ರಾಯಚೂರು –
ಶಾಲೆಯ ನಂತರ ಹಣ್ಣು ಮಾರಾಟ ಮಾಡಿ ಮನೆ ಬಾಡಿಗೆ ಕಟ್ಟುವ 4ನೇ ತರಗತಿ ವಿದ್ಯಾರ್ಥಿ – ಕೆಲಸ ವಿಲ್ಲವೆಂದು ಗೋಳಾಡುವವರಿಗೆ ಮಾದರಿ ಯಾದ ಆಕಾಶ್ …..ಸರ್ಕಾರಿ ಶಾಲೆಯ ಮಕ್ಕಳು ಓದಿನೊಂದಿಗೆ ಬದುಕು ನಡೆಸಲು ಸೈ
ಸಾಮಾನ್ಯವಾಗಿ ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಎಂಬೊದಕ್ಕೆ ರಾಯಚೂರಿಗೆ 4ನೇ ತರಗತಿಯ ಆಕಾಶ್ ಸಾಕ್ಷಿ.ಹೌದು ಅದೇಷ್ಟೊ ಯುವಕರು ಕೆಲಸ ಸಿಗುತ್ತಿಲ್ಲ ಕೆಲಸವಿಲ್ಲ ಎಂದುಕೊಂಡು ಗೋಳಾಡುತ್ತಿರುತ್ತಾರೆ ಹೀಗಿರುವಾಗ ಈ ಒಂದು ಬಾಲಕ ಶಾಲೆ ನಂತರ ಸೀಬೆ ಹಣ್ಣನ್ನು ಮಾರಾಟ ಮಾಡಿ ಸಣ್ಣ ವಯಸ್ಸಿನಲ್ಲಿಯೇ ಮನೆ ಬಾಡಿಗೆ ಕಟ್ಟುತ್ತಿದ್ದಾನೆ.
ಹೌದು ಶಾಲೆ ಮುಗಿಯುತ್ತಿದ್ದಂತೆ ಮನೆಗೆ ಬಂದು ಶಾಲೆಯ ಡ್ರೇಸ್ ನಲ್ಲಿಯೇ ಸಿಬೆಕಾಯಿ, ಸಿಬೆಕಾಯಿ ಎನ್ನತ್ತಾ ಬುಟ್ಟೆಯನ್ನು ತಗೆದು ಕೊಂಡು ಎಂದು ಪುಟ್ಟ ಬುಟ್ಟಿಯೊಂದಿಗೆ ಬಸ್ ನಿಲ್ದಾಣಕ್ಕೆ ಹಾಜರಾಗುತ್ತಾನೆ. ರಾಯಚೂರು ಜಿಲ್ಲೆಯ ಲಿಂಸುಗೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪುಟ್ಟ ಹುಡುಗನೊಬ್ಬ ಮಾರಾಟ ಮಾಡುತ್ತಾ ತನ್ನ ಮನೆಯನ್ನು ನಡೆಸುತ್ತಿದ್ದಾನೆ.
ಇಂದು ಅದೇಷ್ಟೋ ಹುಡುಗರು ಕೆಲಸವಿಲ್ಲ ವೆಂದು ಗೋಳಾಡುತ್ತಾರೆ.ಆದರೆ ಈ ಹುಡುಗ ಮಾತ್ರ ಸಣ್ಣ ವಯಸ್ಸಿನಲ್ಲಿಯೇ ಜೀವನ ನಡೆಸುತ್ತಾ ಹಲವಾರು ಯುವಕರಿಗೆ ಮಾದರಿ ಯಾಗಿದ್ದಾನೆ.ನಾಲ್ಕನೇ ತರಗತಿಯಲ್ಲಿ ಓದುತ್ತಿ ರುವ ಆಕಾಶ್ ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸರ್ಕಾರಿ ಶಾಲೆಯ ಮಕ್ಕಳ ಜೀವನ ಕೇವಲ ಓದು, ಆಟಕ್ಕೆ ಮಾತ್ರ ಸೀಮಿತವಾಗಿರದೇ ಸಣ್ಣ ವಯಸ್ಸಿ ನಲ್ಲಿ ಇದರೊಂದಿಗೆ ಏನಾದರೂ ಮಾಡಬಹುದು ಎಂಬೊದನ್ನುೂ ಈ ಒಂದು ಬಾಲಕ ತೋರಿಸಿ ಕೊಟ್ಟಿದ್ದಾನೆ.ಪುಟ್ಟ ಪುಟ್ಟ ಮಕ್ಕಳ ಮೇಲೆ ಹಲವು ಜವಾಬ್ದಾರಿಗಳಿರುತ್ತವೆ ಶಾಲೆಯಿಂದ ಬರುತ್ತಲೇ ತಂದೆ-ತಾಯಿ ಕೆಲಸದಲ್ಲಿ ಕೈಗೂಡಿಸಿ ಕುಟುಂಬಕ್ಕೆ ನೆರವು ಆಗಬೇಕು ಎನ್ನುವ ಮಾತಿಗೆ ಆಕಾಶ್ ಪ್ರೇರಣೆಯಾಗಿದ್ದಾನೆ.
ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ಬಂದ ಹಣದಲ್ಲಿ ಬಾಡಿಗೆ ಮನೆಯ ಹಣ ಕಟ್ಟುತ್ತಿರುವ ಈ ಹುಡುಗನೇ ಮಾದರಿಯಾಗಿ ಉದಾಹರಣೆಯಾಗಿ ದ್ದಾನೆ ಜೀವನವು ಅಂದ್ರೆ ಹಿಂಗೂ ಇರುತ್ತೆ ಎಂಬೊದನ್ನು ಈ ಒಂದು ಕಾರ್ಯದ ಮೂಲಕ ಆಕಾಶ್ ನಿರೂಪಿಸಿದ್ದಾನೆ.
ಸುದ್ದಿ ಸಂತೆ ನ್ಯೂಸ್ ರಾಯಚೂರು…..