ಕುಂದಗೋಳ –
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಕುಂದಗೋಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರಮಾಣದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ರ ನಾಯಕತ್ವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರುತ್ತಿದ್ದಾರೆ.
ಹೌದು ಈ ಒಂದು ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ಅಗಡಿ ಗ್ರಾಮದ 30 ಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಭಾಜಪ ಸೇರ್ಪಡೆಯಾದರು.

ಎಂ ಆರ್ ಪಾಟೀಲರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಭಾಜಪ ತತ್ವಸಿದಾಂತಗಳನ್ನು ಒಪ್ಪಿ ಅಗಡಿ ಗ್ರಾಮದ 30ಕ್ಕು ಹೆಚ್ಚು ಕಾಂಗ್ರೆಸ್ ಕಾರ್ಯಕ ರ್ತರು ಭಾಜಪ ಅಭ್ಯರ್ಥಿ ಎಂ ಆರ್ ಪಾಟೀಲ ಮತ್ತು ಶ್ರೀಮತಿ ಶಶಿಕಲಾಬಾಯಿ ಪಾಟೀಲ ಅವರ ಸಮ್ಮುಖದಲ್ಲಿ ನೀಲಮ್ಮ ತಳವಾರ,ಚನ್ನಮ್ಮ ತಳವಾರ, ದೇವಕ್ಕ ಡೊಳ್ಳಿನ, ನಿಲಾಂಬಿಕೆ ತಳವಾರ, ಕಲ್ಲಪ್ಪ ತಳವಾರ, ಬಸಪ್ಪ ತಳವಾರ, ಯಲ್ಲಪ್ಪ ತಳವಾರ ಸೇರಿದಂತೆ ಅನೇಕರು ಸೇರ್ಪಡೆಯಾದರು ಈ ಸಂದರ್ಭದಲ್ಲಿ ಭಾಜಪ ಮುಖಂಡರಾದ ಮಹೇಶಗೌಡ್ರ ಪಾಟೀಲ,ಕಲ್ಲಪ್ಪ ಹುಲಗೇರಿ, ಉಮೇಶ್ ಕುಸುಗಲ್ ಸೇರಿದಂತೆ ಹಲವತು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..






















