ಬೆಂಗಳೂರು –
ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿ ಮಾಡಿ ಎಂದು ಆಗ್ರಹಿಸಿ NPs ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿ ರುವ ಧರಣಿ 16 ನೇ ದಿನಕ್ಕೆ ಕಾಲಿಟ್ಟಿದ್ದು.ಈವರೆಗೆ ಬಹುತೇಕ ಎಲ್ಲಾ ಪಕ್ಷದ ನಾಯಕರು ಮುಖಂ ಡರು ಈ ಒಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಬೇಡಿಕೆ ಈಡೇರಿಸುವ ಕುರಿತು ಭರವಸೆಯನ್ನು ನೀಡಿದ್ದಾರೆ.
ಇದು ಒಂದು ವಿಚಾರವಾದರೆ ಇನ್ನೂ ಈವರೆಗೆ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ತೇರೆದು ನೋಡುತ್ತಿಲ್ಲ ಸ್ಪಂದಿಸುತ್ತಿಲ್ಲ.ಹೀಗಾಗಿ ಹೋರಾಟ ಮುಂದುವರೆದಿದ್ದು.16ನೆ ದಿನಕ್ಕೆ ಕಾಲಿಟ್ಟಿದ್ದು ನೌಕರರು ಬೇಡಿಕೆ ಗಳಿಗೆ ಪಟ್ಟು ಹಿಡಿದು ತಮ್ಮ ಪ್ರತಿಭಟನೆ ಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಫ್ರೀಡಂಪಾರ್ಕಿನ ಮೈದಾನದಕ್ಕೆ ಆಗಮಿಸಿ ಹಲವು ನಾಯಕರು ಧರಣಿ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ನೌಕರರು ಇಲ್ಲದಿದ್ದರೆ ಯಾವುದೇ ಸರಕಾರ ಉತ್ತಮ ಆಡಳಿತ ನೀಡಲಾಗುವುದಿಲ್ಲ. ನಿರಂತರ ಹೋರಾಟಕ್ಕೆ ಮುಂದಾದರೆ ಆಡಳಿತ ವ್ಯವಸ್ಥೆಗೆ ಪೆಟ್ಟು ಬೀಳಲಿದೆ ಎಂದು ಹೇಳುತ್ತಾ ಬರುವ ದಿನಗಳಲ್ಲಿ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡುತ್ತಿದ್ದಾರೆ ಆದರೆ ಯಾವುದು ಸ್ಪಷ್ಟತೆ ಇಲ್ಲ
ನೌಕರರ ಬೇಡಿಕೆಗಳ ಬಗ್ಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಸರಕಾರ ಚರ್ಚೆ ಮಾಡಲಿದ್ದು ಧರಣಿ ಕೈಬಿಡಿ.ಅಲ್ಲದೆ, ಎನ್ ಪಿಎಸ್ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂ ತ್ರಿಗಳು ಮಾತುಕತೆ ನಡೆಸಲು ವ್ಯವಸ್ಥೆ ಮಾಡು ತ್ತೇನೆ ಎಂದು ಸಚಿವ ಡಾ ಸುಧಾಕರ್ ಹೇಳಿದ್ದಾರೆ ಆದರೆ ಈವರೆಗೆ ಮುಖ್ಯಮಂತ್ರಿ ಈ ಕಡೆಗೆ ಬಾರದ ಇರುವ ವಿಚಾರದಿಂದ ನೌಕರರು ಮತ್ತಷ್ಟು ಅಸಮಾಧಾನ ಗೊಂಡಿದ್ದಾರೆ.
ಹೀಗಾಗಿ ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ಹೋರಾಟ ವನ್ನು ಮತ್ತಷ್ಟು ತೀವ್ರಗೊಳಿಸಲು ಕರೆ ನೀಡಿದ್ದಾರೆ.ಸಂಘದ ಪದಾಧಿಕಾರಿಗಳನ್ನು ಸಿಎಂ ಅವರೊಂದಿಗೆ ಭೇಟಿ ಮಾಡಿಸುವುದಾಗಿ ನೀಡಿರುವ ಭರವಸೆಯನ್ನು ಸಂವಿಧಾನಾತ್ಮಕವಾಗಿ ಸ್ವಾಗತಿಸುತ್ತಿದ್ದೇವೆ. ಆದರೆ ಸರಕಾರದ ನಡೆಯನ್ನು ಗಮನಿಸಿಯೇ ಸಂಘದ ತೀರ್ಮಾನಗಳಾಗುತ್ತವೆ ಎಂದಿದ್ದು ಮುಂದೇನು ಆಗುತ್ತದೆ ಎಂಬೊಂದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..