ನರೇಂದ್ರ –
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮತ್ತೆ ಪುನಃ ಇನ್ನೊಮ್ಮೆ ಶಾಸಕರಾಗಲಿ ಎಂದುಕೊಂಡು ಧಾರವಾಡದ ನರೇಂದ್ರ ಗ್ರಾಮದಿಂದ ಅಭಿಮಾನಿ ಯೊರ್ವರು ಉರುಳು ಸೇವೆ ಆರಂಭ ಮಾಡಿದ್ದಾರೆ.ಕಳೆದ ಎರಡು ವರ್ಷಗಳಿಂದ ಈ ಒಂದು ಕಾರ್ಯವನ್ನು ಗ್ರಾಮದ ಈಶ್ವರ ಅಂಬಣ್ಣ ವರ ಮಾಡಿಕೊಂಡು ಬರುತ್ತಿದ್ದಾರೆ.
ಎರಡನೇ ವರ್ಷದ ಉರುಳು ಸೇವೆಗೆ ಶಾಸಕ ಅಮೃತ ದೇಸಾಯಿ ಗ್ರಾಮದಲ್ಲಿ ಚಾಲನೆ ನೀಡಿದರು.ಗ್ರಾಮದ ವಿಠ್ಠಲ ಮಂದಿರದ ಮುಂದೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಅಮೃತ ದೇಸಾಯಿ ಪಾಲ್ಗೊಂಡು ಅಭಿಮಾನಿಗೆ ಸಹಾಯಧನವನ್ನು ಮಾಡಿ ಶುಭ ಹಾರೈಸಿ ಚಾಲನೆ ನೀಡಿದರು.
ಪ್ರಮುಖವಾಗಿ ಬರುವ ಚುನಾವಣೆಯಲ್ಲಿ ಪುನಃ ಇನ್ನೊಮ್ಮೆ ಶಾಸಕರಾಗಿ ಆಯ್ಕೆಯಾಗಲಿ ಹಾಗೇ ದೇಶ ನಾಡಿಗೆ ಮಳೆ ಬೆಳೆ ಸಮೃದ್ದವಾಗಿ ಬರಲಿ ಒಳ್ಳೇಯದಾಗಲಿ ಎಂದುಕೊಂಡು ಈಶ್ವರ ಅವರು ಈ ಒಂದು ಉರುಳು ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು ಎರಡನೇಯ ವರ್ಷದ ಉರುಳು ಸೇವೆ ಆರಂಭಗೊಂಡಿದೆ.
ಧಾರವಾಡದ ನರೇಂದ್ರ ಗ್ರಾಮದಿಂದ ಈ ಒಂದು ಉರುಳು ಸೇವೆ ಆರಂಭಗೊಂಡಿದ್ದು 450 ಕಿಲೋ ಮೀಟರ ವರೆಗೆ ಸಾಗಲಿದೆ.ಈ ಒಂದು ಸಂದರ್ಭ ದಲ್ಲಿ ಗಂಗಮ್ಮ ನಿರಂಜನ,ತರಕಯ್ಯಾ ಹಿರೇಮಠ ಶಂಕರ ಕೋಮಾರದೇಸಾಯಿ,ಅಶೋಕ ಹುಬ್ಬಳ್ಳಿ. ನಾಗರಾಜ ಹಟ್ಟಿಹೋಳಿ,ವಿಜಯ ದೇಶಮುಖ, ಮಂಜುನಾಥ ಈಳಿಗೇರ,ಚಂದ್ರಗೌಡ ಪಾಟೀಲ, ಅಪ್ಪಣ್ಣ ಹಡಪದ,ಲಕ್ಷ್ಮೀ ಶಿಂಧೆ,ಕಲ್ಲವ್ವ ತಿಪ್ಪನ್ನವರ ಶಿವಮೂರ್ತಿ ಅಂಬಣ್ಣವರ,ಚನ್ನವೀರಗೌಡ ಪಾಟೀಲ,ರಾಯನಗೌಡ ಪಾಟೀಲ,ಬಾಪು ದೇಸಾಯಿ,ಕಲ್ಲಪ್ಪ ಅಂಗಡಿ,ಸೇರಿದಂತೆ ಗ್ರಾಮದ ಗುರು ಹಿರಿಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..