This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಧಾರವಾಡದ JSS ಶಿಕ್ಷಣ ಸಂಸ್ಥೆ – ವಿದ್ಯಾಕಾಶಿಗೆ ಮುಕುಟದಂತಿರುವ ಸಂಸ್ಥೆ ನಡೆದು ಬಂದ ದಾರಿ ಕುರಿತು ಒಂದು ವಿಶೇಷ ಸ್ಟೋರಿ…..ಸಂಭ್ರಮದಲ್ಲಿ ನಡೆಯಲಿವೆ ಹಲವಾರು ಕಾರ್ಯಕ್ರಮಗಳು…..


ಧಾರವಾಡ

ವಿದ್ಯಾಕಾಶಿ ಧಾರವಾಡ ಗೆ ಮುಕುಟುದಂತಿದೆ ಜೆಎಸ್ ಎಸ್ ಶಿಕ್ಷಣ ಸಂಸ್ಥೆ. ಅತ್ಯಂತ ಹಳೆಯ ದಾದ ಈ ಒಂದು ಸಂಸ್ಥೆ ಈಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ರಾಂತಿ ಯನ್ನು ಮಾಡಿರುವ ಈ ಒಂದು ಮಹಾನ್ ಸಂಸ್ಥೆ ನಡೆದು ಬಂದ ದಾರಿ ಬಲು ರೋಚಕ.

ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ ಜ್ಞಾನದ ಪ್ರಸಾರದಂತಹ ಪವಿತ್ರ ಕಾರ್ಯದಲ್ಲಿ ತೊಡಗಿದವರೆಲ್ಲ ಪೂಜಾರ್ಹರಾಗುತ್ತಾರೆ. ಇಂಥ ವರಲ್ಲಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಗ್ರ ಗಣ್ಯರು.

ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕಾಣಿಕೆ ಅವಿಸ್ಮರಣೀಯವಾದು.ದಿವಂಗತ ಹುಕ್ಕೇರಿಕರ ರಾಮರಾಯರಿಂದ 1944 ರಲ್ಲಿ ಸ್ಥಾಪಿಸಲ್ಪಟ್ಟ ಧಾರವಾಡದ ಜೆ.ಎಸ್.ಎಸ್. (ಜನತಾ ಶಿಕ್ಷಣ ಸಮಿತಿ) ಶಿಕ್ಷಣ ಸಂಸ್ಥೆ, ಮನುಷ್ಯನ ಜೀವನದಲ್ಲಿ ಏಳು-ಬೀಳುಗಳಿರುವಂತೆ ಸಂಸ್ಥೆಯ ಚರಿತ್ರೆಯಲ್ಲಿ ಏಳು-ಬೀಳುಗಳು ಉಂಟಾದವು.

ಜೆ.ಎಸ್.ಎಸ್. ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಈಡಾಗಿ 1973 ಅಕ್ಟೋಬರ್ 18 ರಂದು ಪೂಜ್ಯ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಹಾಗೂ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯಾಧ್ಯಕ್ಷತೆಯಲ್ಲಿ,ಉದಯಿಸಿದ ನೂತನ ಆಡಳಿತ ಮಂಡಳಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು.

ಬಹುಶಃ ಆ ದಿನವೇ ಉತ್ತರ ಕರ್ನಾಟಕದ ಶೈಕ್ಷಣಿಕ ನಕಾಶೆ ಬದಲಾಯಿತು ಎಂದರೆ ತಪ್ಪಾಗಲಾರದು.1973 ರಲ್ಲಿ 6-7 ಸಂಸ್ಥೆ ಹಾಗೂ 380 ವಿದ್ಯಾರ್ಥಿಗಳಿದ್ದ ಸಂಸ್ಥೆಗಳನ್ನು ಪೂಜ್ಯರು ವಹಿಸಿಕೊಂಡಾಗ ಸಂಸ್ಥೆಯ ಮೇಲಿದ್ದ ಆರ್ಥಿಕ ಸಾಲ, ಶಿಕ್ಷಕರಿಗೆ ನೀಡಬೇಕಾದ ಸಂಬಳ ಮುಂತಾದ ಸಮಸ್ಯೆಗಳನ್ನು ನಿಭಾಯಿಸುತ್ತ ನಡೆದು ಹಂತ ಹಂತವಾಗಿ ಆರ್ಥಿಕ ಚೇತರಿಕೆ ಕಂಡ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ನೂತನ ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕುತ್ತ ಹೋಯಿತು.

ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ನೈತಿಕ ಹಾಗೂ ಸಂಸ್ಕಾರಭರಿತ ಶ್ರೇಷ್ಠ ಮಟ್ಟದ ಶಿಕ್ಷಣ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಾ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಆದರ್ಶವಾಗಿ ರೂಪಿತವಾಗುವಂತೆ ನೋಡಿಕೊಂಡಿರುವುದು ವಿಶೇಷ.

ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಧಾರ್ಮಿಕ ಕೇಂದ್ರವಾದ ಮುರಘಾಮಠ ಪೂಜ್ಯರ ಬೆನ್ನಿಗೆ ನಿಂತದ್ದನ್ನು ನಾವು ಮರೆಯುವಂತಿಲ್ಲ.ಜನರ ಬೇಡಿಕೆಯಂತೆ ನೂತನ ವಿದ್ಯಾಸಂಸ್ಥೆಗಳನ್ನು ಪೂಜ್ಯರು ಸ್ಥಾಪಿಸುತ್ತಾ ಸಾಗಿದರು.ನಂತರ ದಿನಗ ಳಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು ಧಾರವಾ ಡಕ್ಕೆ ಆಗಮಿಸಿ ಆರೋಗ್ಯ ಹಾಗೂ ಉನ್ನತ ಶಿಕ್ಷಣದಲ್ಲಿ ತಮ್ಮದೇ ಛಾಪು ಮೂಡಿಸಿರು ವುದು ಹೆಮ್ಮೆಯ ಸಂಗತಿ.

ಹೆಸರಿಗೆ ತಕ್ಕಂತೆ ಇರುವ ವಿದ್ಯಾಗಿರಿಯಲ್ಲಿ ಇದೀಗ ಕೆ.ಜಿ ಯಿಂದ ಪಿ.ಜಿ ಯವರೆಗೆ ಹಾಗೂ ಪಿ.ಹೆಚ್.ಡಿ ವಿದ್ಯಾಭ್ಯಾಸದವರೆಗೆ ಅವಕಾಶವಿದೆ. ಕಳೆದ 50 ವರ್ಷಗಳಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಹೆಸ ರಾಂತ ರಾಜಕಾರಣಿಗಳು,ನ್ಯಾಯಾಧೀಶರು, ಸಮಾಜ ಸೇವಕರು, ವಿಜ್ಞಾನಿಗಳನ್ನು ಶ್ರೇಷ್ಠ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ.

ಜನತಾ ಶಿಕ್ಷಣ ಸಮಿತಿ ಇದೀಗ ಧಾರವಾಡದ ವಿದ್ಯಾಗಿರಿಯ ಕ್ಯಾಂಪಸ್ ಸೇರಿದಂತೆ ಹುಬ್ಬಳ್ಳಿ ಯೂ ಒಳಗೊಂಡಂತೆ ಒಟ್ಟು 4 ಕ್ಯಾಂಪಸ್‍ ನಲ್ಲಿ 22 ವಿದ್ಯಾ ಸಂಸ್ಥೆಗಳಲ್ಲಿ 22,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಒಟ್ಟು 1200 ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಕಾರ್ಯ ನಿರ್ವಹಿ ಸುತ್ತಿದ್ದಾರೆ.

ಪೂರ್ವ ಪ್ರಾಥಮಿಕ, ಪ್ರಾಥಮಿಕ, ಫ್ರೌಡಶಿಕ್ಷಣ, ಸಿ.ಬಿ.ಎಸ್.ಇ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಡಿಪ್ಲೋಮಾ ಕಾಲೇಜು, ಐ.ಟಿ.ಐ ಕಾಲೇಜು, ಪದವಿ ಕಾಲೇಜುಗಳು, ಕಾನೂನು ಮಹಾವಿದ್ಯಾಲಯ, ಬಿ.ಎಡ್ ಕಾಲೇಜು, ಎಂ.ಬಿ.ಎ ಕಾಲೇಜು, ಡಾ. ಡಿ. ವೀರೇಂದ್ರ ಹೆಗ್ಗಡೆ ಜನಸಂಖ್ಯಾ ಸಂಶೋಧನಾ ಹಾಗೂ ಆರ್ಥಿಕ ಸಂಶೋಧನಾ ಕೇಂದ್ರ ಅಲ್ಲದೇ ಸ್ನಾತಕೋತ್ತರ ಅಧ್ಯಯನ ಕೇಂದ್ರ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಅದೀನದಲ್ಲಿ ನಡೆಯುತ್ತಿವೆ.

ಕೋವಿಡ್ ಸಮಯದಲ್ಲಿ ಎಲ್ಲ ಸಿಬ್ಬಂದಿಗೆ ನಿಯಮಿತ ಸಂಬಳದೊಂದಿಗೆ ಆ ವರ್ಷ ಇನ್‍ಕ್ರೀ ಮೆಂಟ್ ಸಹ ನೀಡಿರುವುದು ಪೂಜ್ಯರಿಗೆ ಸಿಬ್ಬಂದಿ ಮೇಲಿರುವ ಕಳಕಳಿಗೆ ಸಾಕ್ಷೀ ಎಂದು ಹೇಳಬಹುದು

ಜನತಾ ಶಿಕ್ಷಣ ಸಮಿತಿ ಕೇವಲ ವಿದ್ಯಾರ್ಜನೆಗೆ ಸೀಮಿತವಾಗದೇ ತನ್ನ ವಿವಿಧ ಅಂಗ ಸಂಸ್ಥೆಗಳ ಮುಖಾಂತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರ, ಅನಕ್ಷರಸ್ಥರನ್ನು, ನಿರುದ್ಯೋ ಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರು ವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಸಮಾಜಮುಖಿ ಕಾರ್ಯಗಳು
ಮಹಿಳೆಯರಿಗಾಗಿ ಕ್ಯಾಂಪಸ್ ಸಂದರ್ಶನ.
ದಿವ್ಯಾಂಗರಿಗಾಗಿ ಕ್ಯಾಂಪಸ್ ಸಂದರ್ಶನ.
ಪ್ರತಿವರ್ಷ ಮೂರು ಬಾರಿ ರಕ್ತದಾನ ಶಿಬಿರ.
ರಾಜ್ಯಮಟ್ಟದ ಉದ್ಯೋಗಮೇಳಗಳ ಆಯೋಜನೆ.ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ರ್ತ ಚಿಕಿತ್ಸೆ ಶಿಬಿರ ಉಚಿತ ದಂತ ತಪಾಸಣೆ ಶಿಬಿರ

ನಿರುದ್ಯೋಗ ಯುವಕರಿಗೆ ವೃತ್ತಿ ತರಬೇತಿ ಕೋರ್ಸುಗಳಾದ ಅಟೋಮೊಬೈಲ್, ಇಲೆಕ್ಟ್ರೀಶಿ ಯನ್, ಫಿಟ್ಟರ್, ವೆಲ್ಡರ್, ಕಂಪ್ಯೂಟರ್ ಹಾಗೂ ಸಂದರ್ಶನ ಕೌಶಲ್ಯ ಬೆಳೆಸುವ ನಿಟ್ಟಿನಲ್ಲಿ ಸ್ಕಿಲ್ ಟ್ರೈನಿಂಗ್ ಗಳ ಆಯೋಜನೆ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರ ಮಹಿಳೆ ಯರಿಗೆ ಸ್ವ-ಉದ್ಯೋಗಕ್ಕಾಗಿ ಫ್ಯಾಶನ್ ಡಿಸೈನಿಂಗ್, ಕಂಪ್ಯೂಟರ್, ಫಿನಾಯಿಲ್ ತಯಾರಿಕೆ ತರಬೇತಿ.ಹಳ್ಳಿಯ ಮಹಿಳೆಯರಿಗಾಗಿ ಉಚಿತ ಹೊಲಿಗೆ ಹಾಗೂ ಕಸೂತಿ ತರಬೇತಿ ಶಿಬಿರ

ಸೈನ್ಯಕ್ಕೆ ಸೇರುವ ಯುವಕರಿಗೆ ವಿಶೇಷ ತರಬೇತಿ
ಕಾನೂನು ಅರಿವು ಶಿಬಿರ ವಿದ್ಯಾಗಿರಿಯ ಶಿಕ್ಷಣ ಸಂಸ್ಥೆಗಳಿಂದ ಸುತ್ತ ಮುತ್ತಲಿನ ನೂರಾರು ಕುಟುಂಬಗಳ ಜನ ಹಾಸ್ಟೇಲ್, ಮೆಸ್, ಸ್ಟೇಶನರಿ ಅಂಗಡಿ ಮುಂತಾದ ವೃತ್ತಿಗಳನ್ನು ನಡೆಸುವದರ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಂಡು ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.

ನೈತಿಕ ನೆಲೆಗಟ್ಟಿನಲ್ಲಿ ಸಂಸ್ಕಾರಯುತ ಶಿಕ್ಷಣವೇ ಜೆ.ಎಸ್.ಎಸ್ ನ ಹೆಗ್ಗುರುತು.ಕಳೆದ 50 ವರ್ಷಗ ಳಲ್ಲಿ ಶೈಕ್ಷಣಿಕವಾಗಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಬೃಹದಾಕಾರದಲ್ಲಿ ಬೆಳೆದಿದ್ದು, ಉತ್ತರ ಕರ್ನಾಟ ಕದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ಯಾಂಪಸ್ ಸಂದರ್ಶನ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆಗಳ ಮೂಲಕ ಬಾರಿ ಬದಲಾ ವಣೆಯನ್ನು ತಂದಿದೆ.

ಪೂಜ್ಯರ ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಕೊಡುಗೆ ಧಾರವಾಡ ನಗರವನ್ನು ಶ್ರೀಮಂತಗೊಳಿಸಿದೆ.
ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದ ರ್ಶನ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಯವರ ಆಶೀರ್ವಾದ ದಣಿವರಿಯದೇ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಳೆದ 49 ವರ್ಷಗಳಿಂದ ಪಣ ತೊಟ್ಟಿದ್ದ ಡಾ. ನ. ವಜ್ರಕುಮಾರರ ಕರ್ಣಧಾರತ್ವ, ನೂತನ ಕಾರ್ಯ ದರ್ಶಿಗಳಾಗಿರುವ ಡಾ. ಅಜಿತ ಪ್ರಸಾದರವರ ದೂರದೃಷ್ಟಿಯ ಫಲವಾಗಿ ಜೆ.ಎಸ್.ಎಸ್ ಇದೀಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ.

ಪೂಜ್ಯ ಹೆಗ್ಗಡೆಯವರಿಗೆ ಧರ್ಮಸ್ಥಳ ಧರ್ಮ ಭೂಮಿಯಾದರೆ, ಧಾರವಾಡ ಅವರ ಕರ್ಮ ಭೂಮಿಯಾಗಿದೆ. 50 ರ ಹೊಸ್ತಿಲಲ್ಲಿರುವ ಜನತಾ ಶಿಕ್ಷಣ ಸಮಿತಿಯ ಸಾರ್ಥಕ ಶಿಕ್ಷಣ ಸೇವೆಯ ನೆನಪಿಗಾಗಿ ದಿನಾಂಕ 19 ಅಕ್ಟೋಬರ್ 2022 ರಂದು ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಜೆ.ಎಸ್.ಎಸ್ ಆವರಣದಲ್ಲಿ ಯಾವುದೇ ಪಲಾಪೇಕ್ಷೆ ಇಲ್ಲದೇ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಅಪಾರ ವೆಚ್ಚದಲ್ಲಿ ನೂತನ ಹೈಟೆಕ್ ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಐ) ನ್ನು ಪೂಜ್ಯರು ಲೋಕಾರ್ಪಣೆ ಮಾಡಿದ್ದಾರೆ. ಅತ್ಯಾಧುನಿಕ ಯಂತ್ರೋಪಕರ ಣಗಳು, ಸುಸಜ್ಜಿತ ಕಟ್ಟಡ, ನೂತನ ಶಿಕ್ಷಣದಡಿ ಯಲ್ಲಿ ಗ್ರಾಮೀಣ ಭಾಗದ ಜನತೆಗೆ ತಾಂತ್ರಿಕ ಶಿಕ್ಷಣ ದೊರೆಯಲಿ ಎಂಬ ಮಹದಾಸೆಯೊಂದಿಗೆ ಈ ಸಂಸ್ಥೆಯ ಲೋಕಾರ್ಪಣೆ ಜರುಗಿದೆ.

ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯೊಂ ದಿಗೆ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳು, ರುಡ್‍ಸೆಟ್ ಸಂಸ್ಥೆ, ಧರ್ಮಸ್ಥಳ ಗ್ರಾಮಾಭೀವೃದ್ಧಿ ತರಬೇತಿ ಸಂಸ್ಥೆಗಳು ಧಾರವಾಡಕ್ಕೆ ಆಗಮಿಸಿ, ಆರೋಗ್ಯ, ಉನ್ನತ ಶಿಕ್ಷಣ, ಸ್ವಯಂ ಉದ್ಯೋಗ, ಮಧ್ಯವರ್ಜನ ಶಿಬಿರ, ಕೃಷಿ ಮೇಳ, ಪ್ರಕೃತಿ ಚಿಕಿತ್ಸೆ, ಸಿರಿಧಾನ್ಯಗಳ ಬಳಕೆ, ದೇವಾಲಯಗಳ ಜೀರ್ಣೊ ದ್ಧಾರ, ರುದ್ರಭೂಮಿಗಳ ನವೀಕರಣ, ವಾತ್ಸಲ್ಯ ಕಾರ್ಯಕ್ರಮದ ಮೂಲಕ ಏಕಾಂಗಿ ವೃದ್ಧರಿಗೆ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟವರು ಪೂಜ್ಯ ಡಾ. ಡಿ. ವೀರೆಂದ್ರ ಹೆಗ್ಗಡೆಯವರು.

ಶಿಕ್ಷಣ ಸಂಸ್ಥೆಗಳನ್ನು ಕಟ್ಟುವದೆಂದರೆ, ದೇವಸ್ಥಾನ ಗಳನ್ನು ನಿರ್ಮಿಸಿದ್ದಷ್ಟೆ ಸಂತೋಷವಾಗುತ್ತದೆ. ಎನ್ನುವ ಪೂಜ್ಯ ಹೆಗ್ಗಡೆಯಯವರ ಮನದಾಳದ ಮಾತು. ನನ್ನದೇನೂ ಇಲ್ಲ ಎಲ್ಲವೂ ಪೂಜ್ಯರ ಹಾಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀ ರ್ವಾದ ನಾನು ನಿಮಿತ್ತ ಮಾತ್ರ ಎನ್ನುತ್ತ ಈ ಸಂಸ್ಥೆಗಳನ್ನು ಬೆಳೆಸಿದ ದಿವಂಗತ ಡಾ. ನ. ವಜ್ರಕುಮಾರವರ ವಿನಯದ ಮಾತುಗಳು ಈ ಶಿಕ್ಷಣ ಸಂಸ್ಥೆಗೆ ಆಧುನಿಕ ಸ್ಪರ್ಶ ನೀಡಿ 24*7 ಸಂಸ್ಥೆಗೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿರುವ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರ ದೂರದೃಷ್ಟಿಯೇ ಜೆ.ಎಸ್.ಎಸ್ ಇಷ್ಟೊಂದು ಉತ್ತುಂಗಕ್ಕೆ ಏರಿದೆ ಎಂದರೆ ಅತಿಶೋಕ್ತಿಯಾ ಗಲಾರದು

ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ವರ್ಷ ಹಾಗೂ ಪೂಜ್ಯ ಖಾವಂದರ 75ನೇ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಲಾ ಗುತ್ತಿದೆ. ಈ ಸಂದರ್ಭದಲ್ಲಿ 75 ಸಮಾಜಮುಖಿ ಕಾಯಕ್ರಮಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಪೂಜ್ಯರ ಸಹಾಯ ಮುಟ್ಟುವಂತೆ ಜನತಾ ಶಿಕ್ಷಣ ಸಮಿತಿಯ ವಿವಿಧ ಅಂಗ ಸಂಸ್ಥೆ ಗಳು ಹಮ್ಮಿಕೊಂಡಿವೆ.

50 ವರ್ಷಗಳ ಸುವರ್ಣ ಸಂಭ್ರಮದ ನಿಮಿತ್ತ ಜೆ.ಎಸ್.ಎಸ್ ಆಯೋಜಿಸಲಿರುವ ಕಾರ್ಯಕ್ರಮಗಳು ಅಕ್ಟೋಬರ್ ಅಥವಾ ನವ್ಹೆಂಬರ್‍ನಲ್ಲಿ ಬೃಹತ ಸಮಾರಂಭ
50 ವರ್ಷಗಳ ನೆನಪಿಗಾಗಿ ವಿದ್ಯಾಗಿರಿ ಕ್ಯಾಂಪಸ್‍ ನಲ್ಲಿ 500 ಸಸಿಗಳನ್ನು ನೆಡುವುದು.

ಪ್ರತಿವರ್ಷ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 50 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ.
ಸುಸಜ್ಜಿತ 400 ಮೀಟರ್ ಟ್ರ್ಯಾಕಿನ ಅಂತರಾಷ್ಟ್ರೀ ಯ ಆಟದ ಮೈದಾನ ನಿರ್ಮಾಣ.50 ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ.

ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತರಬೇತಿ.ಸರಕಾರಿ ಶಾಲಾ ಶಿಕ್ಷಕರಿಗೆ ನುರಿತ ತರಬೇತುದಾರರಿಂದ ಉಚಿತ ಪುನಶ್ಚೇತನ ಕಾರ್ಯಾಗಾರ.ಸರಕಾರಿ ಶಾಲಾ SSLC ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣಾ ಕಾರ್ಯಾಗಾರ ಹೀಗೆ ಹಲವಾರು ಕಾರ್ಯ ಗಳನ್ನು ಹಮ್ಮಿಕೊಳ್ಳಲಾಗಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Suddi Sante Desk

Leave a Reply