ಬೆಂಗಳೂರು –
ಬೊಜ್ಜು ಕರಗಿಸಿ, ತೂಕ ಇಳಿಸದಿದ್ದರೆ, ಬಡ್ತಿ ಇಲ್ಲ.ಬಡ್ತಿ ಬೇಕಾದರೆ ಮೊದಲು ಬೊಜ್ಜು ಕರಗಿಸಿ ಇದರೊಂದಿಗೆ ತೂಕ ಇಳಿಸಿ ಹೀಗೆಂದು ರಾಜ್ಯ ಸಶಸ್ತ್ರ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಖಡಕ್ ಸೂಚನೆ.
ರಾಜ್ಯದ ಕೆಎಸ್‌ಆರ್‌ಪಿ, ಐಆರ್‌ಬಿ ಪಡೆಗಳು ಹಾಗೂ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದ ಅಗತ್ಯವಿದ್ದು, ಸರಾಸರಿ ತೂಕಕ್ಕಿಂತಲೂ 10 ಕೆಜಿ ಅಥವಾ ಅದಕ್ಕಿಂತಲೂ ಹೆಚ್ಚು ತೂಕವಿರುವ ಸಿಬ್ಬಂದಿಗಳು ತೂಕ ಇಳಿಸುವಂತೆ ಅಲೋಕ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.
ಸಿಬ್ಬಂದಿಗಳು ತೂಕ ಇಳಿಸುವ ಸಲುವಾಗಿ 5 ಕಿ.ಮೀ ಓಟ ಅಥವಾ ನಡುಗೆ ಹಾಗೂ ದೈಹಿಕ ಚಟುವಟಿ ಕೆಗಳನ್ನು ನಡೆಸಲಾಗುತ್ತದೆ.
ಇದರಿಂದ ಅಧಿಕ ತೂಕ ಇರುವ ಅಧಿಕಾರಿ ಮತ್ತು ಸಿಬ್ಬಂದಿ ಏ.30ರ ಒಳಗೆ ತೂಕ ಇಳಿಸಿ ಕೊಳ್ಳಬೇಕೆಂದು ಎಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.
40 ವರ್ಷದೊಳಗಿನವರು 10 ಕೆಜಿ, 40 ರಿಂದ 50 ವರ್ಷದೊಳಗಿನವರು 5 ಕೆಜಿ, 50-55 ವರ್ಷದೊಳಗಿನವರು 2.5 ಕೆಜಿ ತೂಕ ಇಳಿಸಿಕೊಳ್ಳಬೇಕು ಎಂದು ಸೂಚನೆ ನೀಡಿರುವ ಅಲೋಕ್ ಕುಮಾರ್ ಅವರು ಸಿಬ್ಬಂದಿಗಳು ತೂಕ ಇಳಿಸಲು ಏಪ್ರಿಲ್ 30ರವರೆಗೂ ಗಡುವು ನೀಡಿದ್ದಾರೆಂದು ತಿಳಿದುಬಂದಿದೆ.