This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

PSI ಯಾಗಿ ಆಯ್ಕೆಯಾದ ಸರಕಾರಿ ಶಾಲೆಯ ಪ್ರೊಡಕ್ಟ ವಿದ್ಯಾರ್ಥಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸಾಧನೆಗೆ ಹರಿದು ಬರುತ್ತಿದೆ ಶುಭಾಶಯಗಳ ಮಹಾಪೂರ…..


ಬೆಂಗಳೂರು

PSI ಯಾಗಿ ಆಯ್ಕೆಯಾದ ಸರಕಾರಿ ಶಾಲೆಯ ಪ್ರೊಡಕ್ಟ ವಿದ್ಯಾರ್ಥಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸಾಧನೆಗೆ ಹರಿದು ಬರುತ್ತಿದೆ ಶುಭಾ ಶಯಗಳ ಮಹಾಪೂರ ಹೌದು ಶಾಲೆಯ ಹಳೆಯ ವಿದ್ಯಾರ್ಥಿಯ ಸಾಧನೆ ಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆನೆ.ಎಂಬ ಮಾಹಿತಿ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

ಶಾಲೆಯ ಹಳೆಯ ವಿದ್ಯಾರ್ಥಿ ಪ್ರವೀಣ ಬಸಪ್ಪ ಅಂಬಿಗೇರ ಪೊಲೀಸ್ ಸಬ್ ಇನ್ಸ್ಪೆಕ್ಟರ್ (KSISF)(07 ನೇ ರ್ಯಾಂಕ್) ಆಗಿ ಆಯ್ಕೆ ಆಗಿದ್ದು ತುಂಬಾ ಹರ್ಷವನ್ನುಂಟು ಮಾಡಿದೆ. ಆತನಿಗೆ ತುಂಬು ಹೃದಯದ ಅಭಿನಂದನೆಗಳು.
ಪ್ರವೀಣ ತುಂಬಾ ಪ್ರತಿಭಾವಂತ.ಎಲ್ಲಾ ವಿಷಯ ಗಳಲ್ಲೂ ಮುಂದು.

ನಾನು ಇಂಗ್ಲೀಷ Lesson ಒಂದು ಸಲ ಓದಿ ಮರಳಿ ಅವನಿಂದ ಓದಿಸಿದಾಗ ಒಂದೇ ಒಂದು ತಪ್ಪಿಲ್ಲದಂತೆ ನಿರರ್ಗಳವಾಗಿ ಓದುತ್ತಿದ್ದ ಗಣಿತ ಮತ್ತು ವಿಜ್ಞಾನದಲ್ಲಂತೂ ಎತ್ತಿದ ಕೈ ಬರವಣಿಗೆ ಸುಪರ.ನಮ್ಮ ಶಾಲೆಯಿಂದ ಹೋದ ನಂತರ ಸರಕಾರಿ ಪ್ರೌಢಶಾಲೆಯಲ್ಲೆ ಕಲಿತ.ಮುಂದೆ ಪಿಯುಸಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡ ಅದು ಕೂಡಾ ಸರಕಾರಿ ಪಿ.ಯು ಕಾಲೇಜ್ ಸುರೇಬಾನ ತಾ ರಾಮದುರ್ಗ.

ಅಲ್ಲಿ ಆತನ ಸಾಧನೆ ನನ್ನನ್ನ ನಿಬ್ಬೆರಗಾಗಿಸಿತು. ಯಾವುದೇ ಕೋಚಿಂಗ್ ಇಲ್ಲದೇ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 97 ಅಂಕ ಗಳಿಸಿ ತಾಲೂಕಿನಲ್ಲಿ ಹೆಚ್ಚಿನ ಸ್ಥಾನ ಪಡೆದ.ಅದೂ ಸರಕಾರಿ ಪಿಯು ಕಾಲೇಜನಲ್ಲಿ ಓದಿ ಅನ್ನೋದು ಬಹು ಮುಖ್ಯ ಎಲ್ಲಕ್ಕಿಂತ ಮುಖ್ಯವಾಗಿ ಹೊಸ ಕೇರಿಯಿಂದ ಸುರೇಬಾನಕ್ಕೆ (6km) ಬಸ್ಸಿನ ಸೌಕರ್ಯವಿಲ್ಲ ಆತ ಹೈಸ್ಕೂಲ ಮತ್ತು ಕಾಲೇಜ ನ್ನು ಸೈಕಲ್ ತುಳಿದೇ ಕಲಿತ.

ಆತನ ಬಗ್ಗೆ ಬಹಳ ಹೆಮ್ಮೆ ಎನಿಸುವುದು ಈ ಕಾರಣಕ್ಕೆ ಮುಂದೆ B.Sc ಅಗ್ರಿ ಮಾಡಿಕೊಂಡು ಇಂದು ಸರಕಾರದಿಂದ ಉಚಿತ IAS ತರಬೇತಿಗೆ ಆಯ್ಕೆಗೊಂಡು ದೆಹಲಿಯ ಪ್ರತಿಷ್ಠಿತ IAS ತರಬೇತಿ ಕೇಂದ್ರವಾದ ಶ್ರೀರಾಮ್ ಕೋಚಿಂಗ್ ಸೆಂಟರ್ ನಲ್ಲಿ IAS ತರಬೇತಿ ಪಡೆಯುತ್ತಿದ್ದಾನೆ.

ಆತನನ್ನು ಭಾವಿ IAS OFFICER ಎಂದೇ ಕರೆಯಲಾಗುತ್ತದೆ ಅವನು ಅದನ್ನು ಬಿಡೋಲ್ಲ ಆಗೇ ಆಗುತ್ತಾನೆ. ಸದ್ಯಕ್ಕೆ PSI ಆಗಿ ಆಯ್ಕೆ ಆಗಿದ್ದಾನೆ. ಪ್ರವೀಣ ಎಲ್ಲಾ “ಇಲ್ಲ”ಗಳ ಮಧ್ಯೆ ಬೆಳೆದ ಹುಡುಗ.ಒಬ್ಬ ರೈತನ ಮಗನ ಸಾಧನೆ ಈಗಿನ ಎಲ್ಲ ಯುವಕರಿಗೆ ಮಾದರಿ ಎಂದರೆ ತಪ್ಪಾಗಲಾರದು.ಶುಭಾಶಯಗಳು ಪ್ರವೀಣ
I am so proud of you IAS ಕನಸು ನನಸಾಗಲಿ. All the best.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News Join The Telegram Join The WhatsApp

 

 

Suddi Sante Desk

Leave a Reply