ಮಂಗಳೂರು –
ಸಮುದ್ರ ಮಧ್ಯೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಉಳ್ಳಾಲದ ಅಳಿವೆ ಬಾಗಿಲಿನ ಸಮೀಪದ ಸಮುದ್ರದ ಮಧ್ಯೆದಲ್ಲಿ ಈ ಒಂದು ದುರಂತ ಸಂಭವಿಸಿದೆ.
22 ಜನರಿದ್ದ ಪರ್ಸಿನ್ ಮೀನುಗಾರಿಕೆ ಬೋಟ್ ವೊಂದು ಮೀನುಗಾರಿಕೆಗೆ ತೆರಳಿ ಮರಳಿ ಬರುವಾಗ ಅವಘಡ ಸಂಭವಿಸಿದೆ. ನಸುಕಿನಲ್ಲಿ ಮರಳಿ ಹಿಂತಿರುಗುತ್ತಿದ್ದಾಗ ಭಾರೀ ಅಲೆಗಳ ಹೊಡೆತಕ್ಕೆ ಬೋಟ್ ಮುಳುಗಡೆಯಾಗಿದೆ.
ಉಳ್ಳಾಲದ ಅಳಿವೆಬಾಗಿಲಿನ ಸಮೀಪ ಸಮುದ್ರ ಮಧ್ಯೆ ದುರಂತ ನಡೆದಿದೆ ಎನ್ನಲಾಗುತ್ತಿದೆ. ಬೋಟಿನಲ್ಲಿದ್ದ 22 ಜನ ಮೀನುಗಾರರ ಪೈಕಿ 6 ಮಂದಿ ನಾಪತ್ತೆಯಾಗಿದ್ದಾರೆ. ಇವರೆಲ್ಲರೂ ಮಂಗಳೂರಿನ ಪಾಂಡುರಂಗ ಸುವರ್ಣ (58), ಪ್ರೀತಮ್ (25), ಚಿಂತನ್(21), ಜಿಯಾವುಲ್ಲಾ (32), ಅನ್ಸಾರ್ (31), ಹಸೈನಾರ್ (25) ಎಂಬುವರಾಗಿದ್ದಾರೆ. ಇವರೆಲ್ಲರೂ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಬೋಟಿನಲ್ಲಿ ಭಾರೀ ಪ್ರಮಾಣದಲ್ಲಿ ಮೀನುಗಳ ಸಂಗ್ರಹ ಇತ್ತು. ಹಿಂತಿರುಗಿ ಬರುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಬೋಟ್ ಮಗುಚಿದೆ ಎನ್ನಲಾಗುತ್ತಿದೆ. ಇತರೆ ಮೀನುಗಾರಿಕಾ ದೋಣಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. 16 ಮಂದಿ ಡಿಂಗಿ ಮೂಲಕ ಈಜಿ ಬೇರೆ ದೋಣಿಗಳ ಮೂಲಕ ಪಾರಾಗಿದ್ದಾರೆ.ಇನ್ನೂಳಿದವರ ಪತ್ತೆಗಾಗಿ ಸಮುದ್ರದ ದಂಡೆಯಲ್ಲಿ ಶೋಧ ಕಾರ್ಯವನ್ನು ಮಾಡಲಾಗುತ್ತಿದೆ ಇನ್ನೂ ಸುದ್ದಿ ತಿಳಿದ ಮಂಗಳೂರಿನ ಉಳ್ಳಾಲ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿ ಕಾರ್ಯಾಚರಣೆ ಮಾಡ್ತಾ ಇದ್ದಾರೆ.