ರಾಮನಗರ –
ಲಂಚವನ್ನು ತಗೆದುಕೊಳ್ಳುವಾಗ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಮನಗರ ದಲ್ಲಿ ನಡೆದಿದೆ.ಕೇಬಲ್ ಅಳವಡಿಕೆಗೆ ಅನುಮತಿ ನೀಡಲು ವಿದ್ಯುತ್ ಗುತ್ತಿಗೆದಾರನಿಂದ ಕಚೇರಿ ಯಲ್ಲಿ ₹30 ಸಾವಿರ ಲಂಚ ಪಡೆಯುತ್ತಿದ್ದ ಬೆಸ್ಕಾಂ ನ ಬಿಡದಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ ಬಲೆಗೆ ಬಿದ್ದ ವರಾಗಿದ್ದಾರೆ
ಹಣದ ಸಮೇತ ಬಂಧಿಸಿದ್ದು ವಿದ್ಯುತ್ ಗುತ್ತಿಗೆ ದಾರ ಅನಂತರಾಜ್ ಎಂಬುವರು ಬಿಡದಿ ಭಾಗ ದಲ್ಲಿ ಕೇಬಲ್ ಅಳವಡಿಸಲು ಗುತ್ತಿಗೆ ಪಡೆದಿದ್ದರು. ಗುತ್ತಿಗೆ ಮಂಜೂರಾತಿಯ ಪತ್ರಕ್ಕೆ ಸಹಿ ಮಾಡಲು ₹ 1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಮುಂಗಡ ವಾಗಿ ₹ 30 ಸಾವಿರ ತಂದು ಕೊಡು ವಂತೆ ಹೇಳಿದ್ದರು ಈ ಕುರಿತು ಅನಂತರಾಜ್ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಅನಂತ ರಾಜ್‌ಗೆ ಕರೆ ಮಾಡಿದ್ದ ಪುಟ್ಟಸ್ವಾಮಿ ಛತ್ರ ಗ್ರಾಮ ದಲ್ಲಿರುವ ತನ್ನ ಕಚೇರಿಗೆ ಹಣ ತಲುಪಿಸುವಂತೆ ಸೂಚಿಸಿದ್ದರು
ಈ ಕುರಿತು ಮಾಹಿತಿ ಪಡೆದು ತಂಡ ಅನಂತ ರಾಜ್ ಅವರಿಂದ ₹ 30 ಸಾವಿರ ಲಂಚ ಪಡೆ ಯುತ್ತಿದ್ದಾಗ ಬಂಧಿಸಿದ್ದು ಸದ್ಯ ಅಧಿಕಾರಿಯನ್ನು ವಶಕ್ಕೆ ತೆಗೆದುಕೊಂಡಿರುವ ಲೋಕಾಯುಕ್ತ ಟೀಮ್ ಮುಂದಿನ ಕಾರ್ಯವನ್ನು ಕೈಗೊಂಡಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ರಾಮನಗರ…..