ದಾವಣಗೆರೆ –
ಪುಟ್ಟ ಮಗುವಿನೊಂದಿಗೆ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ ಮೃತರನ್ನು 25 ವರ್ಷದ ನಿಖಿತಾ ಹಾಗೂ 11 ತಿಂಗಳ ಮಗು ಅನೀಶ್ ಎಂದು ಗುರುತಿಸಲಾಗಿದೆ.
ಜಗಳೂರು ಪಟ್ಟಣದ ಜೆಸಿಆರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದೆ ಮೊದಲು ಮಗನಿಗೆ ನೇಣು ಬಿಗಿದು ನಂತರ ತಾನು ಅದೇ ಹಗ್ಗದಲ್ಲಿ ನೇಣಿಗೆ ಶರಣಾಗಿದ್ದಾರೆ ಮಹಿಳೆ
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ಇಂಜಿನಿಯರ್ ಮನೋಜ್ ಕುಮಾರ್ ಪತ್ನಿ ನಿಖಿತಾ ತವರೂರು ಜಗಳೂರಿಗೆ ಬಂದಿದ್ದರು.ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ನಿಖಿತಾ ತಂದೆ ತಾಯಿಯರಿಬ್ಬರೂ ಶಿಕ್ಷಕ ರಾಗಿದ್ದು ಅವರು ಬೆಳಗ್ಗೆ ಶಾಲೆಗೆ ಹೋದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.