ಹೊನ್ನಾಳಿ –
ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾಳಿ ಯಲ್ಲಿ ನಡೆದಿದೆ ಹೌದು ಫೈನಾನ್ಸ್ ಕಂಪನಿಯವರ ಕಿರುಕುಳಕ್ಕೆ ರಾಜ್ಯದಲ್ಲಿ ಜನರು ಬೇಸತ್ತಿದ್ದು ಇದರ ನಡುವೆ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸರ್ಕಾರ ಎಚ್ಚರಿಕೆಯ ನಡುವೆ ದಾವಣಗೆರೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಫೈನಾನ್ಸ್ ಕಂಪನಿಯವರ ಕಿರುಕುಳ ತಾಳದೇ ಶಿಕ್ಷಕಿಯೊಬ್ಬರು ಕಾಣೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಹೊನ್ನಾಳಿಯ ಸರ್ಕಾರಿ ಶಾಲೆ ಶಿಕ್ಷಕಿ ಪುಷ್ಪ ಲತಾ (46) ಅವರು ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದರು ಸಧ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇರುವ ಬಗ್ಗೆ ಕುಟುಂಬದವರು ವ್ಯಕ್ತಪಡಿಸಿದ್ದಾರೆ. ಹೊನ್ನಾಳಿ ಪಟ್ಟಣದ ರಾಘವೇಂದ್ರ ಮಠದ ಸಮೀಪ ತುಂಗಭದ್ರಾ ನದಿ ದಂಡೆಯ ಬಳಿ ಪುಷ್ಪಲತಾ ಅವರ ಚಪ್ಪಲಿ ದೊರೆತಿವೆ
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದರಿಂದ ಮೃತದೇಹ ಪತ್ತೆಗೆ ಅಗ್ನಿಶಾಮಕ ದಳ ಸಿಬ್ಬಂದಿ, ಮುಳುಗುತಜ್ಞರು, ಮೀನುಗಾರರ ನೆರವಿನೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ ಹಾಗೂ ಅನುದಾನಿತ ಶಾಲೆಯ ಶಿಕ್ಷಕ ಹಾಲೇಶ್ ದಂಪತಿಯು ಮನೆ ಕಟ್ಟಲು ₹ 30ರಿಂದ ₹ 40 ಲಕ್ಷ ಸಾಲ ಮಾಡಿದ್ದರು. ಸಾಲ ಮರು ಪಾವತಿ ಮಾಡದ್ದರಿಂದ ಫೈನಾನ್ಸ್ ಕಂಪನಿ ಯವರು ದಂಪತಿಗೆ ನೋಟಿಸ್ ನೀಡಿದ್ದರು.
ಸಾಲ ಮರುಪಾವತಿ ಮಾಡುವಂತೆ ಮನೆಗೆ ತೆರಳಿದ್ದಾಗ ಹಲ್ಲೆ ನಡೆಸಿದ್ದರು ಎಂದು ಪುಷ್ಪಲತಾ ಹಾಗೂ ಹಾಲೇಶ್ ದಂಪತಿ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಗೆ ಫೈನಾನ್ಸ್ ಕಂಪನಿಯವರು ದೂರು ನೀಡಿದ್ದರು. ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಬಳಿಕ ಫೈನಾನ್ಸ್ ಕಂಪನಿಯವರು ದೂರು ವಾಪಸ್ ಪಡೆದಿದ್ದರು.
ಮಿತಿಮೀರಿದ ಸಾಲದಿಂದಾಗಿ ತೀವ್ರ ನೊಂದಿದ್ದ ದಂಪತಿಯು ಮನೆ ಮಾರಾಟಕ್ಕೆ ಮುಂದಾಗಿದ್ದರು. ಸದ್ಯ ಕಾಣೆಯಾಗಿದ್ದಾರೆ ಎಂಬ ದೂರು ದಾಖಲಿಸಿಕೊಂಡಿ ರುವ ಬೆನ್ನಲ್ಲೇ ಈಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಹೊನ್ನಾಳಿ …..