ಬೆಂಗಳೂರು –
ಕೈತಪ್ಪಿದ ಮುಂಬಡ್ತಿ ತನಿಖೆಯಲ್ಲಿ ಪತ್ತೆಯಾದ ಲೋಪದೋಷ ನೌಕರರ ಸಂಘ ನೀಡಿದ ದೂರಿನ ತನಿಖೆಯಲ್ಲಿ ಕಂಡ ಬಂದ ಎಡವಟ್ಟು ಹೌದು ಇಂತಹ ದೊಂದು ಎಡವಟ್ಟು ಕಂಡು ಬಂದಿದೆ ಸಮಾಜ ಕಲ್ಯಾಣ ಇಲಾಖೆಗೆ ನೀಡಿದ ದೂರಿನ ತನಿಖೆಯಲ್ಲಿ ಈ ಒಂದು ಲೋಪದೋಷಗಳು ಬೆಳಕಿಗೆ ಬಂದಿದೆ.
ಉಪನ್ಯಾಸಕ ವೃಂದದಿಂದ ಪ್ರಾಂಶುಪಾಲ ಹುದ್ದೆಗೆ 2016ರ ಅ 31ರಿಂದ 2022ರವರೆಗೆ ಮುಂಬಡ್ತಿ ನೀಡುವಾಗ ರೋಸ್ಟರ್ ಬಿಂದುಗ ಳನ್ನು ಪಾಲಿಸಿಲ್ಲ ಎಂದು ಎಸ್‌ಸಿ ಎಸ್‌ಟಿ ನೌಕರರ ಸಂಘವು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿತ್ತು.
ಈ ಬಗ್ಗೆ ತನಿಖೆ ನಡೆಸಿದ್ದ ಇಲಾಖೆ ಹೈದರಾಬಾದ್- ಕರ್ನಾಟಕ ಭಾಗದಲ್ಲಿ ಎಸ್‌ಸಿ 7 ಎಸ್‌ಟಿ 2 ಉಳಿಕೆ ವೃಂದದಲ್ಲಿ ಎಸ್‌ಸಿ 68 ಎಸ್‌ಟಿ 11 ಪ್ರಾಂಶುಪಾಲ ಹುದ್ದೆಗಳನ್ನು ನೀಡದಿರುವುದನ್ನು ಗುರುತಿಸಿತ್ತು ಈ ತನಿಖಾ ವರದಿಯ ಆಧಾರದಲ್ಲಿ ಎಸ್‌ಸಿ ಎಸ್‌ಟಿ ಸಂಘವು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ದೂರು ನೀಡಿತ್ತು.
ದೂರಿನ ಹಿನ್ನಲೆಯಲ್ಲಿ ತನಿಖೆಯನ್ನು ಕೈಗೊಂಡ ನಿಯೋಗವು ಸಮಗ್ರವಾಗಿ ತನಿಖೆ ಮಾಡಿದ್ದು ಸಧ್ಯ ವಿಚಾರಗಳು ಬೆಳಕಿಗೆ ಬಂದಿದ್ದು ವರದಿ ಸಿದ್ದತೆ ಮಾಡಿದ್ದು ಸಲ್ಲಿಕೆಯಾಗಲಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……