಕರುಗಳು ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ,ಡಾ ಕ್ರಾಂತಿಕಿರಣ್,ಯುವ ಮುಖಂಡರಾದ ಅಣ್ಣಪ್ಪ ಗೋಕಾಕ್ ಸೇರಿದಂತೆ ಹಲವರು ಉಪಸ್ಥಿತರಿ ದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..