ಬೆಳಗಾವಿ –
ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸಾವಿಗೀಡಾದ ಘಟನೆ ಬೆಳಗಾವಿ ಯಲ್ಲಿ ನಡೆದಿದೆ.ಹೌದು ನಗರದಲ್ಲಿ ಈ ಒಂದು ಧಾರುಣ ಘಟನೆ ನಡೆದಿದೆ. ಘಟನೆ ಯಲ್ಲಿ ಒಂದೇ ಕುಟುಂಬದ ಮೂವರು ಮೃತರಾಗಿದ್ದಾರೆ.
ಬೆಳಗಾವಿಯ ಜಿಲ್ಲೆಯ ಶಾಹುನಗರದಲ್ಲಿ ಈ ಒಂದು ಘಟನೆ ನಡೆದಿದೆ.ಮೃತರು ಮೂಲತಃ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದ ವರಾಗಿದ್ದು ಅಜ್ಜ ಈರಪ್ಪಾ ಗಂಗಪ್ಪಾ ಲಮಾಣಿ (50), ಅಜ್ಜಿ ಶಾಂತವ್ವ ಈರಪ್ಪಾ ಲಮಾಣಿ (45) ಹಾಗೂ ಮೊಮ್ಮಗಳು ಅನ್ನಪೂರ್ಣ ಹುನ್ನಪ್ಪ ಲಮಾಣಿ (8) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೆಯಲ್ಲಿ ನೀರು ಕಾಯಿಸಲು ಕ್ವಾಯಿಲ್ ಹಾಕಿದ ವೇಳೆ ಮೊಮ್ಮಗಳಿಗೆ ವಿದ್ಯುತ್ ತಗುಲಿದ್ದು ಮೊಮ್ಮಗಳನ್ನು ಕಾಪಾಡುವ ಸಲುವಾಗಿ ಅಜ್ಜ, ಅಜ್ಜಿ ಹೋಗಿದ್ದಾರೆ.ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶವಾಗಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..