ವಿಜಯಪುರ –
ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಎಂ ಪಿ ಎಸ್ ಹಿರೇಮಸಳಿ ವಿದ್ಯಾರ್ಥಿ ಗಳ ಸಾಧನೆ…..
ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ವಿವಿಧ ವಿಭಾಗದಲ್ಲಿ ಭಾಗವಹಿಸಿ ಸಾಧನೆ ಮಾಡಿ ದ್ದಾರೆ.ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ ಸ್ಪರ್ಧೆ ಯಲ್ಲಿ ಹಿರಿಯರ ವಿಭಾಗದಲ್ಲಿ ಏಳನೇ ವರ್ಗದ ವಿದ್ಯಾರ್ಥಿನಿ ಪೂಜಾ ಕ್ಷತ್ರಿ, ಕಿರಿಯರ ವಿಭಾಗದಲ್ಲಿ 4 ನೇ ವರ್ಗದ ಸಿಂಚನಾ ಪಟ್ಟಣಶೆಟ್ಟಿ, ಛದ್ಮವೇ ಶದಲ್ಲಿ ಏಳನೇ ವರ್ಗದ ವಿದ್ಯಾರ್ಥಿ ವಿಶ್ವನಾಥ ಕನ್ನೊಳ್ಳಿ,ಧಾರ್ಮಿಕ ಪಠಣ (ಅರೆಬೇಕ್)ದಲ್ಲಿ ಅಪ್ಸನಾ ಕೊರಬು ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ತಂದಿದ್ದಾರೆ.
ಕಿರಿಯರ ವಿಭಾಗದಲ್ಲಿ ಅತಿಫಾ ಸೌದಾಗರ್, ಕ್ಲೇ ಮಾಡಲಿಂಗ್ ವಿಭಾಗದಲ್ಲಿ ಶಿವಶಂಕರ ತಳವಾರ್ ಇವರೆಲ್ಲರೂ ದ್ವಿತೀಯ ಸ್ಥಾನ ಪಡೆದು ಹಿರೇಮಸಳಿ ಗ್ರಾಮದ ಮತ್ತು ಶಾಲೆಯ ಹೆಸರನ್ನು ತಂದಿದ್ದಾರೆ. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪೀರಪ್ಪ ಭಾವಿಕಟ್ಟಿ ಹಾಗೂ ಎಲ್ಲಾ ಸರ್ವ ಸದಸ್ಯರು ಮತ್ತು ಶಾಲಾ ಮುಖ್ಯ ಗುರುಗಳಾದ ಆನಂದ ಕೆಂಭಾವಿ, ಸಹ ಶಿಕ್ಷಕರಾದ ಪ್ರಕಾಶ ಹೋಳಿನ್, ಬಿ ಸಿ ಸಂಗಮೇಶ, ಸಿ ಎಸ್ ಬೇಡಗೆ, ಬಿ ಕೆ ಪಟ್ಟಣ ಶೆಟ್ಟಿ, ಆರ್ ಟಿ ತಳವಾರ, ಡಿ ಜೆ ಮಾದನಶೆಟ್ಟಿ, ಪಿ ಆರ್ ಪಾಂಡ್ರಿ,
ಬಿ ಜಿ ಅಡಳ್ಳಿ, ಡಿ ಎನ್ ಹರಿಜನ್, ಬಾಳು ಚವ್ಹಾಣ, ಮಹಾದೇವಿ ಗಿಣ್ಣಿ, ಪ್ರತಿಭಾ ಗಬಸಾ ವಳಗಿ, ಪ್ರೇಮಾ ಯರನಾಳ ಹಾಗೂ ನಮ್ಮ ಶಾಲೆಯ ಅತಿಥಿ ಶಿಕ್ಷಕರಾದ ರಫೀಕ್ ಗೌರ್, ಎಚ್ ಆರ್ ನಾಟಿಕಾರ ಎಲ್ಕರೂ ಅಭಿನಂದಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವಂ ತಾಗಲಿ ಎಂದು ಎಲ್ಕರೂ ಶುಭ ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..